ಕಾಂಗ್ರೆಸ್ ಸರ್ಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸತೀಶ್ ಜಾರಕಿಹೊಳಿ ಸಚಿವರಾದ ಬಳಿಕ ಮೊದಲ ಬಾರಿಗೆ ಕಿತ್ತೂರು ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿ ಚೆನ್ನಮ್ಮಾಜೀಗೆ ಗೌರವ ಸಮರ್ಪಣೆ ಮಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ, ಸೇರಿದಂತೆ ಅಮಟೂರು ಬಾಳಪ್ಪ ಪುತ್ಥಳಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಮಾಲಾರ್ಪಣೆ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿಯವರು ಐತಿಹಾಸಿಕ ಪುಣ್ಯಸ್ಥಳವಾದ ಕಿತ್ತೂರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವತಿಯಿಂದ ಅನೇಕ ಮೂಲಭೂತ ಸೌಕರ್ಯಗಳನ್ನು ಹಲವಾರು ಅಭಿವೃದ್ಧಿ ಯೋಜನೆಯನ್ನು ಮತ್ತು ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಲಿದೆ ಎಂದು ಹೇಳಿದರು.
ಇನ್ನೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು ನಮ್ಮ ಸರ್ಕಾರದ ಮುಖ್ಯ ಯೋಜನೆಯೇ ಅದೇ ಆಗಿದೆ ಜನರಿಗೆ ಪಕ್ಷದಿಂದ ಕೊಟ್ಟ ಭರವಸೆಯನ್ನು ಖಂಡಿತವಾಗಿ ಕೊಡುತ್ತೆವೆ ಅದರಲ್ಲಿ ಅನುಮಾನ ಬೇಡ ಹಾಗೂ ನಮ್ಮ ಸರ್ಕಾರ ಇರುವುದೇ ಜನರಿಗಾಗಿ ಅವರಿಗೆ ಕೊಟ್ಟ ಗ್ಯಾರಂಟಿ ಅವರಿಗೆ ಸಿಕ್ಕೆಸಿಗುತ್ತದ್ದೆ ಎಂದರು.
ಮತ್ತು ಕಿತ್ತೂರು ಕ್ಷೇತ್ರದಲ್ಲಿ ರಸ್ತೆಗಳ ವಿಷಯವಾಗಿ ಉತ್ತರಿಸಿದ ಸಚಿವರು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರಗತಿಯನ್ನು ಹೊಂದಲಿದೆ ಸರ್ಕಾರದ ವತಿಯಿಂದ ಏನೆಲ್ಲಾ ಮಾಡಬಹುದೋ ಆ ಎಲ್ಲ ಕೆಲಸಗಳನ್ನು ಕ್ರಮೇಣವಾಗಿ ಕಿತ್ತೂರು ಕ್ಷೇತ್ರಕ್ಕೆ ಮಾಡಲಾಗುವುದು ಎಂದು ಸತೀಶ್ ಜಾರಕಿಹೊಳಿಯವರು ಪತ್ರಿಕಾ ಸಂದರ್ಶನದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್, ಹಬೀಬ್ ಶಿಲೇದಾರ, ಸಂತೋಷ ಹಂಚಿನಮನಿ, ಆಶಪಕ್ ಹವಾಲ್ದಾರ್, ಯಲ್ಲಪ್ಪ ಮಣ್ಣವಡ್ಡರ, ಈರಪ್ಪ ಕಲ್ಲವಡ್ಡರ, ಸಂಜು ಲೋಕಾಪುರ, ರೋಹಿಣಿ ಬಾಬಾಸಾಹೇಬ್ ಪಾಟೀಲ್,ರಾಚಪ್ಪ ಕೋಟಿಗಿ ಸೇರಿದಂತೆ ಕಿತ್ತೂರಿನ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಇತರೆ ಅನೇಕ ನಾಯಕರು ಮತ್ತು ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.
0 Comments