ಕಿತ್ತೂರ ವಿಜಯ
ಚನ್ನಮ್ಮನ ಕಿತ್ತೂರು: ರಾಷ್ಟ್ರೀಯ ಹೆದ್ದಾರಿ 4 ಮೇಲೆ ಶಿವಾ ಪೆಟ್ರೋಲ್ ಪಂಪ್ ಹತ್ತಿರ ಎಸ್ ಎಸ್ ಟಿ ಸ್ಥಾಯಿ ಕಣ್ಗಾವಲು ತಂಡದವರು ರೂ 346240 ಹಣವನ್ನು ಸೀಜ್ ಮಾಡಿದ್ದಾರೆ.
ಉಡಪಿಯ ವ್ಯಾಸರಾವ ವೆಂಕಟರಾವ ಶ್ಯಾನಭಾಗ ಅವರಿಗೆ ಸೇರಿದ್ದು ಇದ್ದು ತನ್ನ ಸ್ವಂತ ವಾಹನ ಎರ್ಟಿಗಾ ಕಾರನಲ್ಲಿ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ.
ಈ ಕುರಿತು ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿ ಎಸ್ ಐ ಪ್ರವೀಣ ಗಂಗೋಳ ತಿಳಿಸಿದ್ದಾರೆ.
ಈ ವೇಳೆ ತುರಮರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಭಾಷ ದಾನಪ್ಪನವರ, ಕುಲವಳ್ಳಿ ಗ್ರಾಪಂ ಸಿಬ್ಬಂದಿ ಯುನಸ್ ಹೊಂಗಲ, ಕಲಭಾವಿ ಗ್ರಾಪಂ ಸಿಬ್ಬಂದಿ ಪ್ರವೀಣ ಸೋಮನಟ್ಟಿ, ತಿಗಡೊಳ್ಳಿ ಗ್ರಾಪಂ ಸಿಬ್ಬಂದಿ ರವೀಂದ್ರ ಪಾಟೀಲ ಇದ್ದರು.
0 Comments