ಚನ್ನಮ್ಮನ ಕಿತ್ತೂರನ್ನು ಶೀಘ್ರವಾಗಿ ಪ್ರವಾಸ ತಾಣವನ್ನಾಗಿ ಮಾಡುವಂತಾಗಬೇಕು; ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು; ಅಭಿಮತ


ಎಂ.ಕೆ. ವಾಣಿ ನ್ಯೂಸ್ 

ಚನ್ನಮ್ಮನ ಕಿತ್ತೂರು:- ಚನ್ನಮ್ಮನ ಕಿತ್ತೂರನ್ನು ಶೀಘ್ರವಾಗಿ ಪ್ರವಾಸ ತಾಣವನ್ನಾಗಿ ಮಾಡಿ ರಾಜ್ಯದ, ರಾಷ್ಟ್ರದ ಜನತೆ ರಾಣಿ ಚನ್ನಮ್ಮನವರ ಇತಿಹಾಸವನ್ನು ಅರಿಯಲು ಅವಕಾಶ ಮಾಡಿಕೊಡಬೇಕು ಎಂದು ಸರಕಾರವನ್ನು ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಆಗ್ರಹಿಸಿದರು.

ಅವರು ಕಿತ್ತೂರಿನ  ರಾಜಗುರು ಸಂಸ್ಥಾನ ಕಲ್ಮಠ ದಲ್ಲಿವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ,ರಾಜಗುರು ಶಿಕ್ಷಣ ಸಂಸ್ಥೆ ಮತ್ತು ಇತರ ಸಂಘ ಸಂಸ್ಥೆಗಳ  ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮನವರ 195 ನೇಯ ಪುಣ್ಯಸ್ಮರಣೆಯ ಅಂಗವಾಗಿ ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಇತ್ತೀಚೆಗೆ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಮತ್ತು ಕಿತ್ತೂರ ತಾಲೂಕನ್ನು ಚನ್ನಮ್ಮನ ಕಿತ್ತೂರು ತಾಲೂಕು ಎಂದು ಘೋಷಿಸಿದ ಕರ್ನಾಟಕದ ಘನ ಸರಕಾರವನ್ನು ಅಭಿನಂದಿಸುತ್ತ ಆಶೀರ್ವದಿಸಿದರು.  

ಅಧ್ಯಕ್ಷತೆಯನ್ನು ವಹಿಸಿ ಕಿತ್ತೂರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಾ.ಎಸ್.ಬಿ. ದಳವಾಯಿ ಕಳೆದ ತಿಂಗಳು ನಡೆದ ಸಂಗೊಳ್ಳಿ ಉತ್ಸವದಲ್ಲಿ  ಚನ್ನಮ್ಮಳ ಬಲಗೈ ಬಂಟ ಶೂರ ಸಂಗೊಳ್ಳಿ ರಾಯಣ್ಣನ ನೆನಪಿಗಾಗಿ ರಾಕ್ ಗಾರ್ಡನ್ ಮತ್ತು ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗಳ ಉದ್ಘಾಟಣೆ ಆದದ್ದು ಸಂತಸದ ವಿಷಯವಾಗಿದ್ದು ಇದೇ ರೀತಿ ಕಿತ್ತೂರಿನ ಅರಮನೆಯನ್ನೂ ಐತಿಹಾಸಿಕ ತಾಣವನ್ನಾಗಿ ನಿರ್ಮಿಸುವತ್ತ ಕಿತ್ತೂರ ಅಭಿವೃದ್ಧಿ ಪ್ರಾಧಿಕಾರ ಕ್ರಿಯಾಶೀಲವಾಗಬೇಕೆಂದು ಮನವಿ ಮಾಡಿದರು.                                     

ಈ ವೇಳೆ ಕಿತ್ತೂರು ಚನ್ನಮ್ಮ ತಾಯಿಯ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚಣೆ ಮಾಡಲಾಯಿತು.

ಈಶ್ವರ ಗಡಿಬಿಡಿ  ಪ್ರಾರ್ಥಿಸಿದರು. ರಾಜೇಶ್ವರಿ ಕಳಸಣ್ಣವರ ಸ್ವಾಗತಿಸಿದರು. ಗಂಗಪ್ಪ ಕರೀಕಟ್ಟಿ ವಂದಿಸಿದರು. ನಿವೃತ್ತ ಮುಖ್ಯಾಧ್ಯಾಪಕರಾದ ಎಸ್.ಎಸ. ನರಸಣ್ಣವರ ನಿರೂಪಿಸಿದರು.

ರಾಜಗುರು ಶಿಕ್ಷಣ ಸಂಸ್ಥೆಯ ಶಿಕ್ಷಕರು,ವಿದ್ಯಾರ್ಥಿಗಳು, ಸೇರಿದಂತೆ ಇತರರಿದ್ದರು.               

Post a Comment

0 Comments