ವಿವೇಕಾನಂದರ ಹಾದಿಯಲ್ಲೇ ಕಿತ್ತೂರು ಶಾಸಕ ಮಾಂತೇಶ ದೊಡ್ಡಗೌಡರ ನಡೆರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಸಲುವಾಗಿ ಯುವ ಶಕ್ತಿಯನ್ನು ಸಂಘಟಿಸಿ ದೇಶ ಕಟ್ಟುವ ಸಂಕಲ್ಪವನ್ನು ಸ್ವಾಮಿ ವಿವೇಕಾನಂದರು ಹೊಂದಿದ್ದರು ಎಂದು ಮಲ್ಲಿಕಾರ್ಜುನ ಬಾಳೆಕಾಯಿ ಹೇಳಿದರು.
ಕಿತ್ತೂರು ಮತಕ್ಷೇತ್ರದ ಸಂಪಗಾವ ಗ್ರಾಮದಲ್ಲಿ ನಡೆದ ಸ್ವಾಮಿ ವಿವೇಕಾನಂದರ 160 ನೇಯ ಜಯಂತಿ ಪ್ರಯುಕ್ತ ವಿವೇಕ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾನತೆಯ ಮೂಲಕ ಸ್ವಾವಲಂಬಿಗಳಾಗಿರುವಂತೆ ಭಾರತೀಯರಿಗೆ ವಿವೇಕಾನಂದರು ಸಂದೇಶ ಸಾರಿದ ಮಹಾನ್ ಚೇತನರಾಗಿದ್ದರು. ಮಕ್ಕಳು ಸ್ವಾಮಿ ವಿವೇಕಾನಂದರ ಬದುಕನ್ನು ಅರಿತು ನಿಶ್ಚಿತ ಮನಸ್ಸಿನಿಂದ ಶಿಕ್ಷಣವನ್ನು ಚೆನ್ನಾಗಿ ಅಭ್ಯಸಿಸಿದರೆ ಸ್ವಾವಲಂಬಿಗಳಾಗುವ ಜತೆಗೆ ದೇಶದ ಅಭ್ಯುದಯ ಸಾಧ್ಯ ಎಂದರು.
ಹಾಗೇ ಅದೇ ಸ್ವಾಮಿ ವಿವೇಕಾನಂದರು ಹಾಕಿ ಕೊಟ್ಟ ಮಾರ್ಗದಲ್ಲೇ ಇಂದು ಮೋದಿ ನಡೆಯುತ್ತಿದ್ದಾರೆ, ಸರ್ಕಾರ ನಡೆಯುತ್ತಿದೆ ಜೊತೆಗೆ ನಮ್ಮ ನಿಮ್ಮೆಲ್ಲರ ಜನಪ್ರಿಯ ಶಾಸಕರಾದ ಮಾಂತೇಶ ದೊಡ್ಡಗೌಡರ ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿದ್ದಾರೆ ಜೊತೆಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಬಾಳೆಕಾಯಿ ಹೇಳಿದರು.
ಕಾರಣ ಶಾಸಕರು ತಂದ ಹಲವಾರು ಯೋಜನೆಗಳನ್ನ ಇಂದು ಕ್ಷೇತ್ರ ಮರೆಯುವಂತಿಲ್ಲ. ಯಾಕೆ ಅಂದ್ರೆ ಬದುಕಿನುದ್ದಕ್ಕೂ ಸ್ವಾಮಿ ವಿವೇಕಾನಂದರು ಜಗತ್ತಿಗೆ ತೋರಿಸಿಕೊಟ್ಟ ಸತ್ಯ ಮಾರ್ಗ, ಗುರು ಮಾರ್ಗ, ಶಿಕ್ಷಣ ಮಾರ್ಗ, ಅಭಿವೃದ್ಧಿ ಮಾರ್ಗವನ್ನೇ ಇಂದು ನಮ್ಮ ಇಡೀ ದೇಶ ಅನುಸರಿಸುತ್ತಿದೆ. ಜೊತೆಗೆ ಅದೇ ಮಾರ್ಗವನ್ನೆ ಇಂದು ನಮ್ಮ ಕಿತ್ತೂರು ಕ್ಷೇತ್ರ ಕೂಡಾ ಅನುಸರಿಸುತ್ತಿದ್ದೆ ಅಂದ್ರೆ ಅದು ಸ್ವಾಮಿ ವಿವೇಕಾನಂದ.
