ಎಂ ಕೆ ನ್ಯೂಸ್ ಸುದ್ದಿ ಚೆನ್ನಮ್ಮ ಕಿತ್ತೂರು ಸದ್ಯದಲ್ಲಿ ನಡೆಯಲಿದೆ ಮಾದಿಗರ ನಡೆ ಚುನಾವಣೆ ಕಡೆ ಸುದ್ದಿಗೋಷ್ಠಿ ಜಿಲ್ಲಾ ಅಧ್ಯಕ್ಷ ಮಡಿವಾಳಪ್ಪ ವಕುಂದ ಮತ್ತು ಸರ್ವ ಸದಸ್ಯರು

ರಾಜ್ಯದ ಉದ್ದಗಲಕ್ಕೂ ಮಾದಿಗ ಸಮುದಾಯದಿಂದ ಜನಾಂದೋಲನ ರೂಪಿಸಲಾಗುತ್ತಿದ್ದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾದಿಗರ ಹೋರಾಟಕ್ಕೆ ಸ್ಪಂದಿಸಬೇಕು‌ ಎಂದು ಕಿತ್ತೂರಿನಲ್ಲಿ ಮಾದಿಗ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
           ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನದ ಜೊತೆಗೆ ರಾಜ್ಯದ ದಲಿತರಲ್ಲಿ ಬಹುಸಂಖ್ಯಾತರಾದ ಮಾದಿಗ ಸಮುದಾಯ ಕಳೆದ 30 ವರ್ಷಗಳಿಂದ ಒಳಮೀಸಲಾತಿ ವರ್ಗೀಕರಣಕ್ಕಾಗಿ ನಿರಂತರವಾದ ಹೋರಾಟಗಳನ್ನು ರಾಜ್ಯಾದ್ಯಂತ ನಡೆಸುತ್ತಾ ಬಂದಿದೆ ಆದ್ರು ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ರಾಜು ಜಾಂಗಟಿ ಕಿತ್ತೂರಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹಾಗೂ ಇದೇ ತಿಂಗಳು 14 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹಮ್ಮಿಕೊಂಡಿರು ಮಾದಿಗರ ಬೃಹತ್ ಪ್ರತಿಭಟನೆಗೆ ಕಿತ್ತೂರಿನಿಂದ ಸಮಾಜದ ಎಲ್ಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಾದಿಗ ಸಮಾಜದ ಅಧ್ಯಕ್ಷರಾದ ಮಡಿವಾಳಪ್ಪ ವಕ್ಕುಂದ ಪತ್ರಿಕಾಗೋಷ್ಠಿಯಲ್ಲಿ ಕರೆ ಕೊಟ್ಟರು.
      ಸಮಾಜದ ಮೇಲೆ ನಿರಂತರವಾಗಿ ದೌರ್ಜನ್ಯ, ಹಿಂಸೆ, ದಬ್ಬಾಳಿಕೆ, ನಡೆಯುತ್ತಲೇ ಇದ್ರು ಸಹ ಸರ್ಕಾರದಿಂದ ಸಿಗಬೇಕಾದ ಸೂಕ್ತ ವ್ಯವಸ್ಥೆ ಸಿಗದಿರುವುದು ವಿಪರ್ಯಾಸ ಎಂದರು.ಸರ್ಕಾರ ಸಮಾಜದ ಮೇಲೆ ಎಸುಗುತ್ತಿರುವ ದೌರ್ಜನ್ಯದ ಜೊತೆಗೆ ಅನೇಕ ಸೌಲತ್ತುಗಳಿಂದ ವಿದ್ಯಾಭ್ಯಾಸದಲ್ಲಿ ಉದ್ಯೋಗದ ಕೊರತೆಯಿಂದ ಸ್ವಯಂ ಉದ್ಯೋಗದಲ್ಲಿ ತಾರತಮ್ಯದ ಜೊತೆಗೆ ಅನೇಕ ಸರ್ಕಾರಿ ಸೌಲಭ್ಯಗಳಲ್ಲಿ ತಾರತಮ್ಯ ಮಾಡುತ್ತಿರುವುದನ್ನು ವಿರೋಧಿ ಕಿತ್ತೂರು ನಗರದಲ್ಲಿ ಅತಿ ಶೀಘ್ರವಾಗಿ ಸಮಾಜದ ಮುಖಂಡರ ಉನ್ನತ ಸಭೆ ಕರೆದು "ಮಾದಿಗರ ನಡೆ ಚುನಾವಣೆ ಕಡೆ" ಎಂಬ ಬೃಹತ್ ಜನಾಂದೋಲನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜು ಜಾಂಗಟಿ ಹೇಳಿದರು....
          ಇದೇ ಸಂದರ್ಭದಲ್ಲಿ ಕಿತ್ತೂರು ತಾಲೂಕಿನ ಮಾದಿಗರ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಮತ್ತು ಬಸವರಾಜ್ ಗಾಳಿ ರುದ್ರಪ್ಪ ಲಿಂಗ ಮೈತ್ರಿ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು 

Post a Comment

0 Comments