ಕಿತ್ತೂರು ವಿಜಯ ಸುದ್ದಿ. ಚಕೋರ ಬೆಳಗಾವಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮ ನಾಳೆ.ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ


 ಕಿತ್ತೂರು ವಿಜಯ ಸುದ್ದಿ. ಚನ್ನಮ್ಮನ ಕಿತ್ತೂರು: ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆ ಉದ್ಘಾಟನೆ ಕಾಠ್ಯಕ್ರಮ ಇಲ್ಲಿನ ಕಲ್ಮಠದ ಚಂದರಗಿ ಸಭಾ ಭವನದಲ್ಲಿಡಿ. 14 ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಅಕಾಡೆಮಿಯ ಸದಸ್ಯ ಸಂಚಾಲಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ತಿಳಿಸಿದ್ದಾರೆ. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್‌.ಮುಕುಂದರಾಜ್ ಉದ್ಘಾಟಿಸುವರು. ಉಪನ್ಯಾಸಕಿ ಡಾ. ಪ್ರಜ್ಞಾ ಮತ್ತಿಹಳ್ಳಿ, ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರಿ, ಅಕಾಡೆಮಿ ರಜಿಸ್ಟರ್ ಕರಿಯಪ್ಪ ಎನ್., ಕಸಾಪ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ, ಎಸ್.ಬಿ.ಎಂ. ಸರಕಾರಿ ಬಾಲಕಿಯರ ಪ್ರೌಢ ಶಾಲೆ ಉಪ ಪ್ರಾಂಶುಪಾಲ ಮಹೇಶ ಚನ್ನಂಗಿ, ಬೆಳಗಾವಿ ಜಿಲ್ಲಾ ಚಕೋರ ವೇದಿಕೆ ಸಂಚಾಲಕ ನಾಗೇಶ ನಾಯಕ ಇತರರು ಪಾಲ್ಗೊಳ್ಳುವರು. 

Post a Comment

0 Comments