ದೇಗಾಂವದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ



KITTUR VIJAY

ಚನ್ನಮ್ಮನ ಕಿತ್ತೂರ: ಗ್ರಾಮೀಣ ಮಕ್ಕಳಿಗೆ ಮೂಲಭೂತ ಸೌಲಭ್ಯಗಳ ಜೊತೆಗೆ ಗುಣಮಟ್ಟದ ಶಿಕ್ಷಣ ದೊರೆತಲ್ಲಿ ಮೌಲ್ಯಯುತ ಬದುಕು ರೂಪಿಸಿಕೊಳ್ಳಲು ಸಾಧ್ಯವೆಂದು ಶಿಕ್ಷಕ ಬಸವರಾಜ ಅಪ್ಪೋಜಿ ಹೇಳಿದರು. 

ತಾಲೂಕಿನ ದೇಗಾಂವ ಗ್ರಾಮದ ಹಿರಿಯ ಸರ್ಕಾರಿ  ಪ್ರಾಥಮಿಕ ಕನ್ನಡ ಶಾಲೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ೭ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಥಿತಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದವರು. ಶ್ರೀಮಂತಿಕೆಯಿAದ ಎಲ್ಲವನ್ನು ಪಡೆಯಲು ಸಾಧ್ಯವಿಲ್ಲಾ. ಪೋಷಕರು ಮಕ್ಕಳ ಬಗ್ಗೆ ಅವರ ಭಾವನೆಗೆ ಒತ್ತು ನೀಡುವುದರ ಜೊತೆಗೆ ಉತ್ತಮ ಸಂಸ್ಕಾರದ ಪಾಠ ಕಲಿಸಬೇಕು ಎಂದರು.


ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಅಗತ್ಯ. ಪ್ರತಿಯೊಬ್ಬರು ಒಗ್ಗಟ್ಟಾಗಿ ಮಕ್ಕಳ ಶಿಕ್ಷಣದ ಅಭಿವೃದ್ಧಿಗೊಸ್ಕರ ಶ್ರಮಿಸುವುದು ಅಗತ್ಯವಾಗಿದೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಉತ್ತಮ ಶಿಕ್ಷಣ ನೀಡಿ ದೇಶದ ಆಸ್ತಿಯನ್ನಾಗಿ ಮಾಡಿ. ಸಮಾಜ ನಮಗಾಗಿ ಏನು ಕೊಟ್ಟಿದ್ದೇ ಅನ್ನುವುದಕ್ಕಿಂತ ಸಮಾಜಕ್ಕಾಗಿ ನಾವು-ನೀವು ಏನು ಕೊಟ್ಟಿದ್ದೇವೆ. ಎನ್ನುವುದು ಮುಖ್ಯ ಎಂದರು.


ಬೈಲೂರ ಕ್ಲಸ್ಟರ್ ಸಿಆರ್‌ಪಿ ಸಂಜು ಹುಬ್ಬಳ್ಳಿ ಮಾತನಾಡಿ ಶಾಲೆಗಳು ಅಭಿವೃದ್ದಿಯಾಗಬೇಕಾದರೆ ಗ್ರಾಮಸ್ಥರ, ಮಕ್ಕಳ ಹಾಗೂ ಪೋಷಕರ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷಣಿ ಶ್ರೀಮತಿ. ಮಲ್ಲವ್ವ ನಾವಲಗಟ್ಟಿ  ವಹಿಸಿದ್ದರು. 


ಮಕ್ಕಳಿಂದ ಆಕರ್ಷಕ ಮನೋರಂಜನೆ ಮತ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮಣ ಸೆಳೆದವು. ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಪದಕ ವಿತರಿಸಲಾಯಿತು. 


ನಿರೂಪಣೆ ಶಿಕ್ಷಕಿ ಎಸ್,ಎಸ್, ಬಿಕ್ಕಮಠ, , ಸ್ವಾಗತ, ವಂದನಾರ್ಪಣೆ ಶಿಕ್ಷಕಿ, ವ್ಹಿ.ಎಮ್. ಮಾನ್ಯದಮಠ 

  

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮುಪ್ಪಿನಮಠ, ಗ್ರಾಪಂ ಉಪಾದ್ಯಕ್ಷ  ರೇಣುಕಾ ಮಡಿವಾಳರ, ಪ್ರಧಾನ ಗುರು ಎಸ್, ಎಲ್ ಪೋಳ್, ಪಿಡಿಓ ಮೇರಿ ಯಲಕಪತಿ ನಾಗಯ್ಯಾ, ಮಹಾಂತೇಶ ದುಗ್ಗಾಣಿ, ಮೌನೇಶ ಬಡಿಗೇರ, ಈರಣ್ಣಾ ಹುಬ್ಬಳ್ಳಿ, ಅಶೋಕ ಅರಳಿಮರದ, ರಮೇಶ ಮಡಿವಾಳರ, ಗಂಗಾಧರ ಕಾದ್ರೋಳ್ಳಿ, ಮಹಾಂತೇಶ ದೊಡ್ಡಮನಿ, ಮಲ್ಲಿಕಾರ್ಜುನ ಇಟ್ನಾಳ, ಭರತೇಶ ಗಂದಿಗವಾಡ, ಗ್ರಾಪಂನಿಕಟಪೂರ್ವ ಅಧ್ಯಕ್ಷ  ಅದೃಶ್ಯ ಪತ್ತಾರ, ಸಹ ಶಿಕ್ಷಕರುಗಳಾದ, ಎಸ್,ಎ, ಬುಡವಿ, ಎಸ್,ಎಸ್, ಕುಂರದನಾಡ, ಎಸ್‌ಎಸ ಹಾಲಗೇರಿ, ಎ.ಸಿ ಚೌಹಾನ, ಜಿ.ಆರ್ ಹೊಂಬಳ, ಎಂ,ಟಿ ಬಾರ್ಕಿ, ತನುಜಾ ತೆಂಬದಮನ. ಸೇರಿದಂತೆ ಮಕ್ಕಳು,  ಹಿರಿಯರು, ಗ್ರಾಮಸ್ಥರು, ಗ್ರಾಪಂ ಹಾಗೂ ಎಸ್‌ಡಿಎಂಸಿ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರಿದ್ದರು. 


Post a Comment

0 Comments