ಸಮಾಜದಲ್ಲಿ ಶೇ.80 ರಷ್ಟು ಜನ ಭ್ರಷ್ಟಾಚಾರಿಗಳು ಹಾಗು ಮೊಸಗಾರರೇ ತುಂಬಿದ್ದಾರೆ! ನಿವೃತ್ತ ನ್ಯಾಯಾಧೀಶರ ಆತಂಕ.

ಕಿತ್ತೂರು ವಿಜಯ ಸುದ್ದಿ.ತುಮಕೂರು:ಇಂದು ಸಮಾಜದಲ್ಲಿ ಕಂಟಕಗಳು ಹೆಚ್ಚುತ್ತಿವೆ.ಶೇ

20 ರಷ್ಟು ಜನ ಪ್ರಾಮಾಣಿಕರಿದ್ದರೆ, ಶೇ 80 ರಷ್ಟು

ಜನ ಭ್ರಷ್ಟಾಚಾರಿಗಳು, ಸ್ವಜನ ಪಕ್ಷಪಾತಿಗಳು,

ಮೋಸಗಾರರೇ ತುಂಬಿ ತುಳುಕುತಿದ್ದಾರೆ. ಇದೇ

ರೀತಿಯಲ್ಲಿ ಮು೦ದುವರೆದರೆ ನಮ್ಮದೇಶಕ್ಕೆ

ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿ ಮುರಿದು

ಬೀಳಲಿದೆ ಎಂದು ಕರ್ನಾಟಕ ಹೈಕೋರ್ಟಿನ ನಿವೃತ್ತ

ನ್ಯಾಯಾಧೀಶರು ಹಾಗೂ ಉಪಲೋಕಾಯುಕ್ತ

ಕೆ.ಎಸ್.ಫಣೀಂದ್ರ ಎಚ್ಚರಿಕೆ ನೀಡಿದ್ದಾರೆ.

ನಗರದ ಏದ್ಯೋದಯ ಕಾನೂನು ಕಾಲೇಜಿನಲ್ಲಿ

ನಡೆದ ವಾರ್ಷಿಕ ಪತ್ಯೇತರ ಚಟುವಟಿಕೆಗಳ

ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಸ್ವಾತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರ

ನಂತರದಲ್ಲಿ ಈ ದೇಶವನ್ನು

ಕಟ್ಟಿದವರು ವಕೀಲರು.

ಗಾಂಧಿ, ನೆಹರು, ಸರದಾರ್‌ವಲ್ಲಭಾಯಿ ಪಟೇಲ್

ಇವರು ದೇಶದ ಆಗುಹೋಗುಗಳನ್ನು ಅರ್ಥ

ಮಾಡಿಕೊಂಡು, ಎಲ್ಲರನ್ನು ಒಳಗೊಂಡ ಸ್ವಾತಂತ್ರ

ನಂತರದ ಭಾರತಕ್ಕೆ ಭದ್ರ ಬುನಾದಿ ಹಾಕಿದರು. ನೀವು

ಯಾವುದೇ ವೃತ್ತಿ ಕೈಗೊಳ್ಳಿ, ಅದರಲ್ಲಿ ಪ್ರಾಮಾಣಿಕತೆ,

ಜೊತೆಗೆ ಮಾನವೀಯ ಮೌಲ್ಯಗಳನ್ನು

ಅಳವಡಿಸಿಕೊಂಡರೆ ನೀವು ಎತ್ತರಕ್ಕೆ ಬೆಳೆಯಲು

ಸಾಧ್ಯವಾಗುತ್ತದೆ, ಜೀವನದ ಪ್ರತಿ ಹಂತದಲ್ಲಿಯೂ

ಸಮಾಜ ನಮಗೆ ಪಾಠ ಕಲಿಸುತ್ತದೆ. ಒಳ್ಳೆಯದನ್ನು

ನಮ್ಮೊಳಗೆ ತೆಗೆದುಕೊಂಡು ಮುನ್ನಡೆದಾಗ ಮಾತ್ರ

ಎಲ್ಲರಿಂದಲು ಮಾನ್ಯತೆಗೆ ಒಳಗಾಗಲು ಸಾಧ್ಯ.

ನಾವು ಮೊದಲು ಎಲ್ಲವನ್ನು ಗ್ರಹಿಸುವ ಮತ್ತು

ಅದನ್ನು ಅರ್ಥೈಸಿ ಕೊಳ್ಳುವುದನ್ನು ಕಲಿಯಬೇಕು.

ಆಗ ಮಾತ್ರ ಸಮಾಜವನ್ನು ಸಮರ್ಥವಾಗಿ

ಎದುರಿಸಲು ಸಾಧ್ಯವೆಂದು ನುಡಿದರು.

 :ವರದಿಗಾರರು ರಾಜಶೇಖರ್ ಕೋಟಿ ಚೆನ್ನಮ್ಮನ ಕಿತ್ತೂರು 

 

Post a Comment

0 Comments