ಚೆನ್ನಮ್ಮನ ಕಿತ್ತೂರು:- ರಾಜ್ಯ ಸರ್ಕಾರಿ ನೌಕರ ಸಂಘದ ಕಿತ್ತೂರು ತಾಲೂಕು ಶಾಖೆಯ 2024 29ನೇ ಅವಧಿಯ ಆಧೀನ ಶಾಖೆಗಳ ಚುನಾವಣಾ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಚುನಾವಣೆಯನ್ನು ಆಗಸ್ಟ್ 28ರಂದು ಕಿತ್ತೂರು ಪಟ್ಟಣದಲ್ಲಿ ನಡೆಸಲಾಗುವುದು.
ನಾಮಪತ್ರ ಸಲ್ಲಿಸಲು ಆರಂಭದ ದಿನಾಂಕ ಅಕ್ಟೋಬರ್ 9ರಿಂದ ಬೆಳಗ್ಗೆ 11 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ, ನಾಮಪತ್ರ ಸಲ್ಲಿಸಲು ಅಕ್ಟೋಬರ್ 18 ಸಂಜೆ ಕೊನೆಯ ದಿನಾಂಕ ಸಂಜೆ 5 ಗಂಟೆಯವರೆಗೆ, ಅಕ್ಟೋಬರ್ 19 ನಾಮಪತ್ರ ಪರಿಶೀಲನೆ ಅಭ್ಯರ್ಥಿಗಳ ಹೆಸರು ಪ್ರಕಟನೆ, ಉಮೇದುವಾರಿಕೆ ವಾಪಸ್ಸು ಪಡೆಯಲು ಅಕ್ಟೋಬರ್ 21 ಸಂಜೆ 4.30 ಗಂಟೆಯವರೆಗೆ ಅಭ್ಯರ್ಥಿಗಳ ಹೆಸರು ಪ್ರಕಟಣೆ ಸಂಜೆ 5:30 ನಡೆಯಲಿದೆ. ಚುನಾವಣೆಯನ್ನು ಅಕ್ಟೋಬರ್ 28 ರಂದು ನಡೆಯಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಚುನಾವಣೆ ಅಧಿಕಾರಿ ಡಿ ಆರ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚುನಾವಣೆ ಮುಗಿದ ಬಳಿಕ ಮತ್ತೆ ಏನಿಕಾ ಕಾರ್ಯ ನಡೆಯಲಿದೆ ಎಂದು ಹೇಳಿದರು.

0 Comments