ಕಿತ್ತೂರು ವಿಜಯ
ಚನ್ನಮ್ಮನ ಕಿತ್ತೂರು: ಪಟ್ಟಣದ ಗಜರಾಜ ಪ್ಯಾಲೇಸ್ ಹತ್ತಿರ ಕುಲವಳ್ಳಿ ಕ್ರಾಸ್ನಲ್ಲಿ ಹಾಕಿರುವ ಚುನಾವಣಾ ಚೆಕ್ ಪೋಸ್ಟ್ ಹಿಂದುಗಡೆ ಇರವ ಗಿಡದ ಕೆಳಗೆ ಕುಡಿದ ನಶೆಯಲ್ಲಿ ಮಲಗಿದ್ದ ವ್ಯಕ್ತಿ ಸಾವಿಗಿಡಾಗಿದ್ದಾನೆ.
ಮೃತ ದುರ್ದೈವಿ ಕುಲವಳ್ಳಿ ಗ್ರಾಮದ ಮಡಿವಾಳೆಪ್ಪ ಅರ್ಜುನ ಮಲಕಿನಕೊಪ್ಪ (35) ಎಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಕುಡಿದು ಕುಡಿದು ಆಹಾರ ಸೇವಿಸದೆ ಮೃತನಾಗಿದ್ದು ಮೃತ ಶರೀರದ ಮೃದು ಭಾಗದಲ್ಲಿ ಇರುವೆಗಳು ಕಡಿದು ಕಿವಿ ಹತ್ತಿರ ಸ್ವಲ್ಪ ರಕ್ತ ಬಂದಿದೆ ಎಂದು ಪಿಎಸ್‌ಐ ಪ್ರವೀಣ ಗಂಗೋಳ ತಿಳಿಸಿದ್ದಾರೆ.
ಕಳೆದ ಎರಡ್ಮೂರು ದಿನಗಳಿಂದ ಮನೆಯಿಂದ ಹೊರಗೆ ಹೋದವನು ಬರುತ್ತೇನೆ ಎಂದು ಹೋಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಕುರಿತು ಚನ್ನಮ್ಮನ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments