ಕಿತ್ತೂರು ವಿಜಯ ಸುದ್ದಿ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ. ಯೋಜನೆಯಿಂದ ನಡೆಯುತ್ತಿರುವ. ಡಿ ಜಿ ಪೇ ಕಾರ್ಯಕ್ರಮ ಉದ್ಘಾಟನೆಗೊಂಡಿತು


 ಕಿತ್ತೂರು ವಿಜಯ ಸುದ್ದಿ.ಚನ್ನಮ್ಮನ  ಕಿತ್ತೂರು 

ಕಿತ್ತೂರು.ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿರುವ. ಶಿವನೂರು ವಲಯದ  ಹಿರೇನಂದಿಹಳ್ಳಿ ಕಾರ್ಯಕ್ಷೇತ್ರದಲ್ಲಿ DIGIPAY ಕಾರ್ಯಕ್ರಮ ನೆರವೇರಿತ್ತು.ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಈರಪ್ಪನ ಫಕೀರಣ್ಣನವರ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಸಿದ್ದರಾಮ ಅಪೂಜಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ಈರಪ್ಪ ದಾಸನಕೊಪ್ಪ, ಹಿರೇನಂದಿಹಳ್ಳಿ ಗ್ರಾಮ ಪಂಚಾಯತನ PDO ರವರಾದ ಶ್ರೀಮತಿ ಮೇರಿ ನಾಗಯ್ಯ ಎಲತ್ಪತ್ತಿ ಹಾಗೂ ಮಾನ್ಯ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀಯುತ ಸಂದೀಪ್. ಡಿ  ಸರ್,  ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.DIGIPAY ಕಾರ್ಯಕ್ರಮದ ಬಗ್ಗೆ ಮಾನ್ಯಕ್ಷೇತ್ರ.ಯೋಜನಾಧಿಕಾರಿಗಳು  ಮಾಹಿತಿ ಮಾರ್ಗದರ್ಶನ ನೀಡಿದರು, AEPS ಹಾಗೂ MATM ಮೂಲಕ ಹಣ ಡ್ರಾ ಮಾಡಿ  ಸದಸ್ಯರಿಗೆ ಹಣ ಹಾಗೂ ರಸೀದಿ ವಿತರಣೆ ಮಾಡಿದರು.ಶಿವನೂರು ವಲಯ ಮೇಲ್ವಿಚಾರಕರಾದ ಶ್ರೀಮತಿ ಸುಮಂಗಲ , ಹಣಕಾಸು ಪ್ರಬಂಧಕರಾದ ಶ್ರೀ ಸಂದೀಪ್, CSC ತಾಲೂಕ ನೋಡಲ್ ಅಧಿಕಾರಿ ಶ್ರೀ ಪ್ರತಾಪ್ S.P,  ಒಕ್ಕೂಟ ಪದಾಧಿಕಾರಿಗಳು, ಸ್ವ ಸಹಾಯ ಸಂಘದ ಸದಸ್ಯರು, ಸೇವಾ ಪ್ರತಿನಿಧಿಗಳು,  csc ಸೇವಾದಾರರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಯೋಜನೆಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಈರಪ್ಪನ. ಫಕೀರಪ್ಪನವರ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರಿಗೆ ಅವರ ಬ್ಯಾಂಕ್ ಖಾತೆಯಿಂದ ಸುಲಭವಾಗಿ ಹಣ ಹಿಂಪಡೆಯುವ ಉಚಿತ ಯೋಜನೆ. ಕಾರ್ಯಕ್ರಮ ಯೋಜನೆ ಅನುಷ್ಠಾನಗೊಳಿಸಿದ್ದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Post a Comment

0 Comments