ಕಿತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಾಯಿ ತುಂಬಿದ್ದ ವಾಹನ ಪಲ್ಟಿ

ಕಿತ್ತೂರ ವಿಜಯ 
ಚನ್ನಮ್ಮನ ಕಿತ್ತೂರು : ಪಟ್ಟಣದ ಹತ್ತಿರ ಇರುವ ಶಿವಾ ಪೆಟ್ರೋಲ್ ಪಂಪ್ ಹತ್ತಿರ ರಾಷ್ಟೀಯ ಹೆದ್ದಾರಿ 4 ರ ಮೇಲೆ ಇಂದು ಮುಂಜಾನೆ ಮದ್ಯವನ್ನು ಹೊತ್ತು ಹೋಗುತ್ತಿರುವ ವಾಹನ ಪಲ್ಟಿಯಾಗಿದ್ದು ನೂರಾರು ಮದ್ಯದ ಬಾಕ್ಸ್‌‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಘಟನೆ ನಡೆದ ವರದಿ ಸ್ಥಳೀಯರಿಂದ ಲಭ್ಯವಾಗಿದೆ.
ಪಲ್ಟಿಯಾದ ವಾಹನ ಅಬಕಾರಿ ಇಲಾಖೆಗೆ ಸೇರಿದ್ದು ಎಂದು ತಿಳಿದು ಬಂದಿದ್ದು ಘಟನಾ ಸ್ಥಳಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಆಗಮಿಸಿ ವಾಹನದಲ್ಲಿದ್ದ ಹಾಗೂ ಚೆಲ್ಲಾಪಿಲ್ಲಿಯಾಗಿ ಬಿದ್ದ ಸರಾಯಿ ಬಾಕ್ಸ್ ಗಳನ್ನು ಬೇರೆ ವಾಹನಕ್ಕೆ ವರ್ಗಾಯಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಇನ್ನೂ ಘಟನೆಗೆ ನಿಖರ ಮತ್ತು ಸ್ಪಷ್ಟ ಮಾಹಿತಿ ಲಭ್ಯವಾಗದ ಕಾರಣ ಅಧಿಕಾರಿಗಳ ತನಿಖೆ ನಂತರ ಮಧ್ಯ ಅಬಕಾರಿ ಇಲಾಖೆಯದ್ದು ಅಥವಾ ಖಾಸಗಿಯದ್ದೊ ಎಂದು ತನಿಕಾ ವರದಿಯ ನಂತರ ಸ್ಪಷ್ಟವಾಗಲಿದೆ.

Post a Comment

0 Comments