ಕಿತ್ತೂರು ವಿಜಯ ಸುದ್ದಿ.*ನೂತನ ಅಧ್ಯಕ್ಷರಾಗಿ DK ಸುರೇಶ್​ ಆಯ್ಕೆ

 

ಕಿತ್ತೂರು ವಿಜಯ ಸುದ್ದಿ.*ನೂತನ ಅಧ್ಯಕ್ಷರಾಗಿ DK ಸುರೇಶ್​ ಆಯ್ಕೆ* 

ಬೆಂಗಳೂರು: ಬಮೂಲ್ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಡಿ.ಕೆ.ಸುರೇಶ್ ಆಯ್ಕೆ ಆಗಿದ್ದಾರೆ.

ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ವಿವಿಧ ಮುಖಂಡರು, ಹಿತೈಷಿಗಳು, ಸಾರ್ವಜನಿಕರನ್ನು ಭೇಟಿ ಮಾಡಿದ, ಅವರು ನಾಮಪತ್ರ ಸಲ್ಲಿಸುವ ವೇಳೆ ಹಾಗೂ ಗೆಲುವಿನ ಸಂಭ್ರಮಾಚರಣೆಯಲ್ಲಿ ಅಸಂಖ್ಯಾತ ಜನರಿಗೆ ಧನ್ಯವಾದ ತಿಳಿಸಿ ಮಾತನಾಡಿ ನನ್ನ ಗೆಲುವನ್ನು ನಿಮ್ಮ ಗೆಲುವಿನಂತೆ ಸಂಭ್ರಮಿಸಿದ ಸರ್ವರಿಗೂ ಹೃದಯಾಂತರಾಳದ ಧನ್ಯವಾದಗಳು, ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಇದಕ್ಕೆ ಕಾರಣೀಭೂತರಾದ ಸರ್ವರಿಗೂ ಧನ್ಯವಾದಗಳು. ಇದು ರೈತರಿಗೆ ಸಂದ ವಿಜಯ. ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವಾರು ಕಾರ್ಯಗಳನ್ನು ಮುಂದೆಯೂ ಮಾಡಲಿದ್ದೇನೆ. ಈ ಹೊಸ ಜವಾಬ್ದಾರಿ ಹಾಗೂ ಪಯಣಕ್ಕೆ ಎಲ್ಲರ ಸಹಕಾರವಿರಲಿ ಎಂದರು. 

Post a Comment

0 Comments