ಲೋಕಸಭಾ ಚುನಾವಣೆ; ಖಾನಾಪೂರ ಮತಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡ ವಿಶ್ವೇಶ್ವರ ಹೆಗಡೆ ಕಾಗೇರಿ

ಕಿತ್ತೂರ ವಿಜಯ 
ಖಾನಾಪುರ: ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಖಾನಾಪುರ ಮತಕ್ಷೇತ್ರದ ಗಾಂಧಿನಗರ, ಇಡಲಹೊಂಡ, ಗರಲಗುಂಜಿ, ಕುಪ್ಪತಗಿರಿ, ನಂದಗಡ, ಗಂದಿಗವಾಡ ಮತ್ತು ಖಾನಾಪುರ ಸೇರಿದಂತೆ ಇನ್ನೂ ಅನೇಕ ಸ್ಥಳಗಳಲ್ಲಿ ಪ್ರಚಾರ ಸಭೆ ನಡೆಸಿದರು. 
ಈ ವೇಳೆ ಶರಣಿ ಕಕ್ಕೇರಿ ಶ್ರೀ ಬಿಷ್ಟಾದೇವಿ ದೇವಸ್ಥಾನ ಮತ್ತು ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ವೀರ ಮರಣ ಹೊಂದಿದ ಸ್ಥಳಕ್ಕೆ ಭೇಟಿ ನೀಡಿ ದರ್ಶನ ಪಡೆದರು. 
ಈ ವೇಳೆ ಶಾಸಕರಾದ ವಿಠ್ಠಲ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟಿಲ, ಭಾಜಪಾ ಬೆಳಗಾವಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ಪ್ರಮೋದ ಕೊಚೇರಿ, ತಾಲೂಕಾ ಅಧ್ಯಕ್ಷ ಸಂಜಯ ಕುಬಾಲ, ಮಿತ್ರ ಪಕ್ಷ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ, ನಾಸೀರ್ ಬಾಗವಾನ ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ವಿವಿಧ ಗ್ರಾಮಗಳ ಗಮತದಾರರು ಸೇರಿದಂತೆ ಇತರರು ಇದ್ದರು.

Post a Comment

0 Comments