![]() |
| ಹರೀಶ ಬೆಂಡಿಗೇರಿ ಪಿ ಹೆಚ್ ಡಿ ಪುರಸ್ಕೃತರು |
ಬೆಳಗಾವಿ: ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ) ಬೆಳಗಾವಿಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬೈಲಹೊಂಗಲ ತಾಲೂಕಿನ ಹೊಳಿಹೊಸುರು ಗ್ರಾಮದ ಹರೀಶ ಬೆಂಡಿಗೇರಿ ಅವರಿಗೆ ಪಿ ಹೆಚ್ ಡಿ ಲಭಿಸಿದೆ.
ನಗರದ ಅಂಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ವಿಜಯ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಎ ಸ್ಟಡಿ ಅಂಡ್ ಡೆವಲಪ್ಟೆಂಟ್ ಆಫ್ ವೆರಿಯಸ್ ಸೆನ್ಸರ್ಸ್ ಬೇಸ್ ಆನ್ ಫೈಬರ್ ಓಪ್ಟಿಕ್ ಟೆಕ್ನಾಲಜಿ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿ ಟಿ ಯು ಪಿ.ಎಚ್.ಡಿ. ನೀಡಿ ಗೌರವಿಸಿದೆ.
ಹರೀಶ ಬೆಂಡಿಗೇರಿ ಅವರ ಸಾದನೆಗೆ ಖ್ಯಾತ ದಂತ ವೈದ್ಯರಾದ ಡಾ ಜಗದೀಶ ಹಾರುಗೊಪ್ಪ, ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಬಸವರಾಜ ಚಿನಗುಡಿ, ನಾಡಿನ ಸಂತ ಮಹಾಂತರು, ಮಠಾಧೀಶರು, ರಾಜಕಾರಣಿಗಳು, ಸ್ನೇಹಿತರು, ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಅಭಿನಂದಿಸಿದ್ದಾರೆ.

0 Comments