ಕತ್ರಿದಡ್ಡಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
ಚನ್ನಮ್ಮನ ಕಿತ್ತೂರು:- ತಾಲೂಕಿನ ಕುಲವಳ್ಳಿ ಗ್ರಾಪಂ ವ್ಯಾಪ್ತಿಯ ಕತ್ರಿದಡ್ಡಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ೪೨ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ಪ್ರತಿವರ್ಷವು ಕೂಡ ಕ್ರೀಡೆಯಲ್ಲಿ ಭಾಗವಹಿಸುತ್ತಾ ಬಂದಿರುವ ಶಾಲೆಯ ವಿದ್ಯಾರ್ಥಿಗಳು ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು ಇಲಾಖೆ ಎಸ್‌ಡಿಎಂಸಿ, ಗ್ರಾಪಂದವರು, ವಿದ್ಯಾರ್ಥಿಗಳ ಮುಂದಿನ ಯಶಸ್ಸಿಗೆ ವಿವಿಧ ರೀತಿಯಲ್ಲಿ ಸಹಾಯಹಸ್ತ ಚಾಚಿದ್ದಾರೆ. ಸ್ಪೋಟ್ಸ್ ಶೋ, ಜರ್ಸಿ, ಹಣ್ಣುಹಂಪಲ ವಿತರಣೆ ಪೌಷ್ಟಿಕ ಆಹಾರಕ್ಕೆ ಧನಸಹಾಯ ಸಹಕಾರ ಕೊಟ್ಟಿದ್ದು ವಿದ್ಯಾರ್ಥಿಗಳ ಸಾಧನೆ ಇಮ್ಮಡಿಗೊಳಿಸಲು ಸಹಕಾರಿಯಾಗಿದೆ.
ಬಾಲಕರ ವಿಭಾಗ ಗುಂಪು ಆಟದಲ್ಲಿ ವೈಯಕ್ತಿಕ ವಿಭಾಗ: ಪ್ರಸಾದ ಅಸಲನ್ನವರ ೧೦೦ಮೀ. ಓಟ ಪ್ರಥಮ, ೧೧೦ಮೀ. ಹರ್ಡಲ್ಸ್ ದ್ವೀತಿಯ, ಸಂದೀಪ ತೋಪಗಾಣಿ ೨೦೦ಮೀ. ಪ್ರಥಮ, ೧೧೦ಮೀ. ಹರ್ಡಲ್ಸ್, ೪೦೦ಮೀ. ಹರ್ಡಲ್ಸ್ ಪ್ರಥಮ, ನವೀನ ಪೂಜೇರ ೪೦೦ಮೀ. ಓಟ ಪ್ರಥಮ, ರಿಯಾನಾ ಹಂಚಿನಮನಿ ೧೫೦೦ ಮೀ. ಪ್ರಥಮ, ಜ್ಞಾನೇಶ್ವರಿ ಕರಿಕಟ್ಟಿ ೩೦೦೦ಮೀ. ಓಟ ದ್ವೀತಿಯ, ಸುಮಿತ್ ಕಡಕೋಳ ೫೦೦೦ ಮೀ. ನಡಿಗೆ ಪ್ರಥಮ, ಬಾಬು ಪೋಂಡೆ ೫೦೦೦ಮೀ. ನಡಿಗೆ ದ್ವೀತಿಯ, ಜ್ಯೋತಿಬಾ ಶಿಂದೆ ಹ್ಯಾಮರ್ ಥ್ರೋ ದ್ವೀತಿಯ, ಚಕ್ರ ಎಸೆತ ದ್ವೀತಿಯ, ಕಲ್ಮೇಶ ಕಡಕೋಳ ಹ್ಯಾಮರ್ ಥ್ರೋ ತೃತೀಯ, ಶಿವಕುಮಾರ ಹಿರೇಮಠ ೮೦೦ಮೀ. ಓಟ ತೃತೀಯ, ಯಲ್ಲಪ್ಪ ಪಾಟೀಲ ಎತ್ತರ ಜಿಗಿತ ತೃತೀಯ,
ಬಾಲಕೀಯರ ವಿಭಾಗದಲ್ಲಿ ಗುಂಪು ಆಟದಲ್ಲಿ ೧೦೦ಮೀ-೪೦೦ಮೀ. ರೀಲೆ ಪ್ರಥಮ.
