*ಬೆಳಗಾವಿ* ರೈತರ ಮಾರುಕಟ್ಟೆಯ ಸಲುವಾಗಿ ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆ ಹಾಗೂ ಜೈ ಕಿಸಾನ್ ಮಾರುಕಟ್ಟೆ ಈ ಎರಡು ಮಾರುಕಟ್ಟೆಗಳು ರೈತರಿಗೆ ವ್ಯಾಪಾರ ಮಾಡುವ ಅವಕಾಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಎಪಿಎಂಸಿ ಹಾಗೂ ಜೈ ಕಿಸಾನ್ ವರ್ತಕರ ಸಭೆಯಲ್ಲಿ ಮಾತನಾಡಿದವರು ಮಾರುಕಟ್ಟೆಯನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದೆ ಹೊಸದಾಗಿ ಜೈ ಕಿಸಾನ್ ಮಾರುಕಟ್ಟೆ ಆರಂಭಿಸಿದರಿಂದ ಎಪಿಎಂಸಿ ಮಾರುಕಟ್ಟೆ ನಷ್ಟ ಅನುಭವಿಸುವಂತಾಗಿದೆ ಆದ್ದರಿಂದ ಇದಕ್ಕೆ ಜೈ ಕಿಸಾನ್ ಮಾರುಕಟ್ಟೆ ಸಹಕಾರ ಅವಶ್ಯವಾಗಿದೆ
ವೇಳೆ ಮಾತನಾಡಿದ ಕೆಲವು ಎಪಿಎಂಸಿ ವ್ಯಾಪಾರಸ್ಥರು ಮಧ್ಯಾಹ್ನ 12 ರಿಂದ ರಾತ್ರಿ 12 ರವರೆಗೆ ಒಂದೊಂದು ಮಾರುಕಟ್ಟೆ ವ್ಯಾಪಾರ ನಡೆಸಬೇಕು ಎಂದು ಹೇಳಿದರು
ಇದಕ್ಕೆ ಅಪೇಕ್ಷಣೆ ನೀಡಿದ ಜೈ ಕಿಸಾನ್ ವ್ಯಾಪಾರಸ್ಥರು ನಮ್ಮಲ್ಲಿ ಕರೆದಿಯಾದ ವಸ್ತುಗಳು ಗೋವಾ ರಾಜ್ಯಕ್ಕೆ ಮಹಾರಾಷ್ಟ್ರಕ್ಕೆ ಬರುತ್ತವೆ ಅರೆತರೂ ಬೆಳ್ಳಂಬೆಳಗ್ಗೆ ಮಾರುಕಟ್ಟೆಗೆ ಬರುತ್ತಾರೆ ರೈತರಿಗೆ ಯಾವ ಕಡೆ ಅನುಕೂಲವಾಗುತ್ತದೆ ಆ ಕಡೆ ರೈತರು ವ್ಯವಹಾರ ಮಾಡಲಿ ಎಂದು ಹೇಳಿದರು
ಇದಕ್ಕೆ ಮಧ್ಯಸ್ಥಿಕೆ ವಹಿಸಿದ ಸಚಿವರು ಎರಡು ಮಾರುಕಟ್ಟೆಯವರು ಹೊಂದಾಣಿಕೆ ಮಾಡಿಕೊಂಡು ವ್ಯಾಪಾರ ಮಾಡಬೇಕೆಂದು ಸೂಚಿಸಿದರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ ಎಪಿಎಂಸಿ ತಿದ್ದುಪಡಿ ಖಾತೆಯನ್ನು ಸರ್ಕಾರ ಆದಷ್ಟು ಬೇಗ ಹಿಂಪಡೆಯಲ್ಲಿದೆ
ಆಗ ಎರಡು ಮಾರ್ಕೆಟಿಗಳಿಗೆ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ ಎರಡು ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮತ್ತು ರೈತರ ನಡುವೆ ಪರಸ್ಪರ ಸಂಬಂಧ ಅತಿಮುಖ್ಯ ಎಂದು ಹೇಳಿದರು
ಶಾಸಕರಾದ ಆಸಿಫ್ ಸೇಠ್ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿವಳಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಇದ್ದರು
0 Comments