![]() |
ಲಕ್ಷ್ಮೀ ಇನಾಮದಾರ ಮೃತ ಯುವಕನ ತಾಯಿಗೆ ಸಾಂತ್ವನ ಹೇಳುತ್ತಿರುವುದು |
ಕಿತ್ತೂರ ವಿಜಯ
ಚನ್ನಮ್ಮನ ಕಿತ್ತೂರ: ತಾಲೂಕಿನ ದೇವಗಾಂವ ಗ್ರಾಮದ ಶಿರಗಾಪೂರ ಓಣಿಯಲ್ಲಿ ಜರುಗುವ ಸುಪ್ರಸಿದ್ದ ಶಿರಗಾಪೂರ ಕಾಮಣ್ಣನ ಜಾತ್ರೆಗೆ ಖಾನಾಪೂರ ತಾಲೂಕಿನ ಭೂರಣಕಿ ಗುಡ್ಡದಿಂದ ಕಾಮಣ್ಣನ ಗಣಿ (ಮರ) ವನ್ನು ಹಳಬಂಡಿಯಲ್ಲಿ ತೆಗೆದುಕೊಂಡು ಬರುವ ಸಂದರ್ಭದಲ್ಲಿ ಚಕ್ಕಡಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟ ಯುವಕ ಬಸವರಾಜ ತಂದೆ ದೇವಪ್ಪ ಶೀಗಿಹಳ್ಳಿ (25) ಇವರ ಮನೆಗೆ ಸಮಾಜಸೇವಕಿ ಹಾಗೂ ಉದ್ಯಮಿ ಮಾಜಿ ಸಚಿವ ದಿವಂಗತ ಡಿ. ಬಿ. ಇನಾಮದಾರ ಅವರ ಸೊಸೆ ಲಕ್ಷ್ಮೀ ಇನಾಮದಾರ ಭೇಟಿ ನೀಡಿ ಮೃತನ ತಾಯಿ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಹೋಳಿ ಕಾಮಣ್ಣನಿಗೆ ಪೂಜೆ ಸಲ್ಲಿಸಿ ಆರ್ಶಿವಾದ ಪಡೆದರು,
ಈ ವೇಳೆ ಶಿವು ಸಾವಣ್ಣನವರ, ಫಕ್ಕೀರಪ್ಪ ಜಾಗಂಟಿ, ನವೀನ ರಾಮಜೀ, ಮಂಜುನಾಥ ಹಲಸಗಿ, ಗೋಪಾಲ ಹೊಸಮನಿ, ತಮ್ಮಣ್ಣಾ ಮುಪ್ಪಿನಮಠ, ಲಿಂಗರಾಜ ಚಿಕ್ಕಣ್ಣನವರ, ಬಾಲಚಂದ್ರ ಸಾವಳಗಿಮಠ, ಈರಣ್ಣಾ ವಣ್ಣೂರ , ಸಂಗಮೇಶ ಉಡಕೇರಿ ಸೇರಿದಂತೆ ಕಾರ್ಯಕರ್ತ, ಸಾರ್ವಜನಿಕರು ಇದ್ದರು.

0 Comments