ವೈಯಕ್ತಿಕ ಆಟ: ಮಾಯವ್ವ ಸರಾಪುರೆ ೪೦೦ಮೀ. ಓಟ ಪ್ರಥಮ, ದಾನೇಶ್ವರ ತೋಪಗಾಣಿ ೮೦೦ಮೀ. ದ್ವೀತಿಯ, ಕವಿತಾ ಗಂಗಣ್ಣವರ ೧೫೦೦ಮೀ. ದ್ವೀತಿಯ, ಸುಧಾರಾಣಿ ಗುಡದಪ್ಪಗೋಳ ೧೧೦ ಹರ್ಡಲ್ಸ್ ದ್ವೀತಿಯ, ದೀಪಾ ಹೊಸೆಟ್ಟಿ ಹ್ಯಾಮರ ಥ್ರೋ ಪ್ರಥಮ, ಸಛದರ್ಯ ಬಾಗೇವಾಡಿ ಹರ್ಡಲ್ಸ್ ದ್ವೀತಿಯ, ಶಿಲ್ಪಾ ನಾಯಕ ೪೦೦ಮೀ. ತೃತೀಯ, ನಕುಶಾ ಪಾಟೀಲ ೧೫೦೦ ಮೀ. ದ್ವೀತಿಯ, ಅಸ್ಪನಾ ಕಾಜಿ ಬಳೆ ಎಸೆತ ತೃತೀಯ, ಗೌರಮ್ಮಾ ಬಾಳ ನಾಯ್ಕರ ೧೧೦ ಹರ್ಡಲ್ಸ್ ತೃತೀಯ, ಲಕ್ಷಿö್ಮÃ ಮಳಗಲಿ೩೦೦೦ಮೀ. ನಡಿಗೆ ತೃತೀಯ,
೧೪ ವರ್ಷದ ಒಳಗಿನ ವಿಭಾಗ: ಚೇತನ ಮೇಟ್ಯಾಲ ೧೦೦-೪೦೦ಓಟ ಪ್ರಥಮ ಸೊಹೇಲ ಖಾಜಿ ಹರ್ಡಲ್ಸ್ ಪ್ರಥಮ, ಆಶಿಪ್ ಹೊಂಗಲ ೬೦೦ ಮೀ. ಪ್ರಥಮ, ಅನ್ನಪೂರ್ಣಾ ನಿಂಗಪೂರಮಠ ಹರ್ಡಲ್ಸ್ ಪ್ರಥಮ, ಚೇತನ ನಾಯ್ಕ ೬೦೦ಮೀ. ದ್ವೀತಿಯ, ಮಡವಾಳಿ ಯಡಳ್ಳಿ ಚಕ್ರ ಎಸೆತ ದ್ವೀತಿಯ, ಸರಸ್ವತಿ ನರೆಗಲ್ಲ ೪೦೦ಮೀ. ತೃತೀಯ.
ವಿದ್ಯಾರ್ಥಿಗಳ ಈ ಸಾಧನೆಗೆ ಎಸ್‌ಡಿಎಂಸಿ, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ, ಸರ್ವಸದಸ್ಯರು, ಪಿಡಿಓ ಶ್ರೀಮತಿ ರಾಧಾ, ಕಾರ್ಯದರ್ಶಿ, ಕ್ಲರ್ಕ, ಡಿಇಓ, ಸೇರಿದಂತೆ ಸರ್ವಸಿಬ್ಬಂದಿ, ಮುಖ್ಯೋಪಾಧ್ಯಾಯ ಕೆ.ಎಂ. ಕಾಳೆ, ಎಸ್‌ಪಿ ಕದಂ, ಎನ್‌ಎಂ. ನಂದಿಹಳ್ಳಿ, ಉಜ್ವಲಾ ಪಾಟೀಲ, ಎಸ್.ವಿ.ಭಟ್, ಎಸ್.ಎನ್.ನಾಯಕ, ಜಿ.ಸಿ.ಇತಾಪೆ, ಎಂ.ಎನ್.ಹೊAಗಲ, ಬಿ.ಆರ್. ಚಲವಾದಿ, ಜ್ಯೋತಿ, ಕುಕಡೊಳ್ಳಿ, ಮಹೇಶ ದೊಡಮನಿ, ವಿದ್ಯಾರ್ಥಿಗಳ ಸಾಧನೆಗೆ ಶುಭ ಕೋರಿದ್ದಾರೆ.
ಈ ವೇಳೆ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಭೀಷ್ಟಪ್ಪ ಶಿಂಧೆ, ಗ್ರಾಪಂ ಸದಸ್ಯ ಮಹಾಂತೇಶ ಎಮ್ಮಿ, ಬಸವರಾಜ ಕುರಬರ, ಹೊಳೆಪ್ಪ ಪಾಟೀಲ, ಸುರೇಶ ತೋಪಗಾಣಿ, ಹುಸೇನ ಮಕಾನದಾರ ಇನನ್ನಿತರರಿದ್ದರು.

0 Comments