kittur vijay news.ಬೆಳಗಾವಿ ಕಾಕತಿ ಪೊಲೀಸ್‌ರಿಂದ ಬೈಕ್ ಕಳ್ಳನ ಬಂಧನ

ಕಿತ್ತೂರು ವಿಜಯ ಸುದ್ದಿ ಬೆಳಗಾವಿ: ಒಂದು ಬೈಕ್ ಪತ್ತೆ ಹಚ್ಚಲು ಹೋಗಿ ಓರ್ವ ಕಳ್ಳನಿಂದ 9 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕಳ್ಳತನವಾದ ಬಗ್ಗೆ ನೀಡಿದ ದೂರಿನ ಮೇರೆಗೆ ಕಾಕತಿ ಪೊಲೀಸ್ ಠಾಣೆ ಮೊ. ಸಂ. 257/2025 ಕಲಂ 303(2) ಬಿ.ಎನ್.ಎಸ್ ಆಕ್ಟ್-2023 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ಮಾಡಿದ ಕಾಕತಿ ಪೊಲೀಸರು, ಮುಜಿಪ್ ಮಂಜೂರ ಅಹಮ್ಮದ, ಶೇಖ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ 9 ಬೈಕ್‌ಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ.

Post a Comment

0 Comments