ಚನ್ನಮ್ಮನ ಕಿತ್ತೂರು: ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠ ಸಭಾ ಭವನದಲ್ಲಿ ಮಾಸಿಕ ಶಿವಾನುಭವ ಹಾಗೂ ಮೇದಾರ ಕೇತಯ್ಯನವರ ಕಾರ್ಯಕ್ರಮ ಜಯಂತಿ ಜರುಗಿತು.
ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಕಿ ಶೋಭಾ ಪಾಶ್ಚಾಪೂರ ಮಾತನಾಡಿ ಕಾರ್ತಿಕ ಮಾಸದಲ್ಲಿ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಹಿರಿಯರು ಅನೇಕ ಧಾರ್ಮಿಕ ವಿಧಾನಗಳನ್ನು ಮಾಡುತ್ತಾ ಬಂದಿದ್ದಾರೆ. ಪ್ರತಿ ಹುಣ್ಣಮೆಯ ದಿನ ಶಿವಾನುಭವ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಮೂಡಿಸಬಹುದು. ಭೂಮಿಯ ಮೇಲೆ ಸೂರ್ಯ ಚಂದ್ರ ಹಾಗೂ ಗ್ರಹಗಳ ಚಲನವಲನದಿಂದ ಹುಣ್ಣುಮೆ ಹಾಗೂ ಅಮವಾಸ್ಯೆಗಳು ಆಗಮಿಸುತ್ತವೆ. ಈ ಮಾಸದಲ್ಲಿ ಮೊದಲು ನಮ್ಮ ಹಿರಿಯರು ಅನೇಕ ತರಹದ ದಾನ ಧರ್ಮಗಳನ್ನು ಮಾಡುತ್ತಿದ್ದರು. ನಮ್ಮ ಬಾಳಿನಲ್ಲಿ ಆವರಿಸಿದ ಅಂಧಕಾರವನ್ನು ಹೊಡದೋಡಿಸುವ ಉದ್ದೇಶದಿಂದ ಮನೆ ಮಠ ಮಂದಿರ ಸೇರಿದಂತೆ ಇತರ ಸ್ಥಳಗಳಲ್ಲಿ ದೀಪಗಳನ್ನೂ ಹಚ್ಚಲಾಗುವುದು. ನಮ್ಮ ಹಿರಿಯರು ಮಾಡಿಕೊಂಡು ಬಂದಂತಾ ಸಂಪ್ರದಾಯಗಳನ್ನು ನಾವು ಮಾಡಿಕೊಂಡು ಹೋದರೆ ನಮ್ಮ ಮಕ್ಕಳು ಸಹ ಅದನ್ನು ಮುಂದುವರೆದಸುಕೊಂಡು ಹೋಗುತ್ತಾರೆ. ಅದಕ್ಕಾಗಿ ಮೊದಲು ನಾವುಗಳು ಸಂಪ್ರದಾಯಬದ್ಧ ಆಚರಣೆಗಳನ್ನು ಮಾಡಬೇಕು ಎಂದರು.
ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಮಾತನಾಡಿ ಟಿವಿ, ವಾಟ್ಸ್ಆ್ಯಪ್ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ಗಳಲ್ಲಿ ಕಾಲ ಕಳೆದು ಕಣ್ಣಗಳನ್ನು ಹಾಳು ಮಾಡಿಕೊಳ್ಳದೆ ಇಂತಹ ಶಿವಾನುಭವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದರು.
ಕಾರ್ಯಕ್ರಮದ ಸಾನಿದ್ಯ ವಹಿಸಿ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ಬಿದಿರು ಉದ್ಯಮಿ ರಾಜು ಬೋಗುರ, ನ್ಯಾಯವಾದಿ ಸರಸ್ವತಿ ಪೂಜೇರ ಮಾತನಾಡಿದರು.
ಸಂಗೀತ ದಿಗ್ಗಜರಾದ ಈಶ್ವರ ಗಡಿಬಿಡಿ ಹಾಗೂ ಪ್ರಲ್ಹಾದ ಶಿಗ್ಗಾವಿ ಮತ್ತು ಸಂಗಡಿಗರಿಂದ ಸಂಗೀತ ಸೇವೆ ಜರುಗಿತು.
ಈ ವೇಳೆ ಅನೇಕ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು,
ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಶಂಕರ ಕರಿಕಟ್ಟಿ ಸ್ವಾಗತಿಸಿದರು, ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ
ಎಸ್ ಬಿ ದಳವಾಯಿ ನಿರೂಪಿಸಿದರು, ಶಿಕ್ಷಕ ಮಂಜುನಾಥ ಕಳಸನ್ನವರ ವಂದಿಸಿದರು.
ಕ್ಯೂರೇಟರ್ ರಾಘವೇಂದ್ರ, ಸೌಮ್ಯ ರಾಘವೇಂದ್ರ, ಬಸವರಾಜ ಮಾವಿನಕಟ್ಟಿ, ಮೇದಾರ ಸಮಾಜದ ಮುಖಂಡರು ಪಾಅಣದ ನಾಗರಿಕರು ಇದ್ದರು.
0 Comments