ಹೌದು ವೀಕ್ಷಕರೇ ನಿಚ್ಚನಕಿಯಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಕಾರು ಚಾಲಕನ ತಪ್ಪಿನಿಂದ ಜನರು ತಪ್ಪು ತಿಳಿದುಕೊಂಡಿರುತ್ತಾರೆ ಅದು ಸಾರಿಗೆ ಬಸ್ ಅಲ್ಲ ಅದು ಕಾರು ನಿನ್ನೆ ಬೆಳಗಿನ ಜಾವ ಶಾಲಾ ವಿದ್ಯಾರ್ಥಿನಿಯರು ಬಸ್ಸು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲವೆಂದು ಬಸ್ಟ್ಯಾಂಡಿನಲ್ಲಿ ಪ್ರತಿಭಟನೆ ನಡೆಸಿದರು ಪ್ರತಿಭಟನೆ ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ಈ ದುರಂತ ಸಂಭವಿಸಿದೆ ಅದಕ್ಕಾಗಿ ಇವತ್ತು ಕಿತ್ತೂರು ಶಿವನೂರು ಗ್ರಾಮದಲ್ಲಿ ವಿದ್ಯಾರ್ಥಿಯ ಸಾವಿನ ಸುದ್ದಿ ಕೇಳಿ ಅಖಂಡ ಕರ್ನಾಟಕ ರೈತ ಸಂಘ ಮುಖಂಡರಾದ ಆಫೀಸ್ ತಳವಾಯಿ ನೇತೃತ್ವದಲ್ಲಿ ಶಿವನೂರು ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರು ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು ಮಾಜಿ ಶಾಸಕರು ಡಿ ಬಿ ನಾಮ್ದಾರ್ ಹಬೀಬ್ ಶಿಲೆದಾರ್ ಕಾಂಗ್ರೆಸ್ ಮುಖಂಡರು ಮತ್ತು ಬಿಷ್ಟಪ್ಪ ಸಿಂದೆ ಮಡಿವಾಳಪ್ಪ ವರ್ಗನ್ನವರ್ ಜೈರುದಿನ್ ಜಮಾದಾರ್ ಪಕೀರಪ್ಪ ಚಾಂಗಟೀ ಕಾಂಗ್ರೆಸ್ ಮುಖಂಡರು ಬಾಬಾಸಾಹೇಬ್ ಪಾಟೀಲ್ ರೋಹಿಣಿ ಪಾಟೀಲ್ ಇನ್ನೂ ಅನೇಕ ಮುಖಂಡರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು ಮಾಜಿ ಶಾಸಕರು ಡಿ ಬಿ ಇನಾಮ್ದಾರ್ ಅವರು 1 ಲಕ್ಷ ಪರಿಹಾರ ಘೋಷಿಸಿದರು ಮತ್ತು ಕಾಂಗ್ರೆಸ್ ಮುಖಂಡರಾದ ಹಬೀಬ್ ಶಿಲೆದಾರ 1 ಲಕ್ಷ ಪರಿಹಾರ ಘೋಷಿಸಿದರು ಈ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು ಕಿತ್ತೂರಿನ ತಹಸಿಲ್ದಾರ್ ತಕ್ಷಣ ಬಂದು ಎಲ್ಲರೊಂದಿಗೆ ಚರ್ಚಿಸಿ ಎರಡೇ ದಿನದಲ್ಲಿ ಪರಿಹಾರ ಘೋಷಣೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಆಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆದರು
0 Comments