ಡಾ ಸಿ. ಕೆ. ನಾವಲಗಿ ಅವರಿಗೆ ಪ್ರೊ . ಪ್ರಹ್ಲಾದಕುಮಾರ ಬಾಗೋಜಿ ದತ್ತಿ ಪ್ರಶಸ್ತಿ

 

ಡಾ ಸಿ. ಕೆ. ನಾವಲಗಿ ಪ್ರಶಸ್ತಿ ಪುರಸ್ಕೃತರು



ಎಂ.ಕೆ. ವಾಣಿ ನ್ಯೂಸ್

ಗೋಕಾಕ: ತಮ್ಮ ಜೀವಮಾನ ಸಾಧನೆಗೆ,  ಜಾನಪದ ತಜ್ಞ , ಸಾಹಿತ್ಯ ಚಿಂತಕ ಡಾ . ಸಿ. ಕೆ. ನಾವಲಗಿ ಅವರು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ 2022 ನೇ ಸಾಲಿನ "ಪ್ರೊ ಪ್ರಹ್ಲಾದಕುಮಾರ ಬಾಗೋಜಿ ದತ್ತಿ ಪ್ರಶಸ್ತಿ” ಗೆ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನವು ಪ್ರಕಟಿಸಿದೆ.

ಪ್ರಶಸ್ತಿ ಪ್ರದಾನವು ಫೆಬ್ರವರಿ 4 ರಂದು ಬೆಳಗಾವಿ ಆಯ.ಎಮ್.‌ಇ. ಆರ್‌ ಸಭಾ ಭವನದಲ್ಲಿ ನಡೆಯು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ. ಪ್ರಸ್ತುತ ಪ್ರತಿಷ್ಠಾನದಿಂದ ನಾವಲಗಿ ಅವರ ಕೃತಿಗೆ ಹಿಂದೆಯೂ ದತ್ತಿ ಪ್ರಶಸ್ತಿ ಲಭಿಸಿತ್ತು . ಇವರ ಜಾನಪದ ಅಧ್ಯಯನ, ಸಂಶೋಧನ , ಸಂಪಾದನ, ಸಂಕಲನ ಮತ್ತು ವಿಮರ್ಶೆಯನ್ನು ಅನುಲಕ್ಷಿಸಿ ,  ಕರ್ನಾಟಕ ಸರಕಾರ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಡಾ. ಬಿ ಎಸ್ ಗದ್ದಗಿಮಠ ಹೆಸರಿನ ರಾಜ್ಯಮಟ್ಟದ " ಜಾನಪದತಜ್ಞ" ಪ್ರಶಸ್ತಿಯನ್ನುನೀಡಿದೆ. ಇದೇ ಅಕಾಡೆಮಿಯ ಶ್ರೇಷ್ಠ ಪುಸ್ತಕ ಪ್ರಶಸ್ತಿ ಎರಡು ಸಲ ದೊರೆತಿದೆ. ಕೇಂದ್ರ ಕರ್ನಾಟಕ ಜಾನಪದ ಪರಿಷತ್ತಿನ "ವಿದ್ವತ್ಗೌರವ" ಅಲ್ಲದೆ ಕನ್ನಡ ಸಾಹಿತ್ಯ ಸಾಧನೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ದತ್ತಿ ಪ್ರಶಸ್ತಿಗಳು’, ಸಂಘ–ಸಂಸ್ಥೆ, ಮಠಮಾನ್ಯಗಳಿಂದ ‘ಜಾನಪದಸಿರಿ’, ‘ಅತ್ತಿಮಬ್ಬೆ’, ‘ಸಾಹಿತ್ಯಭೂಷಣ’, ‘ಸಿರಿಗನ್ನಡ’ ಮುಂತಾದ ಪ್ರಶಸ್ತಿಗಳನ್ನು ಸಿ .ಕೆ. ನಾವಲಗಿ ಅವರು ಮುಡಿಗೇರಿಸಿಕೊಂಡದು ಇಲ್ಲಿ ಸ್ಮರಣೀಯ. ಇವರು ನಗರದ ಜೆ. ಎಸ್. ಎಸ್ .ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ-ಪ್ರಾಚರ್ಯರಾಗಿ ನಿವೃತ್ತಿಯಾಗಿದ್ದಾರೆ.

Post a Comment

0 Comments