ಉಂಡು ಹೋಗುವ ಬೀಗರನ್ನು‌ ನಂಬಬೇಡಿ ಮನೆಯ ಮಗನನ್ನು ನಂಬಿ: ಲಕ್ಷ್ಮೀ ಹೆಬ್ಬಾಳ್ಕರ

ಕಿತ್ತೂರು ವಿಜಯ 
ಬೆನಕಟ್ಟಿ: ರಾಜ್ಯದ ಪ್ರತಿಯೊಂದು ಹೆಣ್ಣು ಮಗಳ ಖಾತೆಗೆ ಗೃಹಲಕ್ಷ್ಮೀ ಯೋಜನೆಯಲ್ಲಿ 2 ಸಾವಿರದಂತೆ ಒಟ್ಟು 20 ಸಾವಿರ ರೂ,ಗಳನ್ನು ಅವರ ಖಾತೆಗೆ ನೇರ ಜಮಾ ಮಾಡಿದ ನಮ್ಮ ಕಾಂಗ್ರೇಸ್ ಸರಕಾರ ಎಂದು ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.
   ಅವರು ಗ್ರಾಮಕ್ಕೆ ಆಗಮಿಸಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ ಪರ ಮತಯಾಚಿಸಿ ಮಾತನಾಡಿದರು, ಜಗದೀಶ ಶೆಟ್ಟರ ಅವರು ಬಿಜೆಪಿ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ, ಪಕ್ಷದ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ, ಸ್ಪೀಕರಾಗಿ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ಮತ್ತೇ ಸಚಿವರಾದ ಮೊದಲಿಗರು ಇವರೇ, ಇವರಿಗೆ ಅಧಿಕಾರಕ್ಕಾಗಿ ಜಿಲ್ಲಾ‌ಪಂಚಾಯತ ಮೆಂಬರ ಆಗಲು ರೇಡಿ ಇದ್ದಾರೆ ಎಂದು ವ್ಯಂಗವಾಡಿದರು.
   ನಮ್ಮ ಮನೆಗೆ ಬಂದು ನೀವು 2-3 ದಿನಾ ಇದ್ದು ಉಂಡು ಹೋಗುವ ಬೀಗರ ಬೇಕಾ, ಇಲ್ಲಾ ನಮ್ಮ ಕಷ್ಟ ಸುಖದಲ್ಲಿ‌ ಭಾಗವಹಿಸುವ ಮನೆ ಮಗಾ ಬೇಕಾ ಎಂಬುದನ್ನು ನೀವೆ ನಿರ್ಧರಿಸಿ ಎಂದು ಸಚಿವೆ ಹೆಬ್ಬಾಳ್ಕಾರ ಹೇಳಿದರು.
   ನೀವು ಮುಖ್ಯಮಂತ್ರಿಯಾಗಿ ನಮ್ಮ ಜಿಲ್ಲೆಗೆ ಕೂಡುಗೆ ನೀಡಿರುವದನ್ನು ನಿಜವಾಗಿದ್ದರೆ ಮತ ಕೇಳಿ, ಅದನ್ನು ನರೇಂದ್ರ ಮೋದಿಯವರನದನು ಮತ್ತೊಂದು ಬಾರಿ ಪ್ರಧಾನ ಮಂತ್ರಿ ಮಾಡಲು ಬಿಜೆಪಿಗೆ ಮತ ಹಾಕಿರಿ ಎಂದರೆ ನಾವೇನೂ ವಾರಣಾಸಿಗೆ ಹೋಗಿ ಓಟ ಹಾಕಬೇಕಾ ಎಂದರು.
   ಕೂವೀಡ್ ಸಂದರ್ಭದಲ್ಲಿ ಆಕ್ಷೀಜನ ಹಾಗೂ ಐಐಟಿ ಕಾಲೇಜನ್ನು ತಮ್ಮ ಹುಬ್ಬಳ್ಳಿ-ಧಾರವಾಡಕ್ಕೆ‌ ತೆಗೆದುಕೊಂಡು ಹೋಗಿದ್ದಾರೆ ಅವರಿಗೆ ಬುದ್ಧಿ ಕಲಿಸಿ ಎಂದರು.
  ಶಾಸಕ ವಿಶ್ವಾಸ ವೈದ್ಯ, ಕಾಂಗ್ರೆಸ್ ಮುಖಂಡ ಉಮೇಶ ಬಾಳಿ, ಮಹಾಂತೇಶ ಉಪ್ಪಿನ, ರುದ್ರಪ್ಪ ರೇವನ್ನವರ, ಪ್ರಕಾಶ ಸಾವಳಗಿ, ಬಿ ಆರ್. ಮರ್ಚಪ್ಪನ್ನವರ, ಗಿರೀಶ ಜಕಬಾಳ, ಮಲ್ಲಿಕಾರ್ಜುನ ಬಿಷ್ಟಣ್ಣವರ, ಮಲ್ಲಿಕಾರ್ಜುನ ಲಕ್ಕಪ್ಪನ್ನವರ, ಉಮೇಶ ಸಾವಳಗಿ, ತೇಮರಾಜ ಗುಡಮಕೇರಿ, ಮರೆಪ್ಪ ಹೊರಟ್ಟಿ, ಭೀಮಸಿ ಹೊನಕುಪ್ಪಿ, ಗದಿಗೆಪ್ಪ ವೀರಶೆಟ್ಟಿ, ಅಡಿವೆಪ್ಪ ವೀರಶೆಟ್ಟಿ, ರುದ್ರಪ್ಪ ಜಲಗೇರಿ, ಮಹಾಂತೇಶ ಬಿಷ್ಟಣ್ಣವರ ಹಾಗೂ ಮತ್ತಿತ್ತರರು ಇದ್ದರು.

Post a Comment

0 Comments