ಲಂಚ ಪಡೆಯುತ್ತಿದ್ದ ಬೆಳಗಾವಿ ತಾಲೂಕಾ ಪಂಚಾಯತ ಇಓ ಹಾಗೂ ಕಾರ್ಯದರ್ಶಿ ಲೋಕಾಯುಕ್ರತ ಬಲಗೆ

ಕಿತ್ತೂರು ವಿಜಯ

ಬೆಳಗಾವಿ : ರೂ 40 ಸಾವಿರ ಲಂಚ ಪಡೆಯುತ್ತಿದ್ದಾಗ ತಾ. ಪಂ. ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಕಾರ್ಯದರ್ಶಿಯನ್ನು ಲೋಕಾಯುಕ್ತ ಬಂಧಿಸಿದ್ದಾರೆ.

ಬೆಳಗಾವಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ರಾಮರೆಡ್ಡಿ ಪಾಟೀಲ್ ಹಾಗೂ ಗ್ರೇಡ್ 2 ಕಾರ್ಯದರ್ಶಿ ವೈಜನಾಥ ಸನದಿ ಇಬ್ಬರು ಬಂಧಿತರು.

ಪಟ್ಟಣದ ಕಾಕತಿವೇಸ್ ಪ್ರದೇಶದ ನಿವಾಸಿ ಶಾನವಾಜ್ ಖಾನ್ ಪಠಾಣ ಅವರು ವಾಣಿಜ್ಯ ಉದ್ದೇಶಕ್ಕಾಗಿ ತಮ್ಮ ಮನೆಯನ್ನು  ಮಳಿಗೆಯನ್ನಾಗಿ ಭೂ ಪರಿವರ್ತನೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಭೂ ಪರಿವರ್ತನೆ ಮಾಡಿಕೊಡಲು ರಾಮರೆಡ್ಡಿ ಪಾಟೀಲ್ ಮತ್ತು ವೈಜನಾಥ ಸನದಿ ರೂ 40 ಸಾವಿರ ಲಂಚ ಕೇಳಿದ್ದರು. ಶಹನವಾಜ್ ಆಯಿತು ಕೊಡುತ್ತೇನೆ ಎಂದು ಒಪ್ಪಿದ್ದರು. ಲಂಚದ ಹಣ  ಪಡೆಯುವ ಸಮಯದಲ್ಲಿ   ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಅನ್ನಪೂರ್ಣ ಹುಲಗೂರು ಹಾಗೂ ಅವರ ತಂಡ ದಾಳಿ ಮಾಡಿ ಇಬ್ಬರು ಅಧಿಕಾರಿಗಳನ್ನು ಕೆಡ್ಡಾಕ್ಕೆ ಕೆಡವಿದ್ದಾರೆ. ನಂತರ ಉಭಯ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ  ಪರಿಶೀಲನೆ ನಡೆಸಿದ್ದಾರೆ.

Post a Comment

0 Comments