ಕಿತ್ತೂರು ವಿಜಯ ಸುದ್ದಿ. ಬೆಂಗಳೂರು. ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ಗ್ರಾಮಸಹಾಯಕರ ಸಂಘ ಬೆಂಗಳೂರು ಇವರ ನೇತ್ರತ್ವದಲ್ಲಿ ಇಂದು ಬೆಂಗಳೂರಿನ ಪ್ರಿಡಂ ಪಾರ್ಕದಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಿಂದ ಗ್ರಾಮಸಹಾಯಕರು ಅನಿರ್ದಾಷ್ಟವಧಿ ಮುಷ್ಕರದಲ್ಲಿ ಪಾಲ್ಗೊಂಡಿದ್ದು
ಕಿತ್ತೂರುವಿಜಯಸುದ್ದಿ.ಬೆಂಗಳೂರು. ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ಗ್ರಾಮಸಹಾಯಕರ ಸಂಘ ಬೆಂಗಳೂರು ಇವರ ನೇತ್ರತ್ವದಲ್ಲಿ ಇಂದು ಬೆಂಗಳೂರಿನ ಪ್ರಿಡಂ ಪಾರ್ಕದಲ್ಲಿ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಿಂದ ಗ್ರಾಮಸಹಾಯಕರು ಅನಿರ್ದಾಷ್ಟವಧಿ ಮುಷ್ಕರದಲ್ಲಿ ಪಾಲ್ಗೊಂಡಿದ್ದು ಗ್ರಾಮಸಹಾಯಕರ ಬಹುದಿನದ ಬೇಡಿಕೆಯಾದ ಗ್ರಾಮಸಹಾಯಕ ಹುದ್ದೆಯನ್ನು ಡಿ ಗ್ರುಫ್ ನೌಕರರನ್ನಾಗಿ ಪರಿಗಣಿಸಬೇಕು ಮತ್ತು ಇನ್ನಿತರ ಬೇಡಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿ ಮುಷ್ಕರ ಕೈಗೊಂಡಿರುತ್ತಾರೆ. ಈ ಮುಷ್ಕರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು ಆರೇಳು ಸಾವಿರ ಜನ ಪಾಲ್ಗೊಂಡಿದ್ದು ಬೆಳಗಾವಿ ಜಿಲ್ಲೆಯಿಂದಲು ಅಪಾರ ಸಂಖ್ಯೆಯಲ್ಲಿ ಗ್ರಾಮಸಹಾಯಕರು ಭಾಗವಹಿಸಿರುತ್ತಾರೆ. ಚನ್ನಮ್ಮನ ಕಿತ್ತೂರ ತಾಲೂಕಿನಿಂದ ಅಧ್ಯಕ್ಷರಾದ ಶ್ರೀ ಈರಣ್ಣ ಕುಂಟಿರಪ್ಪಗೋಳ ಇವರು ಕೂಡಾ ತಮ್ಮ ತಾಲೂಕಿನಿಂದ ಗ್ರಾಮಸಹಾಯಕರೊಂದಿಗೆ ಭಾಗವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಗ್ರಾಮಸಹಾಯಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಎಚ್.ಎನ್.ದೇವರಾಜ ರವರು ತಮ್ಮಬೇಡಿಕೆಗಳ ಬಗ್ಗೆ ರಾಜ್ಯ ಸರಕಾರವನ್ನು ಒತ್ತಾಯಿಸಿ ತಮ್ಮ ಮನವಿ ಪತ್ರದಲ್ಲಿ ಸವಿಸ್ತಾರವಾಗಿ ತಿಳಿಸಿರುತ್ತಾರೆ.
0 Comments