MK Vani : ಕುಂದಗೋಳ : ಹೈಕೋರ್ಟ್ ಮೆಟ್ಟಿಲೇರಿದ ಕಸಾಪ ಅಧ್ಯಕ್ಷ

ಕುಂದಗೋಳ: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇಮಕಕ್ಕರ ಸರ್ವ ಸದಸ್ಯರ ಅನುಮತಿ ಪಡೆಯದೇ ಸೃವಾಧಿಕಾರದಿಂದ ಜಿಲ್ಲಾ ಕಸಾಪ‌ ಅಧ್ಯಕ್ಷ ಲಿಂಗರಾಜ ಅಂಗಡಿ ನೇಮಕ ಮಾಡಿರುವ ಕ್ರಮವನ್ನು ರಾಜ್ಯ ಹೈಕೋರ್ಟ್ ತಡೆಯಾಜ್ಞೆ ಗೊಳಿಸಿ ಆದೇಶ ಹೊರಡಿಸಿದೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಕುಂದಗೋಳ ತಾಲೂಕಿನ ಕಸಾಪ ಹಾಲಿ  ಅಧ್ಯಕ್ಷ ರಾದ ಡಾ,ಪ್ರಭುಗೌಡ ಸಂಕಾಗೌಡಶಾನಿ ಇದ್ದಾಗಲೂ ಜಿಲ್ಲಾ ಕಸಾಪ‌ ಅಧ್ಯಕ್ಷ  ಅಂಗಡಿ ಸರ್ವಾಧಿಕಾರಿ ಧೋರಣೆಯಿಂದ ಕಸಾಪ‌ ಯಾವದೇ ಸದಸ್ಯರ ಸಭೆಯನ್ನು ಕರೆಯದೇ ಏಕತರ್ಪಿ ನಿರ್ಣಯದ ಮೇರಿಗೆ ವಿ.ಎಮ್.ಪಳೇಕಲಮಠರನ್ನು  ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ನೇಮಕ ಮಾಡಿರುವದನ್ನು  ವಿರೋದಿಸಿ ಹಾಲಿ ಕಸಾಪ ಅಧ್ಯಕ್ಷ ಡಾ,ಪ್ರಭುಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇವರ ದೂರನ್ನು ಪರಿಗಣೀಸಿದ ರಾಜ್ಯ ಹೈಕೋರ್ಟ್ ನ್ಯಾಯಾಧೀಶರಾದ ಸಚಿನ್ ಶಂಕರ್ ಮಗದುಮ್ ಅವರು ಜಿಲ್ಲಾ ಅಧ್ಯಕ್ಷ ಸರ್ವಾಧಿಕಾರದಿಂದ ನೇಮಕ ಮಾಡಿದ ಅಧ್ಯಕ್ಷ ಸ್ಥಾನವನ್ನು ವಜಾಗೊಳಿಸಿ ಡಾ,ಪ್ರಭುಗೌಡ ಸಂಕಾಗೌಡಶಾನಿ ಅವರನ್ನು ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಮುಂದುವರೆಸಿ ಆದೇಶ ಮಾಡಿದ್ದಾರೆ. ಇದರಿಂದ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಅವರಿಗೆ ಹಿನ್ನಡೆಯಾದಂತಾಗಿದೆ.

ಸಂಕಾಗೌಡಶಾನಿ ಪರವಾಗಿ ಹೈಕೋರ್ಟ್ ವಕೀಲರಾದ ಎ.ಆರ್.ಪಾಟೀಲರು ವಕಾಲತ್ತು ವಹಿಸಿದ್ದರು.

Post a Comment

0 Comments