ಕಿತ್ತೂರು ವಿಜಯ ಸುದ್ದಿ. ಕಿತ್ತೂರು ಆಡಳಿತ ಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸಲು ರಾಣಿ ಚನ್ನಮ್ಮ ನವ ಭಾರತ ಸೇನೆ ಒತ್ತಾಯ

 ಜಗದೀಶ್ ಕಡೋಲಿ. ನವ ಭಾರತ ಸೇನೆ ರಾಜ್ಯ ಸಂಚಾಲಕರು 
 ಮತ್ತು ರಾಜ್ಯ ಯುವ ಕಾರ್ಯದರ್ಶಿ ಬಸವರಾಜ ಭೀಮರಾಣಿ  

 ಕಿತ್ತೂರ ಆಡಳಿತ ಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸಲು ರಾಣಿ ಚನ್ನಮ್ಮ ನವಭಾರತ ಸೇನೆ ಒತ್ತಾಯ 

---------------------------------------------

ಚನ್ನಮ್ಮನ್ನ ಕಿತ್ತೂರು- ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಕಿತ್ತೂರಿದ ಆಗಮಿಸಿದ ಕಂದಾಯ ಇಲಾಖೆ ಸಚಿವರಾದ ಕೃಷ್ಣ ಭೈರೇಗೌಡ ಅವರಿಗೆ ಕಿತ್ತೂರ ಆಡಳಿತ ಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಿ ರಾಣಿ ಚನ್ನಮ್ಮ ನವಭಾರತ ಸೇನೆ ಮನವಿ ನೀಡಲಾಯಿತು.
ಕಿತ್ತೂರು ತಾಲೂಕು ಆಗಿ ಮಿನಿ ವಿಧಾನಸೌಧ ನಿರ್ಮಾಣ ಆಗಿದೆ ಆದರೆ ಇದೂವರೆಗೂ ಬೈಲಹೊಂಗಲದಲ್ಲಿ ಇರುವ ಕಚೇರಿಗಳನ್ನು ಇನ್ನೂ ಕಿತ್ತೂರಿಗೆ ಸ್ಥಳಾಂತರ ಆಗಿಲ್ಲ ಕಿತ್ತೂರು ತಾಲೂಕಿನ ಎಲ್ಲಾ ಗ್ರಾಮಗಳ ಕಂದಾಯ ಇಲಾಖೆಯ ದಾಖಲೆಗಳ ರೆಕಾರ್ಡ್ ಕಚೇರಿ ಸ್ಥಳಾಂತರ ಆಗಿಲ್ಲ ಅದೇ ರೀತಿ ಸರ್ವೇ ಇಲಾಖೆಯ ದಾಖಲೆಗಳ ಕಚೇರಿ ಸ್ಥಳಾಂತರ ಆಗಿಲ್ಲ. ಮತ್ತು ಕಿತ್ತೂರಿನ ಆಡಳಿತ ಸೌಧದಲ್ಲಿ ಸುಸಜ್ಜಿತ ರೆಕಾರ್ಡ್ ಕಚೇರಿ ಆಗಿ ಎಲ್ಲಾ ದಾಖಲೆಗಳು ಇಲ್ಲೇ ಜನರಿಗೆ ಸಿಗುವಂತೆ ಆಗಬೇಕು. 
 ಹೆಚ್ಚುವರಿ ಕೆಲಸಕ್ಕೆ ಇನ್ನೂ ಬೈಲಹೊಂಗಲಕ್ಕೆ ಹೋಗುವದು ತಪ್ಪಿಲ್ಲ ಕಿತ್ತೂರಿನಲ್ಲಿ ಇರುವ ಸಬ್ ರಿಜಿಸ್ಟ್ರಾರ್ ಕಚೇರಿ ಸಹ ಇದುವರೆಗೆ ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಆಗಿಲ್ಲ ಅರ್ಧ ಕಿತ್ತೂರಿನ ಆಡಳಿತ ಸೌಧಕ್ಕೆ ಸ್ಥಳಾಂತರವಾಗಬೇಕು ಇನ್ನೂ ಅರ್ಧ ಕೆಲಸಕ್ಕೆ ಬೈಲಹೊಕಗಲಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತು ಕಿತ್ತೂರಿನ ಆಡಳಿತ ಸೌಧದಲ್ಲಿ ಜನರೇಟರ್ ಇರುವದಿಲ್ಲ ವಿದ್ಯುತ್ ಹೋದರೆ ಮತ್ತೆ ವಿದ್ಯುತ್ ಬರುವವರೆಗೆ ಸಾವರ್ಜಿನಿಕರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಮತ್ತು ಕಿತ್ತೂರಿನ ಆಡಳಿತ ಸೌಧ ಹೆಸರಿಗೆ ಮಾತ್ರ ತಾಂತ್ರಿಕ ಸೌಲಭ್ಯಗಳು ಇಲ್ಲಾ ಇಂಟರ್ನೆಟ್ ಸೌಲಭ್ಯ ಸರಿಯಾಗಿ ಬರಲ್ಲ ಇದರಿಂದ ಸರ್ವರ್ ಬ್ಯುಜಿ ಅಂತ ಬರುತ್ತೆ ಇದರಿಂದ ಸಾರ್ವಜನಿಕರ ಕೆಲಸಗಳು ಸರಿಯಾಗಿ ಆಗುತ್ತಿಲ್ಲ ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ರಾಜ್ಯ ಯುವ ಕಾರ್ಯದರ್ಶಿ ಬಸವರಾಜ ಭೀಮರಾಣಿ ಅವರು ಹೇಳಿದರು.  

 ರಾಜ್ಯ ಸಂಚಾಲಕರಾದ ಜಗದೀಶ ಕಡೋಲಿ ಅವರು ಮಾತನಾಡಿ ಕೂಡಲೇ ಬೈಲಹೊಂಗಲದಲ್ಲಿ ಇರುವ ಕಚೇರಿಗಳನ್ನು ಕಿತ್ತೂರಿನ ಆಡಳಿತ ಸೌಧಕ್ಕೆ ಸ್ಥಳಾಂತರ ಮಾಡಬೇಕು ಮತ್ತು ಕಿತ್ತೂರಿನ ಆಡಳಿತ ಸೌಧಕ್ಕೆ ಜನರೇಟರ್ ವ್ಯವಸ್ಥೆ ಮಾಡಬೇಕು ಮತ್ತು ಕೆಲವು ಗ್ರಾಮದಿಂದ ವಿದ್ಯಾರ್ಥಿಗಳು. ವಯಸ್ಕರು ಕಿತ್ತೂರಿನ ಆಡಳಿತ ಸೌಧಕ್ಕೆ ಬರಬೇಕು ಅಂದರೆ ರಾಷ್ಟ್ರೀಯ ಹೆದ್ದಾರಿ ದಾಟ್ಟಿ ಬರಬೇಕು ಇದರಿಂದ ಈ ಹಿಂದೆ ಸಾಕಷ್ಟು ಅಪಘಾತ ಆಗಿವೆ ಅದಿ ಕಾರಣ ಕೊಡಲೇ ಆಡಳಿತ ಸೌಧ ಎದುರಿಗೆ ಅಂಡರ್ ಬ್ರಿಜ್ ವ್ಯವಸ್ಥೆ ಆಗಬೇಕು 
ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ಒತ್ತಾಯ.

Post a Comment

0 Comments