ಸುಲೋಚನಾ ತವನಪ್ಪಗೌಡ್ರ ಭಜಣ್ಣವರ ಜಿನೈಕ್ಯ; ಗಣ್ಯರ ಸಂತಾಪ

 


ಎಂ.ಕೆ. ವಾಣಿ ನ್ಯೂಸ್

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರು ತಾಲೂಕಿನ ದೇಗುಲಹಳ್ಳಿ ಗ್ರಾಮದ ಜೈನ ಸಮುದಾಯದ ಹಿರಿಯರಾದ ಶ್ರೀಮತಿ ಸುಲೋಚನಾ ತವನಪ್ಪಗೌಡ್ರ ಭಜಣ್ಣವರ ಅವರು ಸೋಮವಾರ ಜಿನೈಕ್ಯರಾದರು. ಮಗ ಅಜೇಯಕುಮಾರ ಭಜಣ್ಣವರ, ಹೆಣ್ಣು ಮಕ್ಕಳಾದ ಬೇಬಕ್ಕ ಭಜಣ್ಣವರ, ಅನಿತಾ ಭಜಣ್ಣವರ, ಚನ್ನಮ್ಮ ಭಜಣ್ಣವರ, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುಲೋಚನಾ ತವನಪ್ಪಗೌಡ್ರ ಭಜಣ್ಣವರ

ಮೃತರ ಪತಿ ಜೀನಕ್ಯ ತವನಪ್ಪಗೌಡ್ರ ಅಣ್ಣಪ್ಪಗೌಡ್ರ ಭಜಣ್ಣವರ ಅವರು ಹಿರಿಯ ಗಾಂಧಿವಾದಿಗಳು. ಮಹಾತ್ಮಾ ಗಾಂಧಿ ಅವರ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಕೊಂಡು ಸದಾ ಚಟುವಟಿಕೆಯ ಬುಗ್ಗೆಯಂತಿದ್ದರು. ಇವರಿಗೆ ಇವರ ಜನಪರ ಕಾರ್ಯಗಳಿಗೆ ಪತ್ನಿ ಸುಲೋಚನಾ ಅವರು ಸದಾ ಬೆನ್ನೆಲುಬಾಗಿ ನಿಂತು ಸಹಾಯ ಸಹಕಾರ ನೀಡುವುದರ ಜೊತೆ ಸ್ವತಃ ಅವರು ಸಹಿತ ಗಾಂಧಿ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ಸತಿಪತಿಗಳಲ್ಲೊಂದಾದ ಭಕ್ತಿ ಹಿತವಾಗಿಪ್ಪದು ಶಿವಂಗೆ : ಸುಲೋಚನಾ ಅವರು ತಮ್ಮ ದಾಂಪತ್ಯ ಜೀವನದಲ್ಲಿ ಅನೇಕ ಸುಖ ದುಃಖಗಳನ್ನು ಮೈಗೂಡಿಸಿಕೊಂಡು ತವನಪ್ಪಗೌಡ್ರ ಅವರಿಗೆ ತಕ್ಕ ಸತಿಯಾಗಿದ್ದರು. ಗೌಡ್ರು ಮಾಡುವ ಶೈಕ್ಷಣಿಕ, ಸಾಮಜಿಕ, ರಾಜಕೀಯ, ದಾರ್ಮಿಕ ಸೇರಿದಂತೆ ಅನೇಕ ಸಮಾಜಪರ ಕೆಲಸಗಳಲ್ಲಿ ಅವರ ಬೆನ್ನೆಲುಬಾಗಿ ನಿಂತು ಅವರ ಕಾರ್ಯಗಳಿಗೆ ಸಹಾಯ ಸಹಾಕಾರ ನೀಡುವುದರ ಜೊತೆ ಸ್ವತಃ ತವನಗೌಡ್ರಗೆ ಮಾರ್ಗದರ್ಶನ ನೀಡುವ ಮೂಲಕ ಪತಿಗೆ ತಕ್ಕ ಸತಿಯಾಗಿದ್ದರು.

ಜಿನೈಕ್ಯ ಸುಲೋಚನಾ ಭಜಣ್ಣವರ ಹಾಗೂ ತವನಪ್ಪಗೌಡ್ರ ಭಜಣ್ಣವರ



 

