ಲಿಂಗೈಕ್ಯ ಡಾ. ಶಿವಕುಮಾರ ಮಹಾ ಸ್ವಾಮಿಗಳ ಐದನೇ ವರ್ಷದ ಸ್ಮರಣೋತ್ಸವ ಜರುಗಿತು

ಎಂ.ಕೆ. ವಾಣಿ ನ್ಯೂಸ್
ದಾವಣಗೆರೆ: ಸಿದ್ದಗಂಗಾ ಗೆಳೆಯರ ಬಳಗದ ವತಿಯಿಂದ ಪರಮಪೂಜ್ಯ ಲಿಂಗೈಕ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ಐದನೇ ವರ್ಷದ ಸ್ಮರಣೋತ್ಸ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಸಾನಿಧ್ಯ ವಯಿಸಿ ಪೂಜ್ಯ ಶ್ರೀ ಡಾ. ಮಹೇಶ್ವರ ಸ್ವಾಮೀಜಿ ಮಾತನಾಡಿ ಚಲನಚಿತ್ರದ ನಾಯಕರು ನಿಮಗೆ ಹೀರೋ ಆದರೆ, ಸಿದ್ದಗಂಗಾ ಶ್ರೀಗಳು ನಮ್ಮೆಲ್ಲಾ ಮಠಾದೀಶರಿಗೆ ಹೀರೊ ಆಗಿ ಮಾದರಿಯಾಗಿದ್ದಾರೆ. ಶ್ರೀಗಳ ಜೀವನದ ಚರಿತ್ರೆ ದಿನಚರಿ, ಬಸವಣ್ಣನವರ ತತ್ವ ಆಧರ್ಶ ಸಿದ್ಧಾಂತಗಳನ್ನು ಆಚರಿಸಿಕೊಂಡು ಬಂದಂತಹ ವಿಚಾರವನ್ನು ಹಂಚಿಕೊಂಡರು, ಯುವಕರು ಜೀವನದಲ್ಲಿ ಹೇಗೆ ನಡೆಯಬೇಕು ಎಂದು ಮಾರ್ಗದರ್ಶನ ಮಾಡಿದರು.

ಪೂಜ್ಯರು ಜೋಳಿಗೆ ಹಿಡಿದು ತಿರುಗಾಡಿ ಮಕ್ಕಳನು ಮತ್ತು ಮಠವನ್ನು ಬೆಳಸಿದರು ಎಂದು ಮಠದಲ್ಲಿ ಓದಿ ಬೆಳೆದವರಾದ ಸಾಹಿತಿಗಳು ಚಲನಚಿತ್ರ ನಟರು ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ಚಿಕ್ಕ ಹೆಜ್ಜಾಜಿ ಮಹಾದೇವ ಅವರು ಪೂಜ್ಯರ ದಿನಚರಿಯನ್ನು ನೆನಪಿಸಿಕೊಂಡರು.

ಪೂಜ್ಯರ ಮತ್ತು ಬಸವಣ್ಣನವರ ಭಕ್ತಿಯ ಶಕ್ತಿ ಬಹಳಷ್ಟು ಅಪಾರವಾಗಿರುವಂತವುದು ಅವರ ಜೀವನವು ಪವಾಡ ಸದೃಶ್ಯವಾಗಿರುವಂತವುದು ಎಂದು ನಡೆದ ಒಂದೆರಡು ಅದ್ಭುತ ವಿಚಾರಗಳನ್ನು ಜೂನಿಯರ್ ಡಾ. ರಾಜಕುಮಾರ್ ಎಂದೇ ಪ್ರಸಿದ್ದರಾದ R. ನಾರಾಯಣಪ್ಪ ಅವರು ಹಂಚಿಕೊಂಡರು.

ಡಾ. ರಾಜಕುಮಾರ ಅವರು ಹಾಡಿದ ಭಕ್ತಿಗೀತೆಗಳನ್ನು ಹಾಡಿ ಗಾನ ನಮನವನ್ನು ಸಲ್ಲಿಸಿದರು. ಒಂದೆರಡು ಚಿತ್ರ ಗೀತೆಗಳನ್ನು ಹಾಡಿ ನೆರೆದವರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಸದ್ಭಕ್ತರು ವಚನ ಭಕ್ತಿ ಗೀತೆಗಳನ್ನು ಹಾಡಿದರು, ಕುಮಾರಿ ಲಕ್ಷ್ಮೀತಾ ಯೋಗ ಪ್ರದರ್ಶನವನ್ನು ಮಾಡಿದರು. ನೆರೆದಂತಹ ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು.

" ರಕ್ತದಾನ ಮಾಡಿ, ಜೀವ ಉಳಿಸಿ ರಕ್ತದಾನ ಮಹಾದಾನ, ರಕ್ತದಾನವು ದಯೆಯ ಒಂದು ದೊಡ್ಡ ಕಾರ್ಯವಾಗಿದೆ " ಎಂಬ ದೇಯ್ಯ ವಾಕ್ಯದೊಂದಿಗೆ 
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

 ಈ ಶಿಬಿರದಲ್ಲಿ ಭಾರತೀಯ ದಾವಣಗೆರೆಯ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ರಾದ ಗೌಡರ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಆನಂದ್ ಜ್ಯೋತಿ, ನಿರ್ದೇಶಕರಾದ ಶಿವಾನಂದ್ ಡಿ ಎನ್, ಕುಮಾರ್ ಎಮ್, ರವಿಕುಮಾರ್ ಎ ಜೆ, ಮಂಜುನಾಥ್ ಹೆಚ್, ವೈದ್ಯಾಧಿಕಾರಿಗಳಾದ ಡಾ. ಪಿ ಕೆ ಬಸವರಾಜ್, ಕೋ-ಆರ್ಡಿನೇಟರ್ ಮತ್ತು ಕೌನ್ಸೆಲರ್ ರಾದ ಶಿವಕುಮಾರ ಎನ್ ಜಿ, ಗುಣವಂತ ಶೀಲವಂತ್, ಪ್ರಯೋಗಶಾಲಾ ಮೇಲ್ವಿಚಾರಕರಾದ ವಿನಾಯಕ ಆರ್, ಪ್ರಯೋಗಶಾಲಾ ತಂತ್ರಜ್ಞರಾದ ಗಿರೀಶ್ ಕೆ, ಜ್ಯೋತಿ ಕೆ ಗುಡ್ಡದ್ , ಅಟೆಂಡರ್ ರಾದ ಪದ್ಮಬಾಯಿ, ಕೊಟ್ರೇಶ್, ಪ್ರೇರಣಾ, ಸಿದ್ದಗಂಗಾ ಗೆಳೆಯರ ಬಳಗದ ಪದಾಧಿಕಾರಿಗಳು ಸರ್ವ ಸದಸ್ಯರು, ಗೋದಾವರಿ ಸ್ತ್ರೀ ಶಕ್ತಿ ಸಂಘ, ಶ್ರೀ ಮಂಜುನಾಥ ಶುದ್ಧ ನೀರಿನ ಘಟಕ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಬಸವ ಬಳಗ ಇನ್ನು ಮುಂತಾದ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸದ್ಭಕ್ತರು ಸೇರಿದಂತೆ ಇತರರು ಹಾಜರಿದ್ದರು.

Post a Comment

0 Comments