MK Vani : ಜೂನ್ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

MK Vani ಬೆಂಗಳೂರು -
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು
ವಿವರ ನೀಡಿದೆ. ಎಲ್ಲಾ ಗ್ಯಾರಂಟಿ
ಯೋಜನೆಗಳು ಇದೇ ವರ್ಷ ಜಾರಿಯಾಗಲಿದೆ
ಎಂದು ಸರಕಾರ ತಿಳಿಸಿದೆ.
ಸಚಿವಸಂಪುಟ ಸಭೆಯ ನಂತರ ಮುಖ್ಯಮಂತ್ರಿ
ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ
ಡಿ.ಕೆ.ಶಿವಕುಮಾರ ಈ ಕುರಿತು ಮಾಹಿತಿ
ನೀಡಿದ್ದಾರೆ.
ಗೃಹ ಜ್ಯೋತಿ ಅಡಿ ವಿದ್ಯುತ್ ಬಳಕೆಯ 12
ತಿಂಗಳ ಸರಾಸರಿ ಆಧಾರದ ಮೇಲೆ ಶೇ.10ರಷ್ಟು
ಹೆಚ್ಚು ಸೇರಿಸಿ ಉಚಿತವಾಗಿ ನೀಡುತ್ತೇವೆ ಎಂದು
ತಿಳಿಸಿದರು. ಜುಲೈ 1ರಿಂದ ಈ ಯೋಜನೆ
ಜಾರಿಯಾಗಲಿದೆ.
ಶಕ್ತಿ ಯೋಜನೆಯಡಿ ರಾಜ್ಯದ ಒಳಗಡೆ ಎಸಿ
ಮತ್ತು ಲಕ್ಷುರಿ ಹೊರತಾದ ಬಸ್ ಗಳಲ್ಲಿ ಎಲ್ಲಾ
ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ
ನೀಡಲಾಗಿದೆ. ಜೂನ್ 11ರಿಂದಲೇ ಇದು
ಜಾರಿಯಾಗಲಿದ್ದು, ನನ್ನ ಹೆಂಡತಿಗೂ ಬಸ್ ನಲ್ಲಿ
ಉಚಿತ ಪ್ರಯಾಣವಿರಲಿದೆ ಎಂದು
ಸಿದ್ದರಾಮಯ್ಯ ತಿಳಿಸಿದರು. ರಾಜ್ಯದ ಒಳಗಡೆ
ಎಲ್ಲೇ ಹೋಗುವುದಾದರೂ ಕರ್ನಾಟಕದವರಿಗೆ
ಉಚಿತವಾಗಿ ಪ್ರಯಾಣಿಸಬಹುದು. ಕ್ಲೀಪರ್
ಕೋಚ್ ನಲ್ಲಿ ಉಚಿತವಿಲ್ಲ. ಬಿಎಂಟಿಸಿ, ಕೆಎಸ್
ಆರ್ ಟಿಸಿ ಎಲ್ಲಾ ಬಸ್ ಗಳಿಗೂ ಅನ್ವಯ.

