ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೀರೇಶ್ವರ ಸ್ವಾಮಿಗಳು, ಸಿದ್ದೇಶ್ವರ ಸ್ವಾಮಿಗಳ ಸರಳ ಜೀವನ ಹಾಗು ಜ್ಞಾನ ದಾಸೋಹದ ಕುರಿತು ಮಾತನಾಡಿ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಾದ್ಯಾಪಕರಾದ ಶ್ರೀಶೈಲ ಅಂಗಡಿ ಮಾತನಾಡಿ ಸಿದ್ದೇಶ್ವರ ಶ್ರೀಗಳ ಕುರಿತ ಕವನ ವಾಚನ ಮಾಡಿದರು.ವಿಜ್ಞಾನ ಶಿಕ್ಷಕರಾದ ಎಸ್, ಎಮ್, ಹಳಂಗಳಿ, ಶ್ರೀಗಳ ಜೊತೆಗಿದ್ದ ತಮ್ಮ ಒಡನಾಟವನ್ನು ಹಂಚಿಕೊಂಡರು. ಕೆ,ಎಸ್,ತಳವಾರ ಕಾರ್ಯಕ್ರಮ ನಿರೂಪಿಸಿದರು. ಎಸ್, ಬಿ, ಹಾರುಗೊಪ್ಪ ವಂದಿಸಿದರು.
ಎಸ್,ಬಿ,ಗಂಗಾವತಿ, ಕುಮಾರ ಅರಳಿಮರದ, ಎಲ್,ಆರ್, ನಾಯಕ, ಆರ್,ಎಫ್,ಜೈನರ್, ಕೆ,ಬಿ, ಕುಂಬಾರ, ಆರ್,ಬಿ,ಪಾಟೀಲ ಉಪಸ್ಥಿತರಿದ್ದರು.
0 Comments