ಶಾರದಾ ಮಾತೆ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಶಾಲಾ ಮಕ್ಕಳನ್ನು ಬರಮಾಡಿಕೊಂಡ ಕಾಕತಿ ವೀರರಾಣಿ ಕಿತ್ತೂರು ಚನ್ನಮ್ಮ ಕಾನ್ವೆಂಟ ಶಾಲೆಯ ಶಿಕ್ಷಕರು

 

ಮಲ್ಲಿಕಾರ್ಜುನ ಅಂಗಡಿ ಅವರು ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸುತ್ತಿರುವುದು
ಕಿತ್ತೂರು ವಿಜಯ ಸಮಾಚಾರ

ಬೆಳಗಾವಿ : ತಾಲೂಕಿನ ಕಾಕತಿಯಲ್ಲಿ ಇರುವ ವೀರರಾಣಿ ಕಿತ್ತೂರು ಚನ್ನಮ್ಮ ಕನ್ನಡ ಕಾನ್ವೆಂಟ ಶಾಲೆಯಲ್ಲಿ ಶಾರದಾ ಮಾತೆ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ರಜೆ
ಯ ನಂತರ ಮರಳಿದ ಶಾಲಾ ಮಕ್ಕಳಿಗೆ ಹೂವು ಸಿಹಿ ನೀಡಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಶಾಲೆಯಲ್ಲಿ ಮುಖ್ಯೋಪಾಧ್ಯಯರು ಮತ್ತು ಸಹ ಶಿಕ್ಷಕರು ರಜೆಯ ನಂತರ ಮರಳಿದ ಶಾಲಾ ಮಕ್ಕಳಿಗೆ ಗುಲಾಬಿ ಹೂ ಮತ್ತು ಸಿಹಿ ನೀಡಿ ಬರಮಾಡಿಕೊಂಡ ಬಳಿಕ ಶಾರದಾ ಮಾತೆ ಭಾವಚಿತ್ರಕ್ಕೆ ಪೂಜೆ ಮಾಡಿ ಫಲ ಪುಷ್ಪ ಸಮರ್ಪಣೆ ಮಾಡುವ ಮೂಲಕ ಪೂಜೆ ಜರುಗಿತು.  ಸಂಪೂರ್ಣ ಶಾಲೆಯನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. 

ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬೆಳಗಾವಿಯ ದಿನ ಪತ್ರಿಕೆ ಮುದ್ರಣ ವಿಭಾಗದ ಮುಖ್ಯಸ್ಥರಾದ  ಮಲ್ಲಿಕಾರ್ಜುನ ಅಂಗಡಿ ಅವರು ಪಠ್ಯ ಪುಸ್ತಕಗಳನ್ನು ವಿತರಿಸಿದರು. 

ಈ ವೇಳೆ ಶಾಲೆಯ ಮುಖ್ಯೋಪಾಧ್ಯಯರು, ಸಹ ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಸರ್ವ ಸದಸ್ಯರು, ಶಾಲೆಯ ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.




Post a Comment

0 Comments