ಕಿತ್ತೂರು ವಿಜಯ ಸುದ್ದಿ.ಪಾಕಿಸ್ತಾನ ಸೇನೆ ಭಾರತದ ಮೇಲೆ ನಿರಂತರವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಗಡಿ ರಾಜ್ಯ, ನಗರಳನ್ನು ಗುರಿಯಾಗಿಸಿ ಶೆಲ್, ಡ್ರೋನ್ ದಾಳಿ ನಡೆಸಿದೆ. ನಿನ್ನೆ ಗುರುವಾರ ಪಾಕಿಸ್ತಾನ ನಡೆಸಿದ ದಾಳಿ ಹಗೂ ಅದನ್ನು ವಿಫಲ ಗೊಳಿಸಿರುವ ಬಗ್ಗೆ ಭಾರತೀಯ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.ಜಮ್ಮುವಿನಲ್ಲಿ ಸುದ್ದಿಗೊಷ್ಠಿ ನಡೆಸಿದ ಕರ್ನಲ್ ಸೋಫಿಯಾ ಖುರೇಶಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಗುರುವಾರ ರಾತ್ರಿ ಪಾಕಿಸ್ತಾನ ಸೇನೆ ಭಾರತದ 36 ಸ್ಥಳಗಳಲ್ಲಿ ಡ್ರೋನ್ ಹಾಗೂ ಶೆಲ್ ದಾಳಿ ನಡೆಸಿದೆ.
ಪಂಜಾಬ್ ನ ಗುರುದ್ವಾರ, ಚರ್ಚ್ ಗಳನ್ನು ಗುರ್ಯಾಗಿಸಿ ದಾಳಿ ನಡೆಸಿದ್ದು, ಈ ವೇಎ ಇನ್ನರು ಮಕ್ಕಳು ಸಾವನ್ನಪ್ಪಿದ್ದಾರೆ. ಭಟಿಂಡಾ ಸೇನಾ ನೆಲೆ ಮೇಲೆ ದಾಳಿಗೆ ಯತ್ನಿಸಿದೆ. ಜಮ್ಮು, ಉರಿ ಸೆಕ್ಟರ್, ಅಖ್ನೂರ್. ರಜೌರಿ ಸೇರಿದಂತೆ ಗಡಿ ಭಾಗದಲ್ಲಿ ನಿರಂತರವಾಗಿ ಶೆಲ್ ದಾಳಿ ನಡೆಸಿದೆ. ಅಲ್ಲದೇ ಭಾರತೀಯ ಮಿಲಿಟರಿ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿಗೆ ಯತ್ನ ನಡೆಸಿತ್ತು. ಭಾರತೀಯ ಸೆನೆ ಪಾಕಿಸ್ತಾನದ ದಾಳಿಗಳನ್ನು ವಿಫಲಗೊಳಿಸಿದೆ. ಪಕಿಸ್ತಾನ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಪಾಕಿಸ್ತಾನದ ಪ್ರತಿ ದಾಳಿಗೂ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ.
0 Comments