ಅರೇಂಜ್ ಕೌಂಟಿ ಫಂಕ್ಷನ್ ಹಾಲ್‌ನಲ್ಲಿ ಡಾಕ್ಟರ್ ಪಿಕ್ಸಿಟ್ ಹಾಗೂ ಹೈಸಾ ಪೇಂಟ್ ಕಂಪನಿ ಸಭೆ ಜರುಗಿತು


ಯುವ ಮುಖಂಡ ಕಿರಣ ವಾಳದ ಕಾರ್ಯಕ್ರಮದ ಉದ್ಘಾಟನೆ ಮಾಡಿದರು 

 ಎಂ. ಕೆ. ವಾಣಿ ನ್ಯೂಸ್‌ 

ಚನ್ನಮ್ಮನ ಕಿತ್ತೂರು:  ಪಟ್ಟಣದ ಅರೇಂಜ್ ಕೌಂಟಿ ಫಂಕ್ಷನ್ ಹಾಲ್‌ನಲ್ಲಿ ಯುವ ಮುಖಂಡ  ಕಿರಣ ವಾಳದ ಅವರ ಮಾಲಿಕತ್ವದ  ಯಶೋಮಾರ್ಗ ಸೋಲ್ಯೂಷನ್ಸ್ ನೇತೃತ್ವದಲ್ಲಿ  ಫೆಡಿಲೈಟ್  ಗ್ರುಪ್ಪಿನ ಡಾಕ್ಟರ್ ಪಿಕ್ಸಿಟ್ ಹಾಗೂ ಹೈಸಾ ಪೇಂಟ್ ಕಂಪನಿ ವತಿಯಿಂದ, ಹೊಸ ಪೇಂಟ್ ಉತ್ಪನ್ನಗಳ ಪ್ರಚಾರ, ವಿವಿಧ ಪ್ರಕಾರದ ಪೇಂಟ್‌ಗಳ ಕುರಿತು ಮಾಹಿತಿ ಹಾಗೂ ನೂತನ ಪೇಂಟ್‌ಗಳ ಉದ್ಗಾಟನೆ  ಹಾಗೂ ಪೇಂಟರಗಳ ಸಭೆ ಜರುಗಿತು.

ಡಾಕ್ಟರ್ ಪಿಕ್ಸಿಟ್ ಕಂಪನಿಯ ಮ್ಯಾನೇಜರ್  ಉತ್ಪನ್ನಗಳ ಕುರಿತು   ಮಾಹಿತಿ ನೀಡಿದರು  

ಈ ವೇಳೆ ಕಿರಣ ವಾಳದ ಕೇಕು ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ  ಫೆಡಿಲೈಟ್  ಗ್ರುಪ್ಪಿನ ಡಾಕ್ಟರ್ ಪಿಕ್ಸಿಟ್ ಹಾಗೂ ಹೈಸಾ ಪೇಂಟ್ ಕಂಪನಿ ಪೇಂಟ್‌ಗಳ ಕುರಿತು ಮಾಹಿತಿ ನೀಡಿದರು.

ಡಾಕ್ಟರ್ ಪಿಕ್ಸಿಟ್ ಕಂಪನಿಯ ಮ್ಯಾನೇಜರ್ ಪವಾಡೆಪ್ಪ ಮಹಾಲಿಂಗಪೂರ ಕಂಪನಿಯ ಉತ್ಪನ್ನಗಳ ಕುರಿತು ಸವಿಸ್ತಾರ  ಮಾಹಿತಿ ನೀಡಿದರು.

ಈ ವೇಳೆ ಪೇಂಟರ್‌ಗಳಾದ  ಕಿರಣ ಹಂಚಿನಮನಿ, ರವಿ ಪರಸನಟ್ಟಿ,  ಜಗದೀಶ ಕಲಭಾವಿಮಠ, ಕಿರಣ ರಾವಳ, ರಾಮು ಹನಗಿ, ಅಲ್ತಾಫ, ಫಕ್ರುದ್ದಿನ , ಶಾನು, ಗೀರಿಶ, ಬಸವರಾಜ,  ಅಭಿಶೇಕ , ನಾಸಿರ, ಮುಸ್ತಾಕ, ಸೇರಿದಂತೆ ಇನ್ನೂ ಅನೇಕ ಪೇಂಟರಗಳು ಇದ್ದರು.


Post a Comment

0 Comments