ಎಂ ಕೆ ವಾಣಿ ನ್ಯೂಸ್
ಚನ್ನಮ್ಮನ ಕಿತ್ತೂರು : ಸಮೀಪದ
ಮಂಗೆನಕೊಪ್ಪ ಗ್ರಾಮದ ಹೊರವಲಯದ
ಕಿತ್ತೂರು-ಬೀಡಿ ರಸ್ತೆಯಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಖಾನಾಪುರ ತಾಲೂಕಿನ ಗೋಲಿಹಳ್ಳಿಯಲ್ಲಿರುವ ಬೀಗರ ಮನೆಗೆ ವಲಿಮಾ ಕಾರ್ಯಕ್ರಮಕ್ಕೆ
ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಚಾಲಕ ಶಾರೂಕ್ ಪೆಂಡಾರಿ (30), ಇಟ್ಬಾಲ್
ಜಮಾದಾರ್ (50) ಸಾನಿಯಾ ಲಂಗೋಟಿ (37), ಉಮರಾ ಬೇಗಮ್ ಲಂಗೋಟಿ(17), ಶಬನಮ್ ಲಂಗೋಟಿ (37), ಫರಾನ್ ಲಂಗೋಟಿ(13) ಮೃತ ದುರ್ದೈವಿಗಳಾಗಿದ್ದಾರೆ.
ಫರಾತ ಬೆಟಗೇರಿ (18), ಸೋಫಿಯಾ ಲಂಗೋಟಿ(22), ಸಾನಿಯಾ ಇನ್ಸಾಲ್ ಜಮಾದಾರ್ (36) ಮಾಹಿನ್ ಲಂಗೋಟಿ (7) ಗಂಭೀರವಾಗಿ ಗಾಯವಾಗಿದೆ.
ಘಟನಾ ಸ್ಥಳಕ್ಕೆ ಬೆಳಗಾವಿ
ಎಸ್‌ಪಿ ಡಾ ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.
0 Comments