ಕಿತ್ತೂರು ವಿಜಯ ಸುದ್ದಿ.. ಶಿವಾನುಭವ. ಮತ್ತು ಸುವರ್ಣ ಕರ್ನಾಟಕ ಸಂಭ್ರಮ. ಮತ್ತು ಯೋಗ ದಿನಾಚರಣೆಯ. ಕಾರ್ಯಕ್ರಮ ಚನ್ನಮ್ಮನ ಕಿತ್ತೂರಿನಲ್ಲಿ ನಡೆಯಿತು

ಬಸವ ಸಮಕಾಲೀನ ದಿಟ್ಟ ಶರಣರಾದ ಅಂಬಿಗರ ಚೌಡಯ್ಯನವರ ಆದರ್ಶಗಳನ್ನು, ವಚನಗಳನ್ನು ಇಂದಿನ ಯುವ ಪೀಳಿUಗೆೆ ತಿಳಿಸಿ ಕೊಡುವದು ಅತ್ಯವಶ್ಯಕವಾಗಿದೆ.          ಡಾ.ಸಿ.ಕೆ.ನಾವಲಗಿ                       
ಚನ್ನಮ್ಮನ ಕಿತ್ತೂರು:- 12 ನೇಯ ಶತಮಾನದ ವಿಶ್ವಗುರು ಬಸವಣ್ಣನವರ ಸಮಕಾಲೀನ ಶರಣರಾದ  ಅಂಬಿಗರ ಚೌಡಯ್ಯನವರ ಆದರ್ಶಗಳು ಮತು ವಚನಗಳು ಇಂದಿಗೂ ಕೂಡ ಅವಿಸ್ಮರಣೀಯವಾಗಿದ್ದು ಅವುಗಳನ್ನು ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿ ಹೇಳುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಖ್ಯಾತ ಜಾನಪದ ವಿದ್ವಾಂಸರೂ,ವಿಶ್ರಾಂತ ಪ್ರಾಚಾರ್ಯರೂ ಮತ್ತು ಬೆಳಗಾವಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರೂ ಆಗಿರುವಂತಹ  ಡಾ.ಸಿ.ಕೆ.ನಾವಲಗಿ ಮನವಿ ಮಾಡಿದರು.ಅವರು ಕಿತ್ತೂರಿನ ಕಲ್ಮಠದ ಶಂಕರ ಚಂದರಗಿ ಸಭಾ ಭವನದಲ್ಲಿ ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಸಿಕ ಶಿವಾನುಭವ  ಮತ್ತು ಸುವರ್ಣ ಕರ್ನಾಟಕ ಸಂಭ್ರಮ ಅಂಗವಾಗಿ ಸಾಧಕರಿಗೆ ಸನ್ಮಾನ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಎಂ.ಎಂ.ಸಂಗಣ್ಣವರ  ಇವರ ಚುಟುಕು ಸಂಕಲನ “ಅರಿವಿನ ಕಿರುಗವಿತೆ ” ಕೃತಿ ಬಿಡುಗಡೆ  ಸಮಾರಂಭ  ಕಾರ್ಯಕ್ರಮದಲ್ಲಿ  “ಅಂಬಿಗರ ಚೌಡಯ್ಯ ಜಯಂತಿ”  ಕುರಿತು ಉಪನ್ಯಾಸ ನೀಡುತ್ತಾ ಕೆಳವರ್ಗದ ವಚನಕಾರರಲ್ಲಿ ಪ್ರಮುಖರಾದ   ಅಂಬಿಗರ ಚೌಡಯ್ಯ ನವರು ಅತ್ಯಂತ ಸರಳ ಭಾಷೆ ಮತ್ತು ನೇರ ನುಡಿಗಳಲ್ಲಿ ಸಾಮಾಜಿಕ ಚಿಂತನೆಯೊಂದಿಗೆ ವಚನಗಳನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ  ಎಂದು ಉದಾಹರಣೆಗಳ ಮೂಲಕ ವಿಮರ್ಶಾತ್ಮಕವಾಗಿ ವಿವರಿಸಿದರು.