ಗ್ಯಾರಂಟಿ ಯೋಜನೆ ಕುರಿತ ಸಂಪುಟ
ತೀರ್ಮಾನಗಳು

ಜನ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ.
ನಾವು ಬಸವಣ್ಣನ ನಾಡಿನವರು. ಕೊಟ್ಟ
ಮಾತಿಗೆ ಬದ್ಧ.
5 ಗ್ಯಾರಂಟಿಗಳನ್ನು ನೀಡಲು ತೀರ್ಮಾನ
ಮಾಡಿದ್ದೇವೆ.
*ಗೃಹಜ್ಯೋತಿ:*
200 ಯೂನಿಟ್ ಉಚಿತ ವಿದ್ಯುತ್.
12 ತಿಂಗಳ ಸರಾಸರಿ ಆಧರಿಸಿ, ಅದಕ್ಕೆ
ಶೇಕಡಾ 10 ರಷ್ಟು ಸೇರಿಸಿ, ಅದಕ್ಕೆ
ಸಂಪೂರ್ಣ ಶುಲ್ಕ ವಿನಾಯಿತಿ.
ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್
ನಿಂದ ಅನ್ವಯ. ಬಾಡಿಗೆದಾರರಿಗೂ ಅನ್ವಯ.
*ಗೃಹಲಕ್ಷ್ಮಿ:”
ಆಧಾರ್ ಕಾರ್ಡ್, ಅಕೌಂಟ್ ಡೀಟೇಲ್ಸ್
ಆನ್ಸನ್ ಆಫ್ ಲೈನ್ ಅರ್ಜಿ ಆಧರಿಸಿ
ಆಗಸ್ಟ್ 15 ರಿಂದ ಜಾರಿ.
ಜೂನ್ 15 ರಿಂದ ಜುಲೈ 15 ರೊಳಗೆ
ಡೀಟೇಲ್ಸ್ ಜತೆ ಅರ್ಜಿ ಸಲ್ಲಿಸಬೇಕು.
ಬಿಪಿಎಲ್ ಅಂಡ್ ಎಪಿಎಲ್ ಕಾರ್ಡ್
ದಾರರಿಗೆ ಸಿಗುತ್ತೆ. ಮನೆ ಯಜಮಾನಿಯನ್ನು
ಕುಟುಂಬದವರೇ ತೀರ್ಮಾನ ಮಾಡಬೇಕು.
ಸಾಮಾಜಿಕ ಭದ್ರತೆ ಪಿಂಚಣಿದಾರರಿಗೂ
2000 ರೂ. ಕೊಡತೇವೆ.
*ಅನ್ನಭಾಗ್ಯ:*
ಜುಲೈ 1 ರಿಂದ ಎಲ್ಲ ಬಿಪಿಎಲ್ ಮತ್ತು
ಅಂತ್ಯೋದಯ ಕಾರ್ಡ್ ದಾರರಿಗೆ ತಲಾ10
ಕೆಜಿ ಆಹಾರಧಾನ್ಯ ಕೊಡತೇವೆ.
*ಶಕ್ತಿ:*
ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ
ಎಲ್ಲ ಮಹಿಳೆಯರಿಗೆ ಜೂನ್ 11 ರಿಂದ
ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣ
ಅವಕಾಶ. ಬಿಎಂಟಿಸಿ ಸೇವೆಯನ್ನು ಬಳಸಬಹುದು.
ಎಸಿ ಮತ್ತು ಲಕ್ಷುರಿ ಬಸ್ ಹೊರತುಪಡಿಸಿ
ಸಾಮಾನ್ಯ ಬಸ್ ಗಳಿಗೆ ಮಾತ್ರ ಅನ್ವಯ.
ಕೆಎಸ್ ಆರ್ಟಿಸಿಯಲ್ಲಿ 50 % ಸೀಟು
ಪುರುಷರಿಗೆ ಮೀಸಲು.
ಬಸ್ ಐರಾವತ, ರಾಜಹಂಸ ಸೇರಿ ಎಲ್ಲ ರೀತಿಯ
ಲಕ್ಯೂರಿ ಬಸ್, ಎಸಿ ಮತ್ತು ನಾನ್ ಎಸಿ
ಕ್ಲೀಪರ್ ಬಸ್ ಗಳಿಗೆ ಇದು ಅನ್ವಯ ಆಗದು.
*ಯುವನಿಧಿ:*
2023 ರಲ್ಲಿ ಪದವಿ ಪಾಸ್ ಮಾಡಿದವರಿಗೆ 24
ತಿಂಗಳು ಪ್ರತಿ ತಿಂಗಳು 3000,
ಡಿಪ್ಲೋಮದಾರರಿಗೆ 1500 ರು ಭತ್ಯೆ.
ತೃತೀಯ ಲಿಂಗಿಗಳಿಗೂ ಅನ್ವಯ. 18
ವರ್ಷದಿಂದ 25 ವರ್ಷದವರಿಗೆ ಅನ್ವಯ.
ಅವರು ಅರ್ಜಿ ಹಾಕಬೇಕು. ಅರ್ಜಿ
ಕೊಟ್ಟಾಗಿಂದ ಜಾರಿ, ಅರ್ಜಿ ಸಲ್ಲಿಸಲು 6
ತಿಂಗಳು ಕಾಲವಕಾಶ.
*ಖಚಿತವಾಗಿ ಜಾರಿಯಾದ ಉಚಿತಗಳು*
*ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ
ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್
ಸರ್ಕಾರ*
*ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ
ಮುಖ್ಯಮಂತ್ರಿ
ಚಾರಿತ್ರಿಕ ಘೋಷಣೆ*
ಸಿದ್ದರಾಮಯ್ಯರಿಂದ
*13 ಬಜೆಟ್ ಮಂಡಿಸಿದ ಸಿದ್ದರಾಮಯ್ಯ
ಅವರಿಂದ ಸಿದ್ಧಗೊಂಡ 5 ಗ್ಯಾರಂಟಿ ಸ್ಕೀಂ
ಎದೆಗಾರಿಕೆಯ ನೀಲನಕ್ಷೆ*
ಬೆಂಗಳೂರು, ಜೂನ್ 2- ಕಾಂಗ್ರೆಸ್ ಪಕ್ಷವು
ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ 5
ಗ್ಯಾರಂಟಿ ಯೋಜನೆಗಳನ್ನು ಸಹ ಪ್ರಸಕ್ತ
ಆರ್ಥಿಕ ವರ್ಷದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಚಾರಿತ್ರಿಕ ಘೋಷಣೆ ಮಾಡಿದರು.

Post a Comment

0 Comments