Belagavi ಕಿತ್ತೂರು ವಿಜಯ ಸುದ್ದಿ.ಆದಾಯ ಹೆಚ್ಚಳ: ಬೆಳಗಾವಿ ವಿಭಾಗದ ಸಾರಿಗೆ ಸಂಸ್ಥೆ‌ ಅಧಿಕಾರಿಗಳಿಗೆ ಪ್ರಶಂಸಾ ಪತ್ರ

ಕಿತ್ತೂರು ವಿಜಯ ಸುದ್ದಿ.ಆದಾಯ ಹೆಚ್ಚಳ: ಬೆಳಗಾವಿ ವಿಭಾಗದ ಸಾರಿಗೆ ಸಂಸ್ಥೆ‌ ಅಧಿಕಾರಿಗಳಿಗೆ ಪ್ರಶಂಸಾ ಪತ್ರ
ಬೆಳಗಾವಿ, ಅ.16(ಕರ್ನಾಟಕ ವಾರ್ತೆ): ಹೊಸದಾಗಿ ಇ-ಮಳಿಗೆ ಆನ್ ಲೈನ್ ತಂತ್ರಾಂಶ ಬಳಸಿಕೊಂಡು ವಾಣಿಜ್ಯ ಆದಾಯವನ್ನು ಹೆಚ್ಚಿಸಿದ ಬೆಳಗಾವಿ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಕೆ.ಎಲ್. ಗುಡೆನ್ನವರ ಹಾಗೂ ವಿಭಾಗದ ಸಾರಿಗೆ ಅಧಿಕಾರಿ ದೇವಕ್ಕ ನಾಯಕ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ.
ವಾಕರಸಾ ಸಂಸ್ಥೆ ಬೆಳಗಾವಿ‌ ವಿಭಾಗದ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಪರವಾನಿಗೆದಾರರಿಂದ ಸೆಪ್ಟೆಂಬರ್-2025 ರ ಮಾಹೆಯಲ್ಲಿ ನೂತನವಾಗಿ ಪರಿಚಯಿಸಿರುವ e-Malige online ತಂತ್ರಾಂಶದ ಮೂಲ ಹೆಚ್ಚಿನ ವಾಣಿಜ್ಯ ಆದಾಯವನ್ನು ಭರಿಸಿಕೊಳ್ಳುವ ಗುರಿ ಸಾಧನೆಗೈದಿರುತ್ತಾರೆ.
ಇದನ್ನು ಪರಿಗಣಿಸಿ ಇಬ್ಬರು ಅಧಿಕಾರಿಗಳಿಗೆ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ. ಅವರು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದರು.

Post a Comment

0 Comments