ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ಆರ ಪಿ ಜುಟ್ಟನವರ ಇಂದು ಸೇವಾ ನಿವೃತ್ತಿ

   ಕ್ಷೇತ್ರ ಶಿಕ್ಷಣಾಧಿಕಾರಿ ಆರ ಪಿ ಜುಟ್ಟನವರ

ಕಿತ್ತೂರ ವಿಜಯ 
ಚನ್ನಮ್ಮನ ಕಿತ್ತೂರು: ಶಿಕ್ಷಣ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ ಪಿ ಜುಟ್ಟನವರ ಇಂದು (ಮಾರ್ಚ 30) ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಮೂಲತ ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದವರಾದ ಇವರು ಸ್ವಂತ ಮತಕ್ಷೇತ್ರದಲ್ಲಿ ಅಂದರೆ ಚನ್ನಮ್ಮನ ಕಿತ್ತೂರ ಮತಕ್ಷೇತ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿ ಅದೇ ಮತಕ್ಷೇತ್ರದಿಂದ ನಿವೃತ್ತಿ ಹೊಂದುತ್ತಿರುವದು ವಿಶೇಷವಾಗಿದೆ. 
ಅಪಾರ ಶಿಷ್ಯ ಬಳಗ ಹೊಂದಿದ ಇವರು ಸೇವಾ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಿನ ಅಧಿಕಾರಿಗಳಾಗಿದ್ದರು. ಸದಾ ಸ್ನೇಹ ಮಿಡಿಯುವ ಹೃದಯವಂಣರು. ಅಪಾರ ಸೇವಾ ಅನುಭವ ಹೊಂದಿದ ಕಾರಣ ಇಲಾಖೆಯ ನೀತಿ ನಿಯಮಗಳನ್ನು ಅರಿತವರಾದ ಕಾರಣ ಹೆಚ್ಚಿನ ಶಿಕ್ಷಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಹತ್ತು ಹಲವು ಯೋಜನೆ ಅನುಷ್ಟಾನ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಚಿಕ್ಕೋಡಿಯಲ್ಲಿ ಕ್ಷೇತ್ರಸಮನ್ವಯಾಧಿಕಾರಿಗಳಾಗಿದ್ದ ಸಮಯದಲ್ಲಿ ಹಲವು ಉಪಯುಕ್ತ ತರಬೇತಿಗಳನ್ನು ನೀಡುವ ಮೂಲಕ ಸಾವಿರಾರು ಶಿಕ್ಷಕರ ವೃತ್ತಿ ಬದುಕಿನ ಯಶಸ್ಸಿಗೆ ಕಾರಣರಾಗಿದ್ದರು. ಅಥಣಿ ಮತ್ತು ಖಾನಾಪೂರ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿ ಶಿಕ್ಷಕರ ಪರ ಅನೇಕ ಕೆಲಸಗಳನ್ನು ಮಾಡಿದ್ದಾರೆ.
ಶಿಕ್ಷಕರ ಮಾರ್ಗದರ್ಶಿ ವರ್ಗಭೋದನೆಯಲ್ಲಿ ಬರುವ ಕಠಿಣತೆಗಳು ಸುಲಭವಾಗಲೆಂದು ಹಲವಾರು ಇಲಾಖೆ ಅಧಿಕಾರಿಗಳನ್ನ, ಶಿಕ್ಷಣ ಪ್ರೇಮಿಗಳನ್ನ ಮತ್ತು ಜನಸೇವಕರನ್ನ ಭೇಟಿ ಮಾಡಿ ಶಾಲೆಗಳಿಗೆ ಡಿಜಿಟಲ್ ಸೇವೆ ಒದಗಿಸುವಲ್ಲಿ ಸಫಲರಾಗಿದ್ದರು. ಯಾರೇ ಓಳ್ಳೆಯ ಕೆಲಸ ಮಾಡಿದರೂ ಅವರ ಕುರಿತು  ಶ್ಲಾಘನೆ ಮಾಡುತ್ತಿದ್ದರು ಮತ್ತು ಅಷ್ಟೇ ಕಟ್ಟನಿಟ್ಟಿನ ನಿರ್ಣಯ ತೆಗೆದುಕೊಳ್ಳುವ ಇಂತಹ ಅಧಿಕಾರಿಗಳ ಬಿಳ್ಕೋಡುಗೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸರಕಾರಿ ನೌಕರ ಸಂಘಟನೆ, ಶಿಕ್ಷಕ ಸಂಘಗಳು, ಸಮಸ್ತ ಶಿಕ್ಷಕ ಬಳಗ ಹಾಗೂ ಅನುದಾನ ರಹಿತ ಅನುದಾನ ಸಹಿತ ಶಾಲೆಯ ಶಿಕ್ಷಕರ ಸಂಯುಕ್ತ ಆಶ್ರಯದಲ್ಲಿ ಇಂದು (ಮಾರ್ಚ 30) ಕಿತ್ತೂರು ಪಟ್ಟಣದ ರಾಜಗುರು ಗುರು ಭವನದಲ್ಲಿ ನೆರವೇರಸಲಾಗುವುದು. ಕಾರಣ ತಾಲೂಕಿನ ಎಲ್ಲ ಸರ್ಕಾರಿ, ಅನುದಾನ ರಹಿತ, ಅನುದಾನ ಸಹಿತ, ಶಿಕ್ಷಕರು ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.

Post a Comment

0 Comments