ರಾಜಕೀಯ ಜೀವನ : ತವನಪ್ಪಗೌಡ್ರ ಭಜಣ್ಣವರ ರಾಜಕೀಯ ಜೀವನದಲ್ಲಿ ಅನೇಕ ಏಳುಬಿಳುಗಳನ್ನು ಕಂಡವರು ಎದ್ದಾಗ ಹಿಗ್ಗದ ಬಿದ್ದಾಗ ಕುಗ್ಗದ ಮನಸ್ಸು ಗೌಡ್ರದು. ಅವರು 1972 ರಿಂದ ರಾಜಕೀಯ ಜೀವನದಲ್ಲಿ ಅನೇಕ ಬಾರಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಆಯ್ಕೆಯಾಗಿ ಅಧ್ಯಕ್ಷರಾಗಿ ಅನೇಕ ಜನಪರ ಕಾರುಗಳನ್ನು ಮಾಡಿದ್ದಾರೆ. ಗ್ರಾಮದ ತವನಪ್ಪ ಅವಲಕ್ಕಿ ಪ್ರೌಡಶಾಲೆಯ ಆಡಳಿತ ಮಂಡಳಿ ಚೇರಮನ್ನರಾಗಿ ಈ ಭಾಗದ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳ ಪಾಲಿಗೆ ದಾರಿದೀಪವಾಗಿದ್ದರು. ನಂತರ ಎಂ.ಕೆ, ಹುಬ್ಬಳ್ಳಿ ರಾಣಿ ಶುಗರ್ಸ್‌ನ ನಿರ್ದೇಶಕರಾಗಿ ಬೈಲಹೊಂಗಲ ತಾಲೂಕಾ ಪಿಎಲ್‌ಡಿ ಬ್ಯಾಂಕಿನ ಚೇರ್ಮನ್ನರಾಗಿ, ಟಿಎಪಿಸಿಎಂ ನ ಸದಸ್ಯರಾಗಿ ಸೇವೆ ಸಲ್ಲಿಸಿ ಒಮ್ಮೆ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

 

ದಾರ್ಮಿಕ ಕಾರ್ಯಗಳಲ್ಲಿ ಸುಲೋಚನಾ ಅವರ ಪಾತ್ರ: ಸುಲೋಚನಾ ಅವರು ಪತಿ ತವನಪ್ಪಗೌಡ್ರ ಜೊತೆ ದಾರ್ಮಿಕ ಕ್ಷೇತ್ರಗಳ ಪ್ರವಾಸ ಮಾಡುತ್ತಿದ್ದರು ಇದರಿಂದ ಅವರಿಗೆ ಅನೇಕ ಮಠಾಧಿಪತಿಗಳ, ಧರ್ಮದರ್ಶಿಗಳ ಜೊತೆ ಒಳ್ಳಯ ಒಡನಾಟ ಇತ್ತು ಇದರ ಪ್ರತಿಫಲವಾಗಿ ದೇಗುಲಹಳ್ಳಿ ಹಾಗೂ ಕಿತ್ತೂರು ಸೇರಿದಂತೆ ಸುತ್ತಮುತ್ತಲಿರುವ ಗ್ರಾಮಗಳಲ್ಲಿ ಅನೇಕ ದಾರ್ಮಿಕ ಕಾರ್ಯಗಳನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗಡೆ ಅವರ ಜೊತೆ ಇದ್ದ ಒಡನಾಟದ ಫಲವಾಗಿ ಈ ಭಾಗದಲ್ಲಿ ಅವರ ಸಂಸ್ಥೆಯಿಂದ ಅನೇಕ ಜನಪರ ಕಾರ್ಯಗಳು ಒಲಿದು ಬಂದಿದ್ದು ಇತಿಹಾಸ. ದೇಗುಲಹಳ್ಳಿ ಗ್ರಾಮದ ಮಾತೆ ಜಿನವಾಣಿ ಹಾಗೂ ಮಾತೆ ಗುಣವಾಣಿ ಅವರ ಜೊತೆಯ ಸಂಪರ್ಕ ಈ ಭಾಗದಲ್ಲಿ ಅನೇಕ ದಾರ್ಮಿಕ ಕಾರ್ಯಗಳು ಜರುಗಲು ಕಾರಣವಾಯಿತು.

 

ಗಣ್ಯರ ಸಂತಾಪ: ಮೃತರ ಕುಟುಂಭಕ್ಕೆ ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು, ದೇಗುಲಹಳ್ಳಿಯ ಶ್ರೀ  ಮಡಿವಾಳೇಶ್ವರ ಮಠದ ಶ್ರೀ ವಿರೇಶ್ವರ ಮಹಾಸ್ವಾಮಿಗಳು, ಜಿನವಾಣಿ ಹಾಗೂ ಗುಣವಾಣಿ ಮಾತೆಯರು, ಶಾಸಕ ಬಾಬಾಸಾಹೇಬ ಪಾಟೀಲ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡ್ರ, ಮುಖಂಡರಾದ ವಿಕ್ರಂ ಇನಾಮದಾರ, ಲಕ್ಮೀ ಇನಾಮದಾರ, ಕಿತ್ತೂರು ತಾಲೂಕಾ ಕಾ.ನಿ.ಪ.ದ್ವನಿ ಸಂಘದ ಅಧ್ಯಕ್ಷ ಬಸವರಾಜ ಚಿನಗುಡಿ ಹಾಗೂ ಸರ್ವ ಸದಸ್ಯರು, ಕಿತ್ತೂರು ತಾಲೂಕಾ ಪಂಚಸೇನಾ ಅಧ್ಯಕ್ಷ ಮಹಾಂತೇಶ ಕರಬಸನ್ನವರ, ಸೇರಿದಂತೆ ಅನೇಕ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ ಎಂದು ಅವರ ತಮ್ಮನ ಮಗ ಸುನೀಲಗೌಡ್ರ ಭಜಣ್ಣವರ ತಿಳಿಸಿದ್ದಾರೆ.

 

Post a Comment

0 Comments