ಕಿತ್ತೂರುವಿಜಯಸುದ್ದಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್.ಚನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟೆ ವಲಯದ 1008.ಆದಿನಾಥ್ ಜೈ ಜಿನೇಂದ್ರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಎರಡು ಲಕ್ಷ ರೂಪಾಯಿ ಡಿಡಿ ಯನ್ನು ಮಾನ್ಯ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ ಸರ್ ಹಾಗೂ ಚನ್ನಮ್ಮನ್ ಕಿತ್ತೂರು ತಾಲೂಕಿನ ಯೋಜನಾಧಿಕಾರಿಗಳು ಶ್ರೀ.ಸಂದೀಪ್. ಡಿ. ಸರ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶಾಂತವ್ವ,ಕಮ್ಮಾರ್, ಕಮಿಟಿ ಅಧ್ಯಕ್ಷರು ಪಾರಿಸ, ಕಾರ್ಯದರ್ಶಿ ರಾಜು ಕುರಕುರಿ ಗ್ರಾಮ ಪಂಚಾಯತ್ ಸದಸ್ಯರು ಮೀನಾಕ್ಷಿ,ಮಲ್ಲಪ್ಪ ಓಮಣ್ಣವರ. ಅವರ ಸಮ್ಮುಖದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರಿಗೆ 2 ಲಕ್ಷ ರೂ ಡಿ. ಡಿ.ವಿತರಣೆಯನ್ನು ಮಾಡಿದರು. ಮಾನ್ಯ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವ ದಾನಗಳ ಬಗ್ಗೆ ಮತ್ತು ಪುರಾತನ ದೇವಸ್ಥಾನಗಳ ಅಭಿವೃದ್ಧಿ ಮಾಡುವ ಬಗ್ಗೆ ಮತ್ತು ಪೂಜ್ಯರ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಂಘದ ಸದಸ್ಯರು ವಲಯದ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿ ಪ್ರತಿನಿಧಿಯವರು ಉಪಸ್ಥಿತರಿದ್ದರು.
0 Comments