ಭಾರತೀಯ ಕಿಸಾನ್ ಸಂಘ ಉತ್ತರ ಪ್ರಾಂತ ಬೈಲಹೊಂಗಲ ತಾಲೂಕಾ ನೂತನ ಸಮಿತಿ ರಚನೆ.




ಕಿತ್ತೂರು ವಿಜಯ ನ್ಯೂಸ್ 

 ಬೈಲಹೊಂಗಲ: ಭಾರತೀಯ ಕಿಸಾನ್ ಸಂಘ ಉತ್ತರ ಪ್ರಾಂತ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಾಲೂಕಾ ಸಮಿತಿಯನ್ನು ಇತ್ತಚೇಗೆ (ಅಗಷ್ಟ 21)   ಬೈಲಹೊಂಗಲದಲ್ಲಿರುವ ಸೋಮೇಶ್ವರ ಸಭಾಂಗಣದಲ್ಲಿ ರಚಣೆಮಾಡಲಾಯಿತು.

ಬೈಲಹೊಂಗಲ ತಾಲೂಕಾ ಅಧ್ಯಕ್ಷರಾಗಿ ಗೋವನಕೊಪ್ಪ ಗ್ರಾಮದ ಮಹಾಂತೇಶ್ ಹೊಂಗಲ, ಉಪಾಧ್ಯಕ್ಷರಾಗಿ ವಕ್ಕುಂದ ಗ್ರಾಮದ ಅಜ್ಜಪ್ಪ ಬ ಭದ್ರಶೆಟ್ಟಿ  ಮತ್ತು ಹಿರೇಕೊಪ್ಪ ಗ್ರಾಮದ ಶ್ರೀಕಾಂತ್ ಸುಂಕದ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಮರಕುಂಬಿ ಗ್ರಾಮದ ಪ್ರದೀಪ್. ಚ. ಮುರ್ಕಿಬಾವಿ. ಸಹ ಕಾರ್ಯದರ್ಶಿಯಾಗಿ ದೊಡವಾಡ ಗ್ರಾಮದ ಸಂತೋಷ ಚೌಡಣ್ಣವರ. ಯುವ ಪ್ರಮುಖ ನಿರ್ಗುನ್ ರೇವಣ್ಣವರ. ತಾಲೂಕಾ ಪ್ರಮುಖರಾಗಿ ಕರೆಪ್ಪ ಗೌಡರ, ಸೋಮನಿಂಗಪ್ಪ ತುಪ್ಪದ, ಶಿವಾನಂದ ಯಡಹಳ್ಳಿ, ರಮೇಶ್ ಹಾದಿಮನಿ, ರಾಜು ಅಂದಾನಶೆಟ್ಟಿ, ಅಜ್ಜಪ್ಪ ತಳವಾರ, ಚಂದ್ರು ಹೊಂಗಲ, ಚಿದಾನಂದ್ ನರೇಂದ್ರ, ಈರನಗೌಡ ಪಾಟೀಲ್, ಶಂಕರ ಮೇಟಿಹಾಳ ಆಯ್ಕೆಯಾಗಿದ್ದಾರೆ.


ನಿಕಟಪೂರ್ವ ಅಧ್ಯಕ್ಷ ಶಂಕರ ಅಬ್ಬಾರ ನೂತನ ಸದಸ್ಯರುಗಳಿಗೆ  ಜವಾಬ್ದಾರಿಗಳನ್ನು ಘೋಷಣೆ ಮಾಡಿದರು, 

ಈ ವೇಳೆ  ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ತಾಲೂಕಾ ದಂಡಾಧಿಕಾರಿ ಎಚ್.ಎನ್. ಶಿರಹಟ್ಟಿ ಹಾಗೂ  ಕೃಷಿ ಅಧಿಕಾರಿ ಬಸವರಾಜ ದಳವಾಯಿ ಅವರುಗಳಿಗೆ  ನೂತನವಾಗಿ  ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿಯನ್ನು ಸಲ್ಲಿಸಲಾಯಿತು.

ಸ್ಥಳದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ. ಪ್ರಾಂತ ಅಧ್ಯಕ್ಷ ವಿವೇಕ ಮೋರೆ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಶಿವಾನಂದ ಸರದಾರ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಗಾಣಗಿ, ಪ್ರಮುಖರಾದ ಮಲ್ಲಪ್ಪ ಹುಂಡನವರ. ರಾಮರಾಜ ಇನಾಮದರ ಮತ್ತು ತಾಲೂಕಿನ ರೈತ ಮುಖಂಡರು ಸೇರಿದಂತೆ ಇತರರು ಪಾಲ್ಗೊಂಡಿದ್ದರು 

Post a Comment

0 Comments