ಫೆ 13 ರಿಂದ ಫೆ 17 ರ ವರೆಗೆ ಸೂರ್ಯನಾರಾಯಣ ದೇವರ 5 ನೇ ವರ್ಷದ ಜಾತ್ರೆ ನಡೆಯಲಿದೆ; ಸುರೇಶ ಜೋರಾಪೂರ

ದೇವಸ್ಥಾನದ ಧರ್ಮದರ್ಶಿಗಳಾದ ಸುರೇಶ ಜೋರಾಪೂರ 

ಎಂ.ಕೆ. ವಾಣಿ ನ್ಯೂಸ್ 

ಚನ್ನಮ್ಮನ ಕಿತ್ತೂರು: ತಾಲೂಕಿನ  ಗಿರಿಯಾಲ ಚನ್ನಾಪೂರ ಗ್ರಾಮದಲ್ಲಿ ಫೆ 13 ರಿಂದ ಫೆ 17 ವರೆಗೆ ಸೂರ್ಯನಾರಾಯಣ ದೇವರ 5 ನೇ ವರ್ಷದ ಜಾತ್ರೆ ನಡೆಯಲಿದೆ.

ಫೆ 13 ಮತ್ತು 14 ರಂದು ಹೋಮ ಹವನ ಕಾರ್ಯಕ್ರಮ, ಫೆ 15 ರಂದು ಮೂರ್ತಿಗಳ ಪ್ರಾಣ ಪ್ರತಿಷ್ಠಾಪಣೆ ಹಾಗೂ ಜಾತ್ರೆಯ ಉದ್ಘಾಟನೆ ಕಾರ್ಯಕ್ರಮ ಜರುಗುವುದು. ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ನಿಚ್ಚಣಕಿ ಶ್ರೀ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ನಯಾನಗರದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಗಿರಿಯಾಲ ಚನ್ನಾಪೂರ ಶ್ರೀ ಸಿದ್ದಾರೂಡ ಮಠದ ಶ್ರೀ ಸದಾನಂದ ಮಹಾಸ್ವಾಮಿಗಳು, ಗಂದಿಗವಾಡ ರಾಜಗುರು ಹಿರೇಮಠದ ಮೃತ್ಯುಂಜಯ ಸ್ವಾಮಿಗಳು, ಸೋಂದಾ ಮಠದ ಶ್ರೀ ಮಹಾಬಳೇಶ್ವರ ಜೋಷಿ, ಚಿದಂಬರ ಭಟ್ ಅವರುಗಳು ದಿವ್ಯ ಸಾನಿದ್ಯ ವಹಿಸಲಿದ್ದಾರೆ.

ಶಾಸಕ ಬಾಬಾಸಾಹೇಬ ಪಾಟೀಲ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಮೃಣಾಲ ಹೆಬ್ಬಾಳಕರ, ಡಾ ಹಿತಾ ಹೆಬ್ಬಾಳಕರ, ಭಾಜಪಾ ಮಂಡಳ ಅಧ್ಯಕ್ಷ ಕೆಎಮ್‌ಎಫ್‌ ನಿರ್ದೇಶಕ ಡಾ ಬಸವರಾಜ ಪರವಣ್ಣವರ, ಉದ್ಯಮಿ ವಾಸುದೇವ ಕಲಾಲ, ಅವರು ಉದ್ಘಾಟನೆ ಮಾಡಲಿದ್ದಾರೆ.

ಗಿರಿಯಾಲ ಚನ್ನಾಪೂರ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ


ಫೆ ೧೬ ರಂದು ಮುಂಜಾನೆ ಗಂಟೆಗೆ ಸಮೀಪದ ನಿಚ್ಚಣಕಿ ಶ್ರೀ ಮಡಿವಾಳೇಶ್ವ ಮಠದಿಂದ ಪಟ್ಟಣದ ಸೋಮವಾರ ಪೇಟೆ, ಗುರುವಾರ ಪೇಠೆ ರಾಷ್ಟ್ರಿಯ ಹೆದ್ದಾರಿ ಹತ್ತಿರ ಇರುವ ಚನ್ನಮ್ಮನ ವರ್ತುಳ ಮುಖಾಂತರ ಚನ್ನಾಪೂರ ಗಿರಿಯಾಲ ಮಾರ್ಗವಾಗಿ ಸಕಲ ವಾದ್ಯ ಮೇಳ, ಸುಮಂಗಲೆಯರ ಕುಂಬಮೇಳ ಮತ್ತು ವಾದ್ಯಘೋಷಗಳೊಂದಿಗೆ  ಪಲ್ಲಕ್ಕಿ ಉತ್ಸವದ ಮೆರವಣೆಗೆಯು ಸಕಲ ಸೂರ್ಯನಾರಾಯಣ ದೇವರ ಸದ್ಬಕ್ತರೊಂದಿಗೆ ಸೂರ್ಯನಾರಾಯಣ ದೇವಸ್ಥಾನ ತಲುಪುವುದು. ನಂತರ ಪೂಜೆ ಅಭಿಷೇಕ, ಮಹಾಪ್ರಸಾದ ಜರುಗುವುದು. ಸಂಜೆ 5 ಗಂಟೆಗೆ ರಥೋಥ್ಸವ ಕಾರ್ಯಕ್ರಮ ಜರುಗುವುದು. ಸಂಜೆ 6.30 ಕ್ಕೆ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಅವರು ಉದ್ಘಾಟನೆ ಮಾಡಲಿದ್ದಾರೆ. ರಾತ್ರಿ 8 ಗಂಟೆಗೆ ದೂರದರ್ಶನ ಕಲಾವಿದರಿಂದ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.

ಫೆ 17 ರಂದು ಮುಂಜಾನೆ 6 ಗಂಟೆಗೆ ಅಭಿಷೇಕ ಹೋಮ ಹವನ ಮತ್ತು ಓಕಳಿ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು  ಸೂರ್ಯನಾರಾಯಣ ದೇವಸ್ಥಾನದ ಸಂಸ್ಥಾಪಕರು ಹಾಗೂ ಧರ್ಮದರ್ಶಿಗಳಾದ ಸುರೇಶ ಜೋರಾಪೂರ (ಕಲಾಲ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments