ದೇಗುಲ ಒಡೆದು ಕಟ್ಟಿದ ಮಸೀದಿಯನ್ನು ನೀವೇ ಕಿತ್ತು ಹಾಕಿ, ; KS ಈಶ್ವರಪ್ಪ


ದೇಗುಲ ಒಡೆದು ಕಟ್ಟಿದ ಮಸೀದಿಯನ್ನು ನೀವೇ ಕಿತ್ತು ಹಾಕಿ,  ; ಕೆಎಸ್‌ ಈಶ್ವರಪ್ಪ

:500 ವರ್ಷದ ಕೆಳಗೆ ರಾಮ ಹುಟ್ಟಿದ ಜಾಗದಲ್ಲಿ ದೇವಸ್ಥಾನ ಕಿತ್ತು ಹಾಕಿದ್ರು, ಬಾಬರ್‌ ಬಂದು ಬಾಬ್ರಿ ಮಸೀದಿ ಕಟ್ಟಿದ, ಈಗ ಯಾರಾದ್ರೂ ಮಂದಿರ ಕೆಡವಿ ಮಸೀದಿ ಕಟ್ಟಿದರೆ ಅವರಪ್ಪನಿಗೆ ಹುಟ್ಟಿದೋನು ಅಂತ ಕರೀತಿನಿ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಕಿಡಿಕಾರಿದ್ದಾರೆ.

ಅವರು ಬೆಳಗಾವಿಯಲ್ಲಿ ನಡೆದ ಹಿಂದೂ  ಸಮಾವೇಶದಲ್ಲಿ  ಕಾರ್ಯಕರ್ತರ ಉದ್ದೇಶಿಸಿ ಮಾತನಾಡುತ್ತಾ, ವಿಶ್ವನಾಥ ದೇವಸ್ಥಾನದಲ್ಲಿ ಅರ್ಧ ಮಸೀದಿ ಹೇಗೆ ಬಂತು, ಮಥುರಾದಲ್ಲಿ ಅರ್ಧ ಮಸೀದಿ ಹೇಗೆ ಬಂತು, ಲಾಠಿ ಗೋಲಿ ಖಾಯೆಂಗೆ ಮಂದೀರ ವಹಿ ಬನ್ ಗಯಾ ಎಂದು ಕೂಗ್ತಿದ್ವಿ, ಇನ್ನೆರಡು ದೇವಸ್ಥಾನಗಳಿಗೆ ಕೋರ್ಟ್ ಆದೇಶ ನೀಡಿದೆ, ಅಲ್ಲಿರುವ ಮಸೀದಿಗಳು ದ್ವಂಸ ಆಗುತ್ತೆ ದೇವಸ್ಥಾನ ತಲೆ ಎತ್ತುತ್ತೆ, ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಮುಸ್ಲಿಂಮರು ನೀವಾಗಿ ನೀವೆ ಕಿತ್ತು ಹಾಕಿ, ಇಲ್ಲವಾದ್ರೆ ರಾಮನ ಭಕ್ತರು ನಾವು ಮಸೀದಿ ಕಿತ್ತು ಹಾಕ್ತಿವಿ ಎಂದು ಆಕ್ರೋಶದ ನುಡಿಗಳ ನಾಡಿದರು..

ಸಿದ್ದರಾಮಯ್ಯ ನಾವು ಜಾತ್ಯಾತೀತವಾದಿಗಳು ಅಂತಾರೆ, ನಾವು ನಿಮಗಿಂತ ಜಾತ್ಯಾತೀತವಾದಿಗಳು, ಹಿಂದೂ ಮುಸ್ಲಿಂ ಅನ್ಯೋನ್ಯಾಗಿರಬೇಕು ಎನ್ನುವವರು ನಾವು, ನೀವು ನಮಾಜ್ ಮಾಡ್ಕೊಳ್ಳಿ ನಾವು ಅದರ ಗೊಡವೆಗೆ ಬರಲ್ಲ, ಬಾಬರ್ ಕಟ್ಟಡ ಈ ದೇಶದ ಜನರಿಗೆ ನೀವು ಗುಲಾಮರಾಗಿದ್ದಿರಿ ಎಂದು ಹೇಳ್ತಿತ್ತು, ನೀವಾಗಿ ನೀವೆ ಮಥುರಾ ಹಾಗೂ ಕೃಷ್ಣಾದ ಮಸೀದಿ ತಗೆಯಿರಿ, ತೆಗೆಯದಿದ್ದರೆ ಕೊಲೆಗಳಾಗುತ್ತೊ ಇನ್ನೇನಾಗುತ್ತೊ ಗೊತ್ತಿಲ್ಲ, ಅಧಿಕಾರದಾಸೆಗೆ ಮಾಜಿ ಪ್ರಧಾನಿ ನೆಹರು ಪಾಕ್ತಿಸ್ಥಾನವನ್ನು ಮಾಡಿದರು, ಈ ದೇಶದಲ್ಲಿ ಈಗಾಗಲೇ ತ್ರಿಬಲ್ ತಲಾಕ್ ರದ್ದಾಗಿದೆ, ಒಂದು ಗಂಡಿಗೆ ಒಂದು ಹೆಣ್ಣು ಎಂಬ ಸಂದೇಶ ಸಾರಲಾಗಿದೆ, ನಮಗೆ ಒಂದು ಹೆಣ್ಣು ಒಂದು ಗಂಡು ಇತ್ತು ಆದರೆ ಮುಸ್ಲಿಂಮರಿಗೆ ಹಮ್ ಪಾಚ್ ಹಮ್ಕೊ ಪಚ್ಚಿಸ್ ಎಂಬಂತಾಗಿತ್ತು, ಗೋವು ನಮ್ಮ ತಾಯಿ ಗೋಹತ್ಯೆ ನಿಷೇಧ ಮಾಡಿದ್ದಿವಿ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ತಾಕತ್ತಿದ್ದರೆ ಹಿಂಪಡೆಯಿರಿ, ಅದನ್ನ ನಾವು ಹಿಂದೆ ತೆಗೆದುಕೊಳ್ಳಲು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಹೇಳಿದರು.

ಚುನಾವಣೆ ಬಂದ್ರೆ ರಾಮಮಂದಿರ ಬಿಜೆಪಿಯವರಿಗೆ ನೆನಪಾಗುತ್ತೆ ಎನ್ನುವ ಕಾಂಗ್ರೆಸ್ ವಾದಕ್ಕೆ ಟಾಂಗ್‌ ಕೊಟ್ಟ ಅವರು, ನಾವು ಈಗ ರಾಮಮಂದಿರ ಕಟ್ಟಿದ್ದೇವೆ, ಈಗ ರಾಮಮಂದಿರ ಕಟ್ಟಿದ್ದೇವೆ ಅಂತ ರಾಮರಾಜ್ಯ ಯಾವಾಗ ಆಗುತ್ತೆ ಅಂತ ಪ್ರಶ್ನೆ ಕೇಳ್ತಾರೆ, ದೇಶವನ್ನು ಒಡೆದು ಚಿತ್ರಮಾಡಿದರು ಹಿಂದೂಸ್ಥಾನ ಪಾಕಿಸ್ತಾನ ಅಂತ ಮಾಡಿದ್ರು, ನರೇಂದ್ರ ಮೋದಿಯವರು ನಮಗೆ ಪ್ರಧಾನಿ ಬೇಕು ಅಂತ ಹೇಳ್ತಾರೆ, ಇಲ್ಲಿಯ ಮುಸ್ಲಿಂಮರು ದನ ತಿಂದಹಾಗೆ ತಿಂದು ಪಾಕಿಸ್ತಾನಕ್ಕೆ ಜೈ ಅಂತಾರೆ, ಜೈ ಅನ್ನೋದಾದ್ರೆ ಹೊರಗೆ ಬಂದು ಜೈ ಅನ್ನಿ ನಿಮ್ಮನ್ನ ನಮ್ಮ ಕಾರ್ಯಕರ್ತರು ಬಿಡಲ್ಲ ಎಂದರು.

Post a Comment

0 Comments