ಕಿತ್ತೂರ ವಿಜಯ
ಚನ್ನಮ್ಮನಕಿತ್ತೂರು: ಜಿಲ್ಲೆಯ ಗೋಕಾಕ ತಾಲೂಕಿನ ದೇವೆಗೌಡನಹಟ್ಟಿ ಗ್ರಾಮದ ಭರಮಪ್ಪ ಸಿದ್ದಪ್ಪ ತಡಸನೂರ (36) ಎಂಬ ವ್ಯಕ್ತಿ ಚನ್ನಮ್ಮನ ಕಿತ್ತೂರ ತಾಲೂಕಿನ ಹುನಶಿಕಟ್ಟಿ ಗ್ರಾಮದ ರಮೇಶ ಮಾರಪ್ಪ ಕಿತ್ತೂರ ಇವರ ಜಮೀನದಲ್ಲಿ ಕುರಿ ಹಿಂಡು ತರಬಿದ್ದನು.
ಮಾರ್ಚ 19 ರಂದು ರಾತ್ರಿ 10-30 ಗಂಟೆಗೆ
ಮಲಗಿಕೊಂಡವನು ಮಾರ್ಚ 20 ರ ಬೆಳಗಿನ 6 ಗಂಟೆಯ ನಡುವಿನ ಅವದಿಯಲ್ಲಿ ಎಲ್ಲಿಯೋ
ಹೋಗಿ ಮರಳಿ ಬಾರೆದೆ ಕಾಣೆಯಾಗಿರುತ್ತಾನೆ.
ಈ ಕುರಿತು ಕಾಣೆಯಾದ ವ್ಯಕ್ತಿಯ ಹೆಂಡತಿ ಗಂಗವ್ವ ಭರಮಪ್ಪ ತಡಸನೂರ ಏಪ್ರಲ್ 01 ರಂದು ಕಿತ್ತೂರ
ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಈ ಕುರಿತು ಪಿಎಸ್ಐ ಪ್ರವೀಣ ಗಂಗೋಳ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡು ಮೇಲೆ ಕಾಣುವ ಭಾವಚಿತ್ರದಲ್ಲಿ ಇರುವ ಮನುಷ್ಯ ಯಾರಿಗಾದರೂ ಪತ್ತೆಯಾದಲ್ಲಿ ಕಿತ್ತೂರ ಪೊಲೀಸ ಠಾಣೆಯ 08288 286433 ನಂಬರಿಗೆ ಕರೆ ಮಾಡಿ ತಿಳಸಲು ಮನವಿ ಮಾಡಿದ್ದಾರೆ.
0 Comments