ನೇಹಾ ಹಿರೇಮಠ ಹತ್ಯಯನ್ನು ಖಂಡಿಸಿ ಕಿತ್ತೂರು ಭಾಜಪಾ ಹಾಗೂ ವಿವಿಧ ಹಿಂದು ಪರ ಸಂಘಟನೆಗಳ ವತಿಯಿಂದ ನಾಳೆ ಪ್ರತಿಭಟನೆ

ಜಿಲ್ಲಾ ಬಿಜೆಪಿ ಸಹ ವಕ್ತಾರ ಬಸವರಾಜ ಮಾತನವರ


ಕಿತ್ತೂರ ವಿಜಯ 

ಚನ್ನಮ್ಮನ ಕಿತ್ತೂರು: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಇತ್ತಿಚೇಗೆ ನಡೆದ ನೇಹಾ ಹಿರೇಮಠ ಹತ್ಯಯನ್ನು ಖಂಡಿಸಿ ಕಿತ್ತೂರು ಬಾರತೀಯ ಜನತಾ ಪಕ್ಷ ಹಾಗೂ ಕಿತ್ತೂರು ನಾಡಿನ ವಿವಿಧ ಹಿಂದು ಪರ ಸಂಘಟನೆಗಳ ವತಿಯಿಂದ ಗುರುವಾರ (ಏ-25) ಮುಂಜಾನೆ 11-00 ಗಂಟೆಗೆ ಗುರುವಾರ ಪೇಠೆಯಲ್ಲಿ ಇರುವ ಅರಳಿಕಟ್ಟೆಯಿಂದ ತಾಲೂಕಾ ಆಡಳಿತ ಕಚೇರಿವರಿಗೆ ಪಾದಯಾತ್ರೆ ಮೂಲಕ ತೆರಳಿ ತಾಲೂಕಾ ದಂಡಧಿಕಾರಿ ರವೀಂದ್ರ ಹಾದಿಮನಿ ಅವರ ಮೂಲಕ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌ ಅವರಿಗೆ ಮನವಿ ಪತ್ರ ನೀಡಲಾಗುವುದು ಎಂದು ಭಾಜಪಾ ಬೆಳಗಾವಿ ಗ್ರಾಮಾಂತರ ಜಿಲ್ಲಾ ಸಹ ವಕ್ತಾರ ಬಸವರಾಜ ಮಾತನವರ ಕಿತ್ತೂರು ವಿಜಯ ಪತ್ರಿಕೆಗೆ ತಿಳಿಸಿದ್ದಾರೆ.



ಪ್ರತಿಭಟನೆಯಲ್ಲಿ ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕ ಸುರೇಶ ಮಾರಿಹಾಳ, ಮಹಾಂತೇಶ ದೊಡ್ಡಗೌಡರ, ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಸೇರಿದಂತೆ ಭಾಜಪಾ ಕಾರ್ಯಕರ್ತರು ಮತ್ತು ಕಿತ್ತೂರು ನಾಡಿನ ವಿವಿಧ ಹಿಂದು ಪರ ಸಂಘಟನೆಗಳ ಪದಾದಿಕಾರಿಗಳು ಮತ್ತು ಸರ್ವ ಸದಸ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದ ಅವರು ಕಿತ್ತೂರು ನಾಡಿನ ಸರ್ವರು ಆಗಮಿಸಬೇಕು ಎಂದು ಮನವಿ ಮಾಡಿದರು.

Post a Comment

0 Comments