ಎಂದ ಅವರು ಜೊತೆಗೆ ಇಡೀ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲ್ಲೂ ಇದ್ದ ಅನಿಷ್ಟ ಪದ್ಧತಿಯಾದ ಬಯಲು ಶೌಚಾಲಯ ಪದ್ದತಿಯನ್ನು ಹೋಗಲಾಡಿಸಿ ಕೋಟ್ಯಾಂತರ ಶೌಚಾಲಯಗಳನ್ನು ನಿರ್ಮಿಸಿದ್ದು ಮೋದಿ. ಹಾಗೇ ದೇಶದಲ್ಲಿ ಮಹಿಳೆಯರು ತಲೆ ತಗ್ಗಿಸಬಾರದು ತಲೆ ಎತ್ತಿ ನಡೆಯಬೇಕು ಅವರು ಕೂಡಾ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಮಹಿಳೆಯರಿಗಾಗಿ ಸಾಕಷ್ಟು ಮಹಿಳಾ ಪರ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ.
ಮತ್ತು ಅದೇ ಮಾರ್ಗದಲ್ಲೇ ಇಂದು ಮಾಂತೇಶ ದೊಡ್ಡಗೌಡರ ಇತಿಹಾಸ ಮರೆಯದಂತಹ ಮರು ನಿರ್ಮಾಣದ ಕೋಟೆ, ಕಿತ್ತೂರು ಕರ್ನಾಟಕ, ಬಸ್ ಡಿಪೋ, ಶಾಲೆಗಳ ಉತ್ತೇಜನ, ಸುಸಜ್ಜಿತ ರಸ್ತೆಗಳ ನಿರ್ಮಾಣ, ಇಡೀ ಕ್ಷೇತ್ರದ ಪ್ರತಿ ಗ್ರಾಮದಲ್ಲಿಯೂ ನೀರಾವರಿ ಯೋಜನೆಗೆ ಉತ್ತೇಜನ ಹೀಗೆ ಹತ್ತು ಹಲವಾರು ಯೋಜನೆಗಳಿಗಾಗಿ 2400 ಕೋಟಿಗೂ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತಂದು ಉತ್ತಮ ಮಾದರಿ ಕ್ಷೇತ್ರವನ್ನ ಇಂದು ನಮ್ಮ ನಿಮ್ಮಲ್ಲರ ನೆಚ್ಚಿನ ಶಾಸಕರಾದ ಮಾಂತೇಶ ದೊಡ್ಡಗೌಡರ ಕಿತ್ತೂರು ಕ್ಷೇತ್ರದಲ್ಲಿ ಮಾಡಿದ್ದಾರೆ ಜೊತೆಗೆ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಬಾಳೆಕಾಯಿ ತಮ್ಮ ಭಾಷಣದಲ್ಲಿ ಹೇಳಿದರು.
ವರದಿ ಮಹಾಂತೇಶ್ ಬಿ ಕೆ
9844101425
ಇದೇ ಸಂದರ್ಭದಲ್ಲಿ ಕಿತ್ತೂರು ಮತಕ್ಷೇತ್ರದ ಯುವ ಮೋರ್ಚಾದ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು, ಹಿರಿಯ ಮತ್ತು ಕಿರಿಯ ಸ್ವಾಮಿಗಳು, ಕಿತ್ತೂರು ಪ್ರಾಧಿಕಾರದ ಸದಸ್ಯರಾದ ಉಳ್ಳವಪ್ಪಾ ಉಳ್ಳಾಗಡ್ಡಿ, ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ, ಜೊತೆಗೆ ಸಾವಿರಾರು ಬೆಂಬಲಿಗ ಕಾರ್ಯಕರ್ತರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಿತ್ತೂರು ಮತಕ್ಷೇತ್ರದ ಸಂಪಗಾವ ಗ್ರಾಮದಲ್ಲಿ ವಿವೇಕ್ ಸಂಕಲ್ಪ ಯಾತ್ರೆಗೆ ಸೇರಿದ ಬೃಹತ್ ಜನಸ್ತೋಮ... ಕಾರ್ಯಕ್ರಮದಲ್ಲಿ ಬೇರೆ ಬೇರೆ ಪಕ್ಷ ತೊರೆದು ನೂರಾರು ಕಾರ್ಯಕರ್ತರು ಶಾಸಕ ಮಾಂತೇಶ ದೊಡ್ಡಗೌಡರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ.
0 Comments