ಕಿತ್ತೂರು ವಿಜಯ ಸುದ್ದಿ ಚೆನ್ನಮ್ಮನ ಕಿತ್ತೂರು .ಹೊಂಡಗಳಾಗಿರುವ ಕಿತ್ತೂರಿನ ರಸ್ತೆಗಳು: ಬೇಸತ್ತಿರುವ ಜನರು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


 ಕಿತ್ತೂರು ವಿಜಯ ಸುದ್ದಿ.ಹೊಂಡಗಳಾಗಿರುವ ಕಿತ್ತೂರಿನ ರಸ್ತೆಗಳು:

ಪ್ರತಿ ವರ್ಷದಂತೆ ಈ ವರ್ಷವೂ ಮಳೆಗಾಲದ ಪ್ರವೇಶದಿಂದಾಗಿ ಕಿತ್ತೂರಿನ ಬಹುತೇಕ ರಸ್ತೆಗಳು ಹೊಂಡಗಳಾಗಿ ಪರಿವರ್ತನೆಗೊಂಡಿವೆ.

ರಾಣಿ ಚೆನ್ನಮ್ಮನಿಂದ ರಾಜ್ಯಾದ್ಯಂತ ಖ್ಯಾತಿ ಹೊಂದಿದ್ದು ಇದು ಒಂದು ಉತ್ತಮ ಪ್ರವಾಸಿ ತಾಣವಾಗಿ ಇರಬೇಕಾಗಿದ್ದರೂ ಈಗಿರುವ ಪರಿಸ್ಥಿತಿ ಮಾತ್ರ ಅದಕ್ಕೆ ವಿರುದ್ಧವಾಗಿದೆ.

ಏನೇನೋ ಕಲ್ಪನೆಗಳನ್ನು ಹೊತ್ತು ಬರುವ ಪ್ರವಾಸಿಗರಿಗೆ ಇಲ್ಲಿಯ ದುಸ್ಥಿತಿ ನೋಡಿ ನಿರಾಷೆಯಾಗದೇ ಇರಲಾರದು.

ಇದು ಒಂದೋ ಎರಡೋ ರಸ್ತೆಗಳ ಚಿತ್ರಣವಲ್ಲ.ಕಿತ್ತೂರಿನ ಸಾಕಷ್ಟು ರಸ್ತೆಗಳು ಇದೇ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ.

ಈ ಕುರಿತು ಸಂಭಂಧಿಸಿದ ಅಧಿಕಾರಿಗಳನ್ನು ಕೇಳಿದಾಗ ಅವೆಲ್ಲ ಅನಧಿಕೃತ ವಸತಿ ಪ್ರದೇಶಗಳು.ನಮಗೆ ಸಂಬಂಧಿಸಿಲ್ಲ ಎಂದು ಉತ್ತರಿಸುತ್ತಾರೆ.ಆದರೆ ಇದೇ ಅನಧಿಕೃತ ಪ್ರದೇಶಗಳಲ್ಲಿ ಕಟ್ಟಿದ ಕಟ್ಟಡಗಳಿಗೆ ಎರಡು ಪಟ್ಟು ಕರ ವಸೂಲಿ ಮಾಡುವುದನ್ನು ಮಾತ್ರ ಮರೆಯುವುದಿಲ್ಲ.ಹೀಗಾಗಿ ದುಪ್ಪಟ್ಟು ಕರ ತುಂಬಿದರೂ ಯಾವುದೇ ಮೂಲ ಸೌಕರ್ಯ ಪಡೆಯದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರ ತುಂಬಿಸಿಕೊಳ್ಳುವ ಉದ್ದೇಶ,ಮೂಲ ಸೌಕರ್ಯಗಳನ್ನು ಒದಗಿಸುವುದಾಗಿದೆ.ಒಂದು ವೇಳೆ ಇಂಥ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದಿಲ್ಲವೆಂದಾದರೆ ನಮ್ಮಿಂದ ಕರ ಏಕೆ ತುಂಬಿಸಿಕೊಳ್ಳಬೇಕು? ಎಂದು ಪ್ರಶ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗು ಸ್ಥಳೀಯ ಆಡಳಿತ ಮಂಡಳಿ ಕೂಡಿಕೊಂಡು ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ನೀಡಬೇಕಾಗಿದೆ.ಇಲ್ಲದಿದ್ದರೆ ಪ್ರತಿದಿನ ಇದರಿಂದ ತೊಂದರೆ ಅನುಭವಿಸುತ್ತ ಬೇಸತ್ತಿರುವ ಜನರು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Post a Comment

0 Comments