ಸಂಗೀತ ಮತ್ತು ಸಾಹಿತ್ಯ ನಮ್ಮ ಎರಡು ಕಣ್ಣುಗಳಿದ್ದಂತೆ
ಮ್ರ ಮಾಲತಿ ಪಟ್ಟಣಶೆಟ್ಟಿ
ಚನ್ನಮ್ಮನ ಕಿತ್ತೂರು:~ ಸಂಗೀತ ಮತ್ತು ಸಾಹಿತ್ಯ ನಮ್ಮ ಎರಡು ಕಣ್ಣುಗಳಿದ್ದಂತೆ. ಇವೆರಡುಗಳನ್ನು ನಾವು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ
ಉಪಾಧ್ಯಕ್ಷರೂ , ವಿಶ್ರಾಂಶ ಧ್ಯಾಪಕರೂ ಮತ್ತು ಕನ್ನಡ ಸಾಹಿತಿಗಳೂ ಆದಂತಹ ಪ್ರೊ ಮಾಲತಿ
ಪಟ್ಟಣಶೆಟ್ಟಿ ತಿಳಿಸಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ಕಲಾ ಮಂಟಪ ಮತ್ತು ಕಿತ್ತೂರಿನ ರಾಗರಂಜನಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಿತ್ತೂರಿನ ಶ್ರೀ ವಿಠಲ ದೇವಸ್ಥಾನದಲ್ಲಿ ನಡೆದ ಹಿರಿಯ ಮತ್ತು ಖ್ಯಾತ ಸಂಗೀತಗಾರರಾದ ಶ್ರೀಮತಿ ಸುಜಾತಾ ಗುರವ(ಕಮ್ಮಾರ) ಇವರ ಸಂಗೀತ
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷೀಯ ನುಡಿಗಳನ್ನು ಆಡುತ್ತಾ ನಮ್ಮ ಭಾರತೀಯ
ಹಿರಿಮೆಯನ್ನು ಹೆಚ್ಚಿಸಿದ ಹಿಂದೂಸ್ತಾನಿ ಸಂಗೀತದ ಇತಿಹಾಸ ಮತ್ತು ಮಹತ್ವವನ್ನು ತಿಳಿಸುತ್ತಾ ಕೇವಲ
ಚಲನಚಿತ್ರದ ಸಂಗೀತಕ್ಕೆ ಪ್ರಾಧಾನ್ಯತೆ ನಿಡುತ್ತಿರುವ ಇಂದಿನ ದಿನಗಳಲ್ಲಿ ಶ್ರೀಮತಿ ಸುಜಾತಾ ಗುರವ(ಕಮ್ಮಾರ)
ಇವರ ಸಂಗೀತ ಕಾರ್ಯಕ್ರಮ ಆಯೋಜಿಸಿದ ಸಂಘಟಕರನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾದ ನಿವೃತ್ತ ಸಂಗೀತ ಶಿಕ್ಷಕಿಯರಾದ ಶ್ರೀಮತಿ ಅನುರಾಧಾ ದೇಶಪಾಂಡೆ ಸರಕಾರ ಇಂದು ಶಾಲಾ ಕಾಲೇಜುಗಳಲ್ಲಿ
ಖಾಲಿ ಇರುವ ಸಂಗೀತ ಶಿಕ್ಷಕರ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳದೆ ಇರುವದಕ್ಕೆ ಬೇಸರ ವ್ಯಕ್ತ ಪಡಿಸಿದರು.
ಕನ್ನಡ ಸಾಹಿತಿಗಳಾದಂತಹ ಪ್ರೊ ಮಾಲತಿ ಪಟ್ಟಣಶೆಟ್ಟಿ ಮತ್ತು ಖ್ಯಾತ ಸಂಗೀತಗಾರರಾದ ಶ್ರೀಮತಿ
ಸುಜಾತಾ ಗುರವ(ಕಮ್ಹಾರ) ಇವರನ್ನು ಕಿತ್ತೂರ ತಾಲುಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ
ಸನ್ಮಾನಿಸಲಾಯಿತು.ಸಂಗೀತ ಶಿಕ್ಷಕರಾದ ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ವಿಶ್ರಾಂತ ಪ್ರಾಚಾರ್ಯರೂ, ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು.
ಹಿರಿಯ ಸಂಗೀತಗಾರರಾದ ಸಂದೀಪ ದೇಶಪಾಂಡೆ ರಾಗರಂಜಿನಿಯ ಸ್ಥಾಪನೆ ಮತ್ತು ಮುಂದಿನ ಯೋಜನೆಗಳನ್ನು ಕುರಿತು ಮಾತಡುತ್ತಾ ನಾಡಿನ ಹಿರಿಯ ಸಂಗೀತಗಾರರನ್ನು ಸ್ಮರಿಸಿದರು. ಹಾಸ್ಯ ಕಲಾವಿದರಾದ ಮಲ್ಲಪ್ಪ ಹೊಂಗಲ ವಂದಿಸಿದರು, ಕಲಾ ಮಂಟಪದ ಸಂಚಾಲಕರಾದ ಜಾನಪದ ವಿದ್ವಾಂಸ ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು, ಕಿತ್ತೂರಿನ ಅಪ್ಪಣ್ಣಾ ಪಾಗಾದ, ಶಿವಾನಂದ ಜಕಾತಿ, ದಿನೇಶ ವಳಸಂಗ,ಕಿತ್ತೂರಿನ ಪ್ರಣವ ಯೋಗ ಕೇಂದ್ರದ ಸಂಚಾಲಕಿ ಸೌಮ್ಯಾ ರಾಘವೇಂದ್ರ ಶ್ರೀಮತಿ ಪದ್ಮಾವತಿ ಗಲಗಲಿ,ಶಿಕ್ಷಕ ಝಾ ಲದ್ದೀಮಠ, ರಾಗರಂಜನಿ ಮತ್ತು ಕಲಾ ಮಂಟಪದ ಪದಾಧಿಕಾರಿಗಳು,ಧಾರವಾಡದ ಮತ್ತು ಕಿತ್ತೂರಿನ ಸಂಗೀತಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಶ್ರೀಮತಿ ಸುಜಾತಾ ಗುರವ(ಕಮ್ಮಾರ) ಇವರ ಶಾಸ್ತ್ರೀಯ ಸಂಗೀತ,ಭಕ್ತಿ ಗೀತ ಮತ್ತು ಭಾವ ಗೀತೆಗಳು ಸಭಿಕರನ್ನು ರಂಜಿಸಿದವು. ಇವರಿಗೆ ಅಲ್ಲಮಪ್ರಭು
ಕಹೋಳ ಮತ್ತು ವಿನೋದ ಪಾಟೀಲ ತಬಲಾ ಮತ್ತು ಹಾರ್ಮೋನಿಯಂ ಸಾಥ ನೀಡಿದರು.
ವರದಿ : ಮಾಹಾಂತೇಶ್ ಕರಬಸಣ್ಣನವರ್
0 Comments