ಹುಲಕುಂದ: ನಮ್ಮ ಗ್ರಾಮಕ್ಕೆ ಪ್ರಚಾರಕ್ಕೆ ಬರಬೇಡಿ ಎಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಬಿಜೆಪಿ ನಾಯಕರ ವಾಹನ ತಡೆದ ಗ್ರಾಮಸ್ಥರು.
ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದಲ್ಲಿ ಚುನಾವಣೆ ಪ್ರಚಾರ ಸಮಯದಲ್ಲಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಮುರಗೇಶ ನಿರಾಣಿ ಮತ್ತು ತಾಲೂಕು ಮಂಡಲ ಅಧ್ಯಕ್ಷರ ವಾಹನಗಳನ್ನು ತಡೆದು ಹುಲಕುಂದ ಗ್ರಾಮಸ್ಥರು ಬಿಜೆಪಿ ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು ಇದರಿಂದ ಕೆಲ ಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು.
ಮಾಜಿ ಶಾಸಕ ಮಹಾದೇವಪ್ಫ ಯಾದವಾಡ ಅವರು ನಮ್ಮ ಗ್ರಾಮಕ್ಕೆ ಚುನಾವಣಾ
ಪ್ರಚಾರಕ್ಕೆ ಬರಕೂಡದು ಎಂದು ಪಟ್ಟು ಹಿಡಿದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂದು ಬಿಜೆಪಿ ನಾಯಕರು ಅಲ್ಲಿಂದ ಕಾಲ್ಕಿತ್ತರು.
0 Comments