ಶ್ರೀ ಕಲ್ಮಠದಲ್ಲಿ ಬುಧವಾರ ಮುಂಜಾನೆ ರಕ್ತದಾನ ಶಿಬಿರ ಮತ್ತು ಗುರುವಂದನಾ ಕಾರ್ಯಕ್ರಮ.
ಚನ್ನಮ್ಮನ ಕಿತ್ತೂರು:- ಕಿತ್ತೂರಿನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ಬುಧವಾರ
ದಿನಾಂಕ 11 ರಂದು ಮುಂಜಾನೆ 10 ಗಂಟೆಗೆ ಪರಮ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ 15 ನೆಯ ಪಟ್ಟಾಧಿಕಾರದ ವಾರ್ಷಿಕೋತ್ಸವದ ಪ್ರಯುಕ್ತವಾಗಿ ರಕ್ತದಾನ ಶಿಬಿರ ಮತ್ತು ಗುರುವಂದನಾ ಸಮಾರಂಭ ಜರುಗಲಿದೆ ಎಂದು ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಮಠದ ಸದ್ಭಕ್ತರು, ಶ್ರೀ ಮಠದ ಹಳೆಯ ವಿದ್ಯಾರ್ಥಿ ವೃಂದ, ರಾಜಗುರು ಕಾನ್ವೆಂಟ್ ಶಾಲೆ, ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಕಿತ್ತೂರು ಕರ್ನಾಟಕ ಸೌಹಾರ್ದ ಸಹಕಾರಿ ಸಂಘ ನಿ, ಕಿತ್ತೂರಿನ ಜಂಗಮ ಯುವ ವೇದಿಕೆ ಸಂಘ ಮತ್ತು ವಿಶ್ವ ಹಿಂದೂ ಪರಿಷದ್ ಭಜರಂಗದಳ ಚನ್ನಮ್ಮನ ಕಿತ್ತೂರು ಇವರ ಸಂಯುಕ್ತ ಅಶ್ರಯದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ರೋಟರಿ ರಕ್ತ ಭಂಡಾರ ಧಾರವಾಡ ಮತ್ತು ರೋಟರಿ ಕ್ಲಬ್ ಮಿಟ್ಟಾನ್ ಚಾರಿಟೇಬಲ್ ಟ್ರಸ್ಟ್ ಇವರ ಸಹಯೊಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಿತ್ತೂರ ನಾಡಿನ ಜನತೆ ಭಾಗವಹಿಸಬೇಕೆಂದು ಸಂಯೋಜಕರ ಪರವಾಗಿ ಡಾ.ಎಸ್.ಬಿ.ದಳವಾಯಿ ಮನವಿ ಮಾಡಿದ್ದಾರೆ.

 
0 Comments