ಕಪ್ಪತ ಜ್ಯೋತಿಯಾತ್ರೆಗೆ ಚಾಲನೆ.ಕಿತ್ತೂರು ವಿಜಯ ಸುದ್ದಿ ಕಪ್ಪತ ಜ್ಯೋತಿಯಾತ್ರೆಗೆ ಚಾಲನೆ
ಚನ್ನಮ್ಮನ ಕಿತ್ತೂರು: 'ಸಾಂಪ್ರದಾಯಿಕ ನಂದಿ ಕೃಷಿ ಪುನರುತ್ಥಾನದ ಜಾಗೃತಿಗಾಗಿ ನಂದವೇರಿ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಚನ್ನಮ್ಮನ ಕಿತ್ತೂರಿನಿಂದ ಕಪ್ಪತಗುಡ್ಡದವರೆಗೆ ನಂದಿಭೂಷಿತ ಕಪ್ಪತ ಜ್ಯೋತಿಯಾತ್ರೆಯನ್ನು ಆಯೋಜಿ ಸಲಾಗಿದೆ' ಎಂದು ಸಂಚಾಲಕ ಭಾಲಚಂದ್ರ ಜಾಬಶೆಟ್ಟಿ ತಿಳಿಸಿದರು.
ತಾಲ್ಲೂಕಿನ ನಿಚ್ಚಣಕಿ ಗ್ರಾಮದ ದಳವಾಯಿ ಅವರ ಮನೆ ಆವರಣದಲ್ಲಿ ಜ್ಯೋತಿಯಾತ್ರೆಗೆ ಸೋಮವಾರ ಚಾಲನೆ ನೀಡಿದ ಮಾತನಾಡಿದರು.
'ಕಪ್ಪತಗುಡ್ಡದ ರಕ್ಷಣೆ ಆಗಬೇಕು. ಎತ್ತುಗಳ ಮೂಲಕ ಕೃಷಿ ಕಾರ್ಯ ನೆರವೇರಿಸಬೇಕು. ಈ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು, ಶುದ್ಧ ಆಹಾರ ಧಾನ್ಯ ಉತ್ಪಾದನೆಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕು ಎಂಬುದು ಈ ಯಾತ್ರೆಯ.ಉದ್ದೇಶಗಳಲ್ಲೊಂದಾಗಿದೆ' ಎಂದರು.ಕಪ್ಪತಗುಡ್ಡದ ನಂದವೇರಿ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಾಂತ ದಳವಾಯಿ, ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ ಇದ್ದರು.
ರೈತರ ಹೋರಾಟಕ್ಕೆ ಬೆಂಬಲ ಇಲ್ಲಿಯ ತಹಶೀಲ್ದಾರ್ ಕಚೇರಿ ಎದುರು ಕುಲವಳ್ಳಿ ಭಾಗದ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.ಹಗಲು, ರಾತ್ರಿ ಹೋರಾಟ ನಡೆಸುತ್ತಿರುವ ರೈತರಿಗೆ ಶೀಘ್ರ ನ್ಯಾಯ ಕೊಡಬೇಕು ಎಂದೂ ಅವರು ಸರ್ಕಾರವನ್ನು ಆಗ್ರಹಿಸಿದರು.
0 Comments