ನೇರ ದಿಟ್ಟ ಕಠೋರವಾಗಿ ವಚನಗಳ ಮೂಲಕ ತಮ್ಮ ವಿಚಾರಗಳನ್ನು ತಿಳಿಸಿದಂತಹ ಅಂಬಿಗರ ಚೌಡಯ್ಯ ನವರ ಜಯಂತಿಯನ್ನು ಆಚರಿಸುತ್ತಿರುವದಕ್ಕೆ ಸಂತಸ ವ್ಯಕ್ತ ಪಡಿಸುತ್ತ ಸಂಘಟಿಕರನ್ನು ಅಭಿವನಂದಿಸಿದರು.                                                     ಖ್ಯಾತ ಮಕ್ಕಳ ಸಾಹಿತಿಗಳೂ,ಕಿತ್ತೂರ ತಾಲೂಕ ಎರಡನೇಯ ಕನ್ನಡ ಸಾಹಿತ್ಯ   ಸಮ್ಮೇಳನದ ಸರ್ವಾಧ್ಯಕ್ಷರೂ ಮತ್ತು  82 ವರ್ಷದ ಹಿರಿಯರೂ ಆದ  ಎಂ.ಎಂ.ಸಂಗಣ್ಣವರ  ಇವರ ಚುಟುಕು ಸಂಕಲನ “ಅರಿವಿನ ಕಿರುಗವಿತೆ ” ಎಂಬ ಕೃತಿ ಯನ್ನು ಪೂಜ್ಯರು ಮತ್ತು ಅತಿಥಿಗಳು ಬಿಡುಗಡೆ ಮಾಡಿ ಎಂ.ಎಂ.ಸಕಗಣ್ಣವರ, ಡಾ.ಸಿ.ಕೆ.ನಾವಲಗಿ, ಶ್ರೀಮತಿ ಸೌಮ್ಯಾ ರಾಘವೇಂದ್ರ ಸಂಚಾಲಕರು ಸಮನ್ವಯ ಯೋಗ ಕೇಂದ್ರ ಕಿತ್ತೂರು ಇವರನ್ನು ಗೌರವಿಸಲಾಯಿತು. 
ತಮ್ಮ ಕೃತಿ ಬಿಡುಗಡೆಗೊಳಿಸಿ ಸನ್ಮಾನಿಸಿದ ಶ್ರೀ ಕಲ್ಮಠದ ಪೂಜ್ಯರಿಗೆ ಮತ್ತು ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಎಂ.ಎಂ.ಸಂಗಣ್ಣವರ ಸನ್ಮಾನಿತರ ಪರವಾಗಿ ಕೃತಜ್ಞತೆಗಳನ್ನು ತಿಳಿಸುತ್ತಾ ತಮ್ಮ ಸಾಹಿತ್ಯ ಕೃಷಿ ಬೆಳೆದು ಬಂದ ಬಗೆಯನ್ನು ವಿವರಿಸಿ ಹರ್ಷ ವ್ಯಕ್ತ ಪಡಿಸಿದರು.                                                            ಅಧ್ಯಕ್ಷೀಯ ನುಡಿಗಳನ್ನು ಆಡಿದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಜಿ.ಎಸ್.ಪ್ರಭಯ್ಯನವರಮಠ ತಮ್ಮನ್ನು ಪ್ರೀತಿಯಿಂದ ಗೌರವಿಸಿರುವದಕ್ಕೆ ಸಂತಸ ವ್ಯಕ್ತ ಪಡಿಸುತ್ತ ತಾವು ಕಿತ್ತೂರಿನಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಿರುವದನ್ನು ಎಂದಿಗೂ ಮರೆಯುವದಿಲ್ಲ ಎಂದು ತಿಳಿಸಿದರು.                                                                                                      ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಅಂಬಿಗರ ಚೌಡಯ್ಯ ನವರು ಜಾತೀಯತೆ , ಮೂಢ ನಂಬಿಕೆಗಳು,ಸ್ತ್ರೀ ಶೋಷಣೆಗಳ ವಿರುದ್ಧ ಹೋರಾಡಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ ಮಹಾನ್ ಸಾಮಾಜಿಕ ಚಿಂತಕರಾಗಿ ಗುರುತಿಸಲ್ಪಟ್ಟಿದ್ದಾರೆ. ಇಂದಿನ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ಎಂ.ಎಂ.ಸಂಗಣ್ಣವರ , ಡಾ.ಸಿ.ಕೆ.ನಾವಲಗಿ ಮತ್ತು ಯೋಗ ಸಾಧಕರಾದ ಶ್ರೀಮತಿ ಸೌಮ್ಯಾ ರಾಘವೇಂದ್ರ ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದು ತಮ್ಮ ಅನುಭಾವದ ನುಡಿಗಳನ್ನು ಹಂಚಿಕೊಂಡಿರುವದಕ್ಕೆ ಅವರಿಗೆ ಶುಭ ಕೋರಿ ಆಶೀರ್ವದಿಸಿದರು.                                                                            ಶರಣ ಅಂಬಿಗರ ಚೌಡಯ್ಯನವರ ಭಾವ ಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀ ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ಸುನಂದಾ ಪಾಟೀಲ ಸ್ವಾಗತಿಸಿದರು. ಕಿತ್ತೂರು ತಾಲೂಕಿನ  ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರಾದ  ಡಾ.ಎಸ್.ಬಿ.ದಳವಾಯಿ ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ಮಾಸಿಕ ಶಿವಾನುಭವದ ಉದ್ದೇಶಗಳನ್ನು ಮತ್ತು ಅತಿಥಿಗಳನ್ನು ಪರಿಚಯಿಸುವದರ ಜೊತೆಗೆ  “ಅರಿವಿನ ಕಿರುಗವಿತೆ ” ಕೃತಿಯ ಕುರಿತು ಮಾತನಾಡಿದರು. ಈಶ್ವರ ಗಡಿಬಿಡಿ, ಪ್ರಲ್ಹಾದ ಶಿಗ್ಗಾಂವಿ ನೇತೃತ್ವದ  ಶ್ರೀ ಗ್ರಾಮ ದೇವಿ ಭಜನಾ ಮಂಡಳಿ,ರಾಣಿ ಚನ್ನಮ್ಮ ಮಹಿಳಾ ವೇದಿಕೆ ಮತ್ತು ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮ ಮಹಿಳಾ ಮಂಡಳದವರಿಂದ  ಸಂಗೀತ ಕಾರ್ಯಕ್ರಮಗಳು ಜರುಗಿದವು. ಪ್ರಸಾದ ಸೇವೆ ಮಾಡಿದ ಶರಣ ಡಾ.ಜಿ.ಕೆ.ಭೂಮನಗೌಡರ ಇವರನ್ನು ಶ್ರೀ ಕಲ್ಮಠದ ಪರವಾಗಿ ಸನ್ಮಾನಿಸಲಾಯಿತು. ಕಿತ್ತೂರು ತಾಲೂಕ  ಕನ್ನಡ ಸಾಹಿತ್ಯ ಪರಿಷತ್ತಿನ  ಗೌರವ ಕಾರ್ಯದರ್ಶಿಗಳಾದ ಮಂಜುನಾಥ ಕಳಸಣ್ಣವರ ವಂದಿಸಿದರು. ಬಸವಪ್ರಭು ಪಾಟೀಲ ನಿರೂಪಿಸಿದರು.ಸಮಾರಂಭದಲ್ಲಿ ಕಿತ್ತೂರು ತಾಲೂಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ||ಜಗದೀಶ ಹಾರೂಗೊಪ್ಪ ಮತ್ತು ಕಿತ್ತೂರ ನಾಡಿನ ಶರಣ ಶರಣೆಯರು ಉಪಸ್ಥಿತರಿದ್ದರು. ಕಿತ್ತೂರು ವಿಜಯ ಸುದ್ದಿ 

Post a Comment

0 Comments