ಬೆಳಗಾವಿ ಜಿಲ್ಲೆಯ ಸೌವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಎಚ್ಚರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಆಚರಣೆ ಮಾಡಿದರು. ಬೆಳಗ್ಗೆ ಕರ್ತೃ ಗದ್ದಿಗೆ ಮಹಾಭಿಷೇಕ ಮಹಾಮಂಗಳಾರತಿ ವಿವಿಧ ಪುಷ್ಪಗಳಿಂದ ಮೂರ್ತಿಯನ್ನು ಅಲಂಕಾರ ಮಾಡಿದ್ದರು. ಮಳೆ ಆಗದ ಕಾರಣ ಭಕ್ತರು 15 ದಿನಗಳ ಕಾಲ ನಿತ್ಯ ಬೆಳಿಗ್ಗೆ ಭಜನೆಯನ್ನು ಮಾಡಿದರು.
ಡಾ ಶ್ರೀ ಶಿವಾನಂದ ಭಾರತಿ ಅಪ್ಪಾಜಿ ಅವರು ಮಠಕ್ಕೆ ಆಗಮಿಸಿ ಭಕ್ತರಿಗೆ ಆಶೀರ್ವಾದ ನೀಡಿ ಮಹಾಪ್ರಸಾದ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆನಂತರ ಭಕ್ತಾದಿಗಳಿಂದ ಶ್ರೀಗಳ ತುಲಾಭಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಯುವ ಧುರಿಣರು ಸಮಾಜ ಸೇವಕರಾದ ನಾಗಪ್ಪ ಮೇಟಿ ಅವರು ಮಠಕ್ಕೆ ಆಗಮಿಸಿ, ದೇವರ ಆಶೀರ್ವಾದವನ್ನು ಪಡೆದುಕೊಂಡು ಅವರ ತಂದೆಯವರಾದ ಶಿವಪ್ಪ ಮೇಟಿ ಅವರ ಸ್ಮರಣಾರ್ಥ ಪ್ರಸಾದ ನೀಲಯ ಗುದ್ದಲಿ ಪೂಜೆಯನ್ನು ಮಾಡಿದರು. ಇಂಚಲ ಗ್ರಾಮದವರು ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮದವರು ಯಾರೇ ಬಂದು ಅವರ ಹತ್ತಿರ ಕೇಳಿದರೆ ಇಲ್ಲ ಅನ್ನದ ಒಳ್ಳೆಯ ಮನಸ್ಸಿನ ಸಮಾಜ ಸೇವಕರು ಇವರಾಗಿದ್ದಾರೆ. ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಯಿತು.
ವರದಿ : ಬಸವರಾಜ್ ಲಕ್ಕನವರ್
0